School Holiday: ಜುಲೈ 15 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜು ವಿದ್ಯಾರ್ಥಿಗಳು ಭರ್ಜರಿ ಬೇಸಿಗೆ ರಜೆ ಮುಗಿಸಿ, ಕೆಲವು ದಿನಗಳ ಹಿಂದಷ್ಟೇ ವಾಪಸ್ ಬಂದಿದ್ದಾರೆ. ಅದರಲ್ಲೂ ಇನ್ನೇನು ಆಷಾಢ ಮುಗಿದು ಶ್ರಾವಣ ಶುರುವಾಗುತ್ತಿದ್ದು, ಸಾಲು ಸಾಲು ಹಬ್ಬಗಳು ಕೂಡ ಬರಲಿವೆ. ಹೀಗಾಗಿ ನಾಗರಪಂಚಮಿ, ವರಮಹಾಲಕ್ಷ್ಮೀ ಹಬ್ಬ, ಗೌರಿ ಹಬ್ಬ, ಗಣೇಶ ಚತುರ್ಥಿ & ನವರಾತ್ರಿ, ದಸರಾ & ದೀಪಾವಳಿ... ಅಂತಾ ಸಾಲು ಸಾಲು ರಜೆಗಳು ಶಾಲಾ & ಕಾಲೇಜು ವಿದ್ಯಾರ್ಥಿಗಳಿಗೆ ಸಿಗಲಿವೆ. ಹೀಗಿದ್ದಾಗಲೇ, ಜುಲೈ 15 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ರಜೆ ಕೊಡುತ್ತಾ ಹೋದರೆ ಪಾಠ ಮುಗಿಸುವುದು ಕಷ್ಟವಾಗುತ್ತದೆ, ಅದರಲ್ಲೂ ಈಗ ಪಠ್ಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿರುವ ಕಾರಣಕ್ಕೆ ಸಾಲು ಸಾಲು ರಜೆಗಳನ್ನ ಕೊಡುವುದು ಕಷ್ಟವೇ ಸರಿ. ಇಷ್ಟೆಲ್ಲಾ ಒತ್ತಡದ ನಡುವೆ, ಶಿಕ್ಷಕರು & ಪೋಷಕರು ಎಐ ಅಂದ್ರೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಾಲಘಟ್ಟದಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡ್ತಿದ್ದಾರೆ. ಆದಷ್ಟು ಶಾಲಾ & ಕಾಲೇಜುಗಳಿಗೆ ರಜೆಗಳನ್ನ ಕಡಿಮೆ ಕೊಟ್ಟು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಮಯದಲ್ಲೇ, ಜುಲೈ 15 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಜುಲೈ 15 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ?
ಹೌದು, ಜೂನ್ ತಿಂಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳ ಶಾಲಾ & ಕಾಲೇಜು ವಿದ್ಯಾರ್ಥಿಗಳು ಸಾಕಷ್ಟು ರಜೆಗಳನ್ನ ಪಡೆದಿದ್ದರು. ಅನಿವಾರ್ಯ ಕಾರಣಕ್ಕೆ ಸಾಲು ಸಾಲು ರಜೆಗಳನ್ನ ಕರ್ನಾಟಕದ ಹಲವು ಜಿಲ್ಲೆಗಳ ಶಾಲಾ & ಕಾಲೇಜು ವಿದ್ಯಾರ್ಥಿಗಳಿಗೆ ಕೊಡಲಾಗಿತ್ತು. ಇದೀಗ ಇಂತಹದ್ದೇ ಪರಿಸ್ಥಿತಿ 2025 ಜುಲೈ ತಿಂಗಳಲ್ಲಿ ಕೂಡ ಮುಂದುವರಿದಿದೆ. ಅಂದಹಾಗೆ, ಜುಲೈ 15 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ... ಯಾಕೆ ಗೊತ್ತಾ?
ಯಾವ ಕಾರಣಕ್ಕೆ ಶಾಲಾ & ಕಾಲೇಜು ರಜೆ?
ಹೌದು, ಜುಲೈ 14 ಸೋಮವಾರದಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೀಗೆ ಭಾರಿ ಮಳೆ ಮತ್ತಷ್ಟು ಹೆಚ್ಚಾಗುವ ಭೀತಿ ಕೂಡ ಆವರಿಸಿದ್ದು, ಜುಲೈ 15 ಮಂಗಳವಾರ ಮಳೆಯ ಆರ್ಭಟ ಇನ್ನಷ್ಟು ಹೆಚ್ಚಾಗಲಿದೆ. ಬೆಂಗಳೂರು ಸೇರಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ, ಮಲೆನಾಡು ಜಿಲ್ಲೆ ಶಿವಮೊಗ್ಗ, ಕೊಡಗು ಸೇರಿ ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಇದರ ಜೊತೆಯಲ್ಲೇ ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಜುಲೈ 15 ಮಂಗಳವಾರದಿಂದ ಭಾರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಅಲ್ಲದೇ, ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಲಿದ್ದು, ಇದೇ ಕಾರಣಕ್ಕೆ ಇದೀಗ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸ್ಥಿತಿ ಎದುರಾಗುತ್ತಿದೆ. ಆದ್ರೆ ಜುಲೈ 15 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆಯನ್ನ ಘೋಷಣೆ ಮಾಡುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ಹೀಗಾಗಿ ಕಾದು ನೋಡಬೇಕಿದೆ.












Click it and Unblock the Notifications