ಜುಲೈ 26 ಶನಿವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... School Holiday
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಅಂದಹಾಗೆ ಈ ರೀತಿಯ ನ್ಯೂಸ್ ಕೇಳೋದಕ್ಕೆ ಕಾಲೇಜು & ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ಖುಷಿ ಆಗುತ್ತೆ ಅಲ್ವಾ? ಅದರಲ್ಲೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ 1 ತಿಂಗಳಿಂದ ಸಾಲು ಸಾಲು ರಜೆಗಳು ಘೋಷಣೆ ಆಗಿವೆ. ಮಕ್ಕಳಿಗೆ ಹೀಗೆ ರಜೆ ಸಿಕ್ಕ ವಿಚಾರ ಸಖತ್ ಖುಷಿ ಕೊಡುತ್ತಿರುವ ಸಮಯದಲ್ಲೇ ಮತ್ತೊಂದು ಸುದ್ದಿ ಇದೀಗ ಹಬ್ಬಿದೆ. ಹೀಗಿದ್ದಾಗಲೇ, ಜುಲೈ 26 ಶನಿವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲೆ & ಕಾಲೇಜುಗಳು ಈಗಿನ್ನೂ 2 ತಿಂಗಳ ಹಿಂದೆ ಶುರುವಾಗಿವೆ... ಹೀಗಿದ್ದರೂ ಪದೇ ಪದೇ ಶಾಲೆ ಮತ್ತು ಕಾಲೇಜುಗಳಿಗೆ ಹಲವು ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿರುವುದು ಒಂದೆಡೆ ವಿದ್ಯಾರ್ಥಿಗಳಿಗೆ ಖುಷಿ ನೀಡಿದೆ. ಆದರೆ ಪದೇ ಪದೇ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತಿರುವುದು ವಿದ್ಯಾರ್ಥಿಗಳ ತಂದೆ & ತಾಯಿ ಸೇರಿದಂತೆ ಪೋಷಕರಿಗೆ ಒಂದಷ್ಟು ಟೆನ್ಷನ್ ಕೊಡುತ್ತಿದೆ. ಇಷ್ಟೆಲ್ಲದರ ನಡುವೆಯೇ ಇದೀಗ ಮತ್ತೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಜುಲೈ 26 ಶನಿವಾರ ಶಾಲಾ & ಕಾಲೇಜುಗಳಿಗೆ ರಜೆ?
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ಘೋರ ಮಳೆಗಾಲ ಶುರುವಾಗಿದ್ದು, ಸತತವಾಗಿ ಮಳೆ ತನ್ನ ಆರ್ಭಟ ತೋರಿಸುತ್ತಿದೆ. ಉಡುಪಿ, ದಕ್ಷಿಣ ಕನ್ನಡ & ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇದೀಗ ಮಳೆ ಅಬ್ಬರ ಜನರನ್ನು ಬೆಚ್ಚಿ ಬೀಳಿಸಿದೆ. ಇದರ ಜೊತೆಗೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲೂ ಭಾರಿ ಮಳೆಯ ಆಘಾತಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಇಷ್ಟಾದರೂ ಮಳೆ ಮಾತ್ರ ಸೈಲೆಂಟ್ ಆಗುತ್ತಿಲ್ಲ, ಬದಲಾಗಿ ಇನ್ನಷ್ಟು ಮಳೆ ಸುರಿಯುತ್ತಿರುವ ಕಾರಣಕ್ಕೆ ಹೊಸ ಚಿಂತೆ ಶುರುವಾಗಿದೆ. ಹೀಗಿದ್ದಾಗಲೇ, ಜುಲೈ 26 ಶನಿವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಮಳೆ.. ಮಳೆ.. ಭಾರಿ ಮಳೆ..!
ಹೌದು, ಜುಲೈ 25 ಶುಕ್ರವಾರ ಕೂಡ ಭಾರಿ ಘೋರವಾಗಿ ಮಳೆ ಬರುತ್ತಿರುವ ಕಾರಣಕ್ಕೆ ಹಲವು ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಮತ್ತೊಂದು ಕಡೆ ಉತ್ತರ ಕರ್ನಾಟಕ ಭಾಗದಲ್ಲಿ ಕೂಡ ಮಳೆ ತನ್ನ ಅಸಲಿ ರೂಪ ತೋರಿಸುತ್ತಿದ್ದು ಈಗಾಗಲೇ ಬೀದರ್, ವಿಜಯಪುರ, ಬಾಗಲಕೋಟೆ & ರಾಯಚೂರು, ಬಳ್ಳಾರಿ ಸೇರಿದಂತೆ ಬೆಳಗಾವಿ, ಹುಬ್ಬಳ್ಳಿ & ಧಾರವಾಡ ಜಿಲ್ಲೆಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಹಾಗಾದ್ರೆ ಯಾವ ಯಾವ ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ? ಮುಂದೆ ಓದಿ.
ಇನ್ನೂ ಹಲವು ದಿನಗಳ ಕಾಲ ಇದೇ ರೀತಿಯಾಗಿ ಕರ್ನಾಟಕದ ಬಹುತೇಕ ಎಲ್ಲಾ ಭಾಗಕ್ಕೆ ಮಳೆ ಮೋಡಗಳು ಅಪ್ಪಳಿಸುವುದು ಕನ್ಫರ್ಮ್ ಆಗಿದೆ. ಈ ಕಾರಣಕ್ಕೆ ಜುಲೈ 26 ಶನಿವಾರ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮುಂಗಾರು ಮಳೆ ಅಬ್ಬರ ಹಿನ್ನೆಲೆ ಜುಲೈ 26 ಉತ್ತರ ಕನ್ನಡ, ಹಾಸನ ಸೇರಿ ಚಿಕ್ಕಮಗಳೂರು ಜಿಲ್ಲೆಗಳ ಹಲವು ತಾಲೂಕುಗಳ ಶಾಲೆಗಳಿಗೆ ಈ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ & ಭಟ್ಕಳ, ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಎನ್‌ಆರ್ ಪುರ, ಕೊಪ್ಪ ತಾಲೂಕು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.












Click it and Unblock the Notifications