School Holiday: ಶಾಲೆಗಳಿಗೆ ಇಂದು ರಜೆ ಇದಿಯಾ? ಪೋಷಕರೆ ಈ ಸುದ್ದಿ ಗಮನಿಸಿ!

ಶಾಲೆಗಳು ಶುರುವಾಗಲು ಕೆಲವೇ ನಿಮಿಷ ಬಾಕಿ ಇದ್ದು, ನಿನ್ನೆ ಭಾನುವಾರ ರಜೆ ಪಡೆದಿದ್ದ ಮಕ್ಕಳು ಇಂದು ಶಾಲೆಗೆ ಹೋಗಲು ತಯಾರಿ ನಡೆಸಬೇಕಿತ್ತು. ಆದರೆ ಇಂದು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಶಿಕ್ಷಕರು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಸಿದ್ಧರಾಗಿದ್ದು, ಈ ಪ್ರತಿಭಟನೆ ನಡುವೆಯೇ ಇಂದು ಬೆಂಗಳೂರಿನಲ್ಲಿ ಭಾರಿ ಮಳೆ ಶುರುವಾಗಿದೆ. ಹಾಗಾದ್ರೆ ಇಂದು ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆಯೇ? ಬನ್ನಿ ತಿಳಿಯೋಣ.

ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಕಡಿಮೆ ಆಗುವ ಬದಲು ಜೋರಾಗುತ್ತಿದೆ. ಅದ್ರಲ್ಲೂ ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇದೀಗ ಮಳೆ ಅಬ್ಬರ ಬಲು ಜೋರಾಗಿದೆ. ಹೀಗಾಗಿ ಜನ ಕೂಡ ಇವತ್ತು ಆಫಿಸ್ & ಶಾಲೆಗಳಿಗೆ ಮಕ್ಕಳನ್ನ ಕಳುಹಿಸಲು ಚಿಂತೆ ಮಾಡುವಂತಾಗಿದೆ. ಇವತ್ತು ನಸುಕಿನಿಂದಲೇ ಮಳೆ ಅಬ್ಬರ ಶುರುವಾಗಿದ್ದು, ಮುಂದಿನ 3 ಗಂಟೆಗಳಲ್ಲಿ ಮತ್ತಷ್ಟು ಭರ್ಜರಿ ಮಳೆ ಬೀಳುವ ಕುರಿತು ಈಗ ವಾರ್ನಿಂಗ್ ನೀಡಲಾಗಿದೆ. ಹಾಗಾದ್ರೆ ಬೆಂಗಳೂರಿನಲ್ಲಿ ಇಂದು ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರಾ? ಶಿಕ್ಷಕರಿಂದ ಬೃಹತ್ ಹೋರಾಟ ಹಿನ್ನೆಲೆ ಇಂದು ಶಾಲೆಗಳು ಆರಂಭ ಆಗುವುದಿಲ್ವಾ? ಮುಂದೆ ಓದಿ.

School Holiday Information Today In Karnataka And Bengaluru

ಶಾಲೆಗಳಿಗೆ ಇಂದು ರಜೆ ಘೋಷಣೆ?

ಅಂದಹಾಗೆ ಇಂದು ಅಂದ್ರೆ ಆಗಸ್ಟ್ 12ರ ಸೋಮವಾರ ಕರ್ನಾಟಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು 'ಬೆಂಗಳೂರು ಚಲೋ' ಹಮ್ಮಿಕೊಂಡಿದ್ದಾರೆ. ಕರ್ನಾಟಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಈ ಹೋರಾಟ ಶುರು ಮಾಡಿದ್ದಾರೆ. ಇದೇ ಸಮಯದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗುವುದು ಎಂಬ ಸುದ್ದಿಯು ಈಗ ಹರಡಿದೆ.

ಯಾಕಂದ್ರೆ ಶಿಕ್ಷಕರು ಇಂದು ಶಾಲೆಗಳನ್ನ ಬಂದ್ ಮಾಡಿ ವಿವಿಧ ಬೇಡಿಕೆ ಈಡೇರಿಕೆಗೆ ಹೋರಾಟ ಆರಂಭಿಸಿದ್ದು, ಸೋಮವಾರ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಆಗಿದೆಯಾ? ಎಂಬ ಡೌಟ್ & ಗೊಂದಲ ಕಾಡುತ್ತಿದೆ. ಆದರೆ, ಇದಕ್ಕೆ ಸ್ಪಷ್ಟನೆ ಸಿಕ್ಕಿದ್ದು, ಇಂದು ಯಾವ ರೀತಿಯ ರಜೆ ಕೂಡ ಶಾಲೆಗಳಿಗೆ ನೀಡಲಾಗಿಲ್ಲ. ಅದರ ಬದಲಾಗಿ ಸಾಮಾನ್ಯ ರೀತಿಯಲ್ಲೇ ಇಂದು ಶಾಲೆಗಳು ನಡೆಯಲಿವೆ ಎಂದು ತಿಳಿಸಲಾಗಿದೆ.

ಶಾಲಾ ಶಿಕ್ಷಣ ಇಲಾಖೆ ಆಯುಕ್ತರು...

ಶಾಲೆಗಳನ್ನು ಮುಚ್ಚಿ ಶಿಕ್ಷಕರು ಪ್ರತಿಭಟನೆ ನಡೆಸಲು ಅವಕಾಶ ಇಲ್ಲ ಎಂಬುದಾಗಿ ಈಗಾಗಲೇ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮಾಹಿತಿ ನೀಡಿದೆ. ಅಲ್ಲದೆ ಈ ಕುರಿತು ಪತ್ರವನ್ನು ಕೂಡ ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಕೂಡ ಇದೇ ಎಚ್ಚರಿಕೆ ನೀಡಿದ್ದು, ಈ ವಿಚಾರದಲ್ಲಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ಹೀಗಾಗಿ ಇಂದು ಶಾಲಾ ಶಿಕ್ಷಕರ ಹೋರಾಟ ಇದ್ದರೂ, ಮಳೆ ಬಂದರೂ ಶಾಲೆಗಳಿಗೆ ಮಾತ್ರ ರಜೆ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+