ಆಗಸ್ಟ್ 8 ಶುಕ್ರವಾರ ಶಾಲಾ & ಕಾಲೇಜಗಳಿಗೆ ರಜೆ ಘೋಷಣೆ... School Holiday

ಶಾಲೆಗೆ ಈ ದಿನ ರಜೆ... ಹಿಂಗೆ ಶಾಲಾ & ಕಾಲೇಜಗಳ ವಿದ್ಯಾರ್ಥಿಗಳು ಆಗಸ್ಟ್ ತಿಂಗಳಲ್ಲಿ ಪದೇ ಪದೇ ರಜೆ ಪಡೆಯುತ್ತಾ ಕುಣಿದಾಡುವ ಅವಕಾಶ ಒದಗಿ ಬಂದಿದೆ. ಯಾಕಂದ್ರೆ ಹಿಂದೂಗಳ ಧಾರ್ಮಿಕ ಆಚರಣೆಗಳು & ಪವಿತ್ರ ಪೂಜೆಗಳು ಶುರು ಆಗುವುದೇ ಬಹುತೇಕ ಆಗಸ್ಟ್ ತಿಂಗಳಲ್ಲಿ. ಆಷಾಢ ಮಾಸ ಮುಗಿದು, ಶ್ರಾವಣ ಶುರುವಾದ ನಂತರ ಸಾಲು ಸಾಲು ಹಬ್ಬಗಳು ಬರುತ್ತವೆ. ಇದೇ ಕಾರಣಕ್ಕೆ ಶಾಲಾ & ಕಾಲೇಜಗಳಿಗೂ ಸಾಲು ಸಾಲು ರಜೆ ಘೋಷಣೆ ಮಾಡಲಾಗುತ್ತದೆ. ಹೀಗಿದ್ದಾಗಲೇ, ಆಗಸ್ಟ್ 8 ಶುಕ್ರವಾರ ಶಾಲಾ & ಕಾಲೇಜಗಳಿಗೆ ರಜೆ ಘೋಷಣೆ...

2025 ಜುಲೈ ತಿಂಗಳಲ್ಲಿ ಕೂಡ ಸಾಕಷ್ಟು ರಜೆಗಳನ್ನ ನೀಡಲಾಗಿತ್ತು, ಅದೇ ರೀತಿ 2025 ಆಗಸ್ಟ್ ತಿಂಗಳಲ್ಲಿ ಕೂಡ ಪದೇ ಪದೇ ಶಾಲಾ & ಕಾಲೇಜಗಳಿಗೆ ರಜೆ ಘೋಷಣೆ ಆಗುತ್ತಿರುವುದು ಶಿಕ್ಷಕರಿಗೆ ಕೂಡ ಒಂದಷ್ಟು ಟೆನ್ಷನ್ ಕೊಡುತ್ತಿದೆ. ಯಾಕಂದ್ರೆ ಇನ್ನೇನು ಪರೀಕ್ಷೆಗಳು ಶುರುವಾಗುವ ಮೊದಲು ಪಾಠ ಮುಗಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ರಿವಿಷನ್ ಮಾಡಿಸಬೇಕು. ಆದರೆ ಅದಕ್ಕೆ ಸಮಯವೇ ಸಿಗುತ್ತಿಲ್ಲ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಕಾರಣಕ್ಕೆ 2025 ಜುಲೈ ತಿಂಗಳಲ್ಲಿ ಸಾಕಷ್ಟು ರಜೆ ನೀಡಲಾಗಿತ್ತು. ಇದರ ಜೊತೆಗೆ ಭಾನುವಾರ ರಜೆ ಮತ್ತು ಶನಿವಾರ ಅರ್ಧ ದಿನ ಇರುತ್ತದೆ...

School Holiday May Announce In Karnataka On August 8 Of 2025 For This Reason

ಆಗಸ್ಟ್ 8 ಶುಕ್ರವಾರ ಶಾಲಾ & ಕಾಲೇಜಗಳಿಗೆ ರಜೆ...

ಹೌದು, ಶಾಲಾ & ಕಾಲೇಜಗಳಿಗೆ ರಜೆ ಕೊಟ್ಟರೆ ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಒಂದು ದಿನ ಶಾಲೆಗೆ ಹೋಗಿ ಬರುವುದು ತಪ್ಪಿತು ಅಂತಾ ಯೋಚನೆ ಮಾಡುತ್ತಾರೆ. ಆದರೆ ಪೋಷಕರು & ಶಿಕ್ಷಕರಿಗೆ ಆದಷ್ಟು ಬೇಗನೇ ಮಕ್ಕಳಿಗೆ ಪಾಠ ಮುಗಿಸಬೇಕು ಅನ್ನೋ ಅವಸರ. ಇದೇ ಕಾರಣಕ್ಕೆ ಸ್ಪಷಲ್ ಕ್ಲಾಸ್‌ಗಳು ಕೂಡ ಮಾಮೂಲಿ ಆಗಿವೆ. ಇಷ್ಟೆಲ್ಲದರ ನಡುವೆ, ಆಗಸ್ಟ್ 8 ಶುಕ್ರವಾರ ಶಾಲಾ & ಕಾಲೇಜಗಳಿಗೆ ರಜೆ ಘೋಷಣೆ...

ಆಗಸ್ಟ್ 9 ಶನಿವಾರ ಭರ್ಜರಿ...

ಅಂದಹಾಗೆ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಸತತ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಆಗಸ್ಟ್ 8 ಶುಕ್ರವಾರ ವರಮಹಾಲಕ್ಷ್ಮಿ ವ್ರತ ಅಥವಾ ವರಮಹಾಲಕ್ಷ್ಮಿ ದೇವಿ ಪೂಜೆಯು ಇರುವ ಕಾರಣಕ್ಕೆ ಹಬ್ಬದ ಹಿನ್ನೆಲೆ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಸಾಮೂಹಿಕ ರಜೆ ಘೋಷಣೆ ಮಾಡಲಾಗಿದೆ. ಇದು ಮಾತ್ರವಲ್ಲ, ಇದೀಗ ಆಗಸ್ಟ್ 9 ಶನಿವಾರ ಕೂಡ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆಯು ಆಗುತ್ತಾ? ಅನ್ನೋ ಚರ್ಚೆ ಶುರುವಾಗಿದೆ. ಯಾಕಂದ್ರೆ, ಕರ್ನಾಟಕದಲ್ಲಿ ಮತ್ತೆ ಮಳೆರಾಯ ಅಬ್ಬರಿಸುತ್ತಾ ಇದ್ದು ಭಾರಿ ಆತಂಕ ಮೂಡಿದೆ. ಅದರಲ್ಲೂ ಆಗಸ್ಟ್ 9 ಶನಿವಾರ ಭರ್ಜರಿ ಮಳೆ ಸುರಿದು ಅವಾಂತರವೇ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ಕೂಡ ನೀಡಲಾಗಿದ್ದು, ಹೀಗಾಗಿ ಆಗಸ್ಟ್ 9 ಶನಿವಾರ ಕೂಡ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ಹೀಗಾಗಿ ಆಗಸ್ಟ್ 8 ಶುಕ್ರವಾರ ಸಂಜೆ ತನಕ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+