School Holiday: ಆಗಸ್ಟ್ 22 ಶುಕ್ರವಾರ ನಂತರ 5 ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಕರ್ನಾಟಕದಲ್ಲಿ ಮುಂದಿನ 5 ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಹೌದು ಈ ರೀತಿ ಸುದ್ದಿ ಕೇಳಿದರೆ ಎಷ್ಟು ಖುಷಿ ಆಗಬೇಡ? ಇಂತಹದ್ದೇ ವಾತಾವರಣ ಇದೀಗ ಕರ್ನಾಟಕ ರಾಜ್ಯದ ಶಾಲಾ & ಕಾಲೇಜುಗಳಿಗೆ ನಿರ್ಮಾಣ ಆಗಿದೆ. ಒಂದು ಕಡೆ ಕರ್ನಾಟಕ ರಾಜ್ಯದಲ್ಲಿ ಹಲವು ಕಾರಣಗಳಿಗೆ ಸಾಲು ಸಾಲು ರಜೆಗಳು ಘೋಷಣೆ ಆಗುತ್ತಿದ್ದವು, ಇದೀಗ ಶ್ರಾವಣ ಶುರುವಾಗಿರುವ ಸಮಯದಲ್ಲೇ ಭಾರಿ ಬಂಪರ್ ರಜೆ ಸಿಗುವಂತೆ ಆಗಿದೆ. ಹೀಗಿದ್ದಾಗಲೇ, ಆಗಸ್ಟ್ 22 ಶುಕ್ರವಾರ ನಂತರ 5 ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ರಜೆ.. ರಜೆ.. ರಜೆ.. ಎಲ್ಲಾ ಕಡೆಯೂ ಇದೀಗ ಬರೀ ಇದೇ ವಿಚಾರದ ಬಗ್ಗೆ ಚರ್ಚೆ ಶುರುವಾಗಿದೆ. ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಹೌದು ಈ ಸುದ್ದಿ ಕೇಳಿದ ತಕ್ಷಣ ವಿದ್ಯಾರ್ಥಿಗಳು ಭಾರಿ ಖುಷಿ ಪಡುತ್ತಾರೆ. ಹಾಗೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ ಅಂತಾ ವಿದ್ಯಾರ್ಥಿಗಳು & ಮಕ್ಕಳು ಕುಣಿದಾಡುತ್ತಾರೆ. ಈಗಾಗಲೇ ಕರ್ನಾಟಕದ ಹಲವು ಕಡೆ ಸಾಲು ಸಾಲು ರಜೆಗಳನ್ನ ನೀಡಿದ್ದು ವಿದ್ಯಾರ್ಥಿಗಳಿಗೆ ಖುಷಿ ನೀಡಿದೆ. ಹೀಗಿದ್ದಾಗಲೇ, ಆಗಸ್ಟ್ 22 ಶುಕ್ರವಾರ ನಂತರ 5 ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

School Holiday May Announce In Karnataka After August 22 Of 2025 For This Reason

ಆಗಸ್ಟ್ 22 ಶುಕ್ರವಾರ ನಂತರ 5 ದಿನಗಳ...

ಶಾಲಾ & ಕಾಲೇಜುಗಳಿಗೆ ಬೇಸಿಗೆ ರಜೆ ಅಂತಾ 60 ದಿನ ಅಂದ್ರೆ ಸುಮಾರು 2 ತಿಂಗಳ ಕಾಲ ರಜೆ ಘೋಷಣೆ ಮಾಡಲಾಗಿತ್ತು. 60 ದಿನಗಳ ರಜೆ ಎಂಜಾಯ್ ಮಾಡಿ ಮತ್ತೆ ಶಾಲಾ & ಕಾಲೇಜುಗಳಿಗೆ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಕರ್ನಾಟಕ ಸೇರಿ ಇಡೀ ಇಂಡಿಯಾ ಪೂರ್ತಿ ಶಾಲಾ & ಕಾಲೇಜು ರೀ ಓಪನ್ ಅಂದ್ರೆ ಮತ್ತೆ ತೆರೆಯುವ ಮೂಲಕ ಮಕ್ಕಳಿಗೆ ಪಾಠ ಮಾಡಲು ಸಜ್ಜಾಗಿದ್ದವು. ಆದರೆ ಹೀಗೆ ಶಾಲಾ & ಕಾಲೇಜು ರೀ ಓಪನ್ ಆದ ತಕ್ಷಣವೇ 2025 ಜೂನ್ ತಿಂಗಳಲ್ಲಿ ಸಾಲು ಸಾಲು ರಜೆ ಸಿಕ್ಕಿದ್ದವು. ಆ ನಂತರದಲ್ಲಿ 2025 ಜುಲೈ ತಿಂಗಳಲ್ಲಿ ಮತ್ತಷ್ಟು ರಜೆ ಸಿಕ್ಕಿದ್ದು, ಇದೀಗ 2025 ಆಗಸ್ಟ್ ತಿಂಗಳಲ್ಲಿ ಕೂಡ ಇದೇ ರೀತಿ ರಜೆಗಳ ಸರದಿ ಮುಂದುವರಿದಿದೆ.

5 ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ...

ಹೌದು, ಕರ್ನಾಟಕದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಈಗಿನ ಸ್ಥಿತಿ ನೋಡಿದರೆ ಆಗಸ್ಟ್ 22 ಶುಕ್ರವಾರ ನಂತರ ಮತ್ತೆ ಮಳೆ ಸುರಿಯುವ ಮುನ್ಸೂಚನೆ ಇದೆ. ಭಾರಿ ಮಳೆ ಬೀಳಲಿರುವ ಕಾರಣಕ್ಕೆ ಆಗಸ್ಟ್ 22 ಶುಕ್ರವಾರ ಸಮೇತ ಆಗಸ್ಟ್ 23 ಶನಿವಾರ ಕೂಡ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುವ ಸಾಧ್ಯತೆ ದಟ್ಟವಾಗಿದೆ. ಇನ್ನುಳಿದಂತೆ ಆಗಸ್ಟ್ 24 ಭಾನುವಾರ ಸಾಮಾನ್ಯ ರಜೆ ಸಿಗಲಿದ್ದು, ಈ ರೀತಿ ಮಳೆ ಆರ್ಭಟ ಆಗಸ್ಟ್ 25 ಸೋಮವಾರ ಕೂಡ ಎದುರಾಗುವ ಮುನ್ಸೂಚನೆ ಹಿನ್ನೆಲೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆತಂಕ ಮೂಡಿದೆ. ಹೀಗೆ ಭಾರಿ ಮಳೆ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಆಗುವ ಸಾಧ್ಯತೆ ದಟ್ಟವಾಗಿದೆ. ಇನ್ನುಳಿದಂತೆ ಆಗಸ್ಟ್ 26 ಮಂಗಳವಾರ ಗೌರಿ ಹಬ್ಬ ಇದ್ದು, ಆಗಸ್ಟ್ 27 ಬುಧವಾರ ಗಣೇಶ ಚತುರ್ಥಿಯ ಸಂಭ್ರಮ ಇರಲಿದೆ. ಹೀಗಾಗಿ ಸಾಲು ಸಾಲು ರಜೆಗಳು ಬಹುತೇಕ ಜಿಲ್ಲೆಗಳಲ್ಲಿ ಗ್ಯಾರಂಟಿ ಎನ್ನಲಾಗಿದ್ದು, ಆದರೆ ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳುವ ತನಕ ಈಗ ಕಾದು ನೋಡಬೇಕಿದೆ.

ಮಳೆ.. ಮಳೆ.. ಮಳೆ.. ಮಳೆ..

ಹೌದು, ಆಗಸ್ಟ್ 23 ಶನಿವಾರದಿಂದ ನಮ್ಮ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುವ ಕುರಿತು ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಮಲೆನಾಡು ಜಿಲ್ಲೆ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಭಾಗದಲ್ಲೂ ಈಗ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಮಳೆ ಬೀಳುವ ಮುನ್ಸೂಚನೆ ಇದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೂ ಮಳೆಯ ಭಯ ಕಾಡುತ್ತಿದೆ, ಇಷ್ಟೆಲ್ಲದರ ನಡುವೆ ಹಿಂದೂಗಳ ಪವಿತ್ರ ಹಬ್ಬಗಳ ಪೈಕಿ ಒಂದಾಗಿರುವ ಗಣೇಶ ಚತುರ್ಥಿ ಕೂಡ ಬರುತ್ತಿರುವುದು ಸಂಭ್ರಮ ಹೆಚ್ಚು ಮಾಡಿದೆ. ಆದರೆ ಮಳೆಯ ಕಾರಣಕ್ಕೆ ಒಂದಷ್ಟು ಆತಂಕ ಹೆಚ್ಚಾಗಿದ್ದು, ಶಾಲಾ & ಕಾಲೇಜುಗಳಿಗೆ ಸಾಲು ಸಾಲು ರಜೆ ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+