School Holiday: ಜುಲೈ 4ರ ಶುಕ್ರವಾರ ರಾಜ್ಯದ ಈ ಜಿಲ್ಲೆಯ ಶಾಲೆಗಳು-ಅಂಗನವಾಡಿಗಳಿಗೆ ರಜೆ ಘೋಷಣೆ
School Holiday: ಕರ್ನಾಟಕದಾದ್ಯಂತ ಮಳೆ (Karnataka Rains) ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಇನ್ನಿಲ್ಲದಂತೆ ಮಳೆ ಅಬ್ಬರ ಶುರುವಿಟ್ಟುಕೊಂಡಿದೆ. ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಯ ಶಾಲೆಗಳಿಗೆ, ಅಂಗನವಾಡಿಗಳಿಗೆ ಇಂದು ಗುರುವಾರ ಸಹ ರಜೆ ನೀಡಲಾಗಿತ್ತು. ಬೇಸಿಗೆ ರಜೆ ಬಳಿಕ ಸಾಲು ಸಾಲು ರಜೆ ಕಂಡಿದ್ದ ಶಾಲೆಗಳು ಇದೀಗ ಮಳೆ ರಜೆ ಪಡೆಯುತ್ತಿವೆ.
ಹೌದು, ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ಶಾಲಾ-ಅಂಗನವಾಡಿಗಳಿಗೆ ರಜೆ ಘೋಷಿಸಿ ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಈ ಆದೇಶವರು ಶುಕ್ರವಾರ ಜುಲೈ 4ರಂದು ಅನ್ವಯವಾಗಲಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಿಟ್ಟು ಬಿಡದೇ ಮಳೆ ಆಗುತ್ತಿದೆ. ಕದ್ರ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತದೆ. ಹಳ್ಳ ಕೊಳ್ಳಗಳು, ರಸ್ತೆಗಳು ಜಲಾವೃತ ಸಾಧ್ಯತೆ ಇದೆ. ಈ ಕಾರಣದಿಂದ ಜಿಲ್ಲೆಯ ನಾಲ್ಕು ತಾಲೂಕುಗಳ ಶಾಲಾ-ಅಂಗನವಾಡಿಗಳಿಗೆ ನಾಳೆ ಶುಕ್ರವಾರ ರಜೆ ನೀಡಲಾಗಿದೆ.

ಭಾರೀ ಮಳೆಯ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಆದ್ದರಿಮದ ಜಿಲ್ಲೆಯ ಯಲ್ಲಾಪುರ, ಶಿರಸಿ, ಸಿದ್ಧಾಪುರ ಮತ್ತು ಜೋಯಿಡಾ ತಾಲೂಕಿನ ಅನೇಕ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಅಂಗನವಾಡಿ ಶಾಲೆಗಳಿಗೆ ಜುಲೈ 04ರಂದು ರಜೆ ಘೋಷಿಸಿ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶದಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ವ್ಯಾಪ್ತಿಯಲ್ಲಿ ಮಳೆಗೆ ಗುಡ್ಡ ಕುಸಿಯುವುದು, ನದಿ, ಕೆರೆ, ಕಟ್ಟೆಗಳು ಉಕ್ಕಿ ಹರಿಯುವುದು ಸಾಮಾನ್ಯ. ಆದರೆ ಮಕ್ಕಳ ಪಾಲಿಗೆ ಇದನ್ನು ಸಾಮಾನ್ಯ ಎಂದು ಪರಿಗಣಿಸಲಾಗು. ಸೈಕಲ್ ಮೇಲೆ, ಹಳ್ಳ, ಕೊಳ್ಳ ದಾಟಿ ನಡೆದು ಬರುವ ಮಕ್ಕಳು ಭಾರೀ ಮಳೆಗೆ ಸಿಲುಕಬಹುದು. ಮರದ ಬಳಿ ನಿಲ್ಲಲು ದಾವಿಸಬಹುದು. ಕರೆಗಳಲ್ಲಿ, ಉಕ್ಕಿ ಹರಿಯವು ಹಳ್ಳಗಳಲ್ಲಿ ಇಣುಕು ನೋಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆ ಇರುತ್ತದೆ. ಪ್ರಾಥಮಿಕ ಶಾಲೆ ಮಕ್ಕಳಿಗೆ ವಿವೇಚನಾ ಶಕ್ತಿ ಕಡಿಮೆ. ಭಾರೀ ಮಳೆ ಬಂದಾಗ ವಿವೇಚನೆಯುತ ನಿರ್ಧಾರ ಕೈಗೊಳ್ಳುವುದು ತಿಳಿಯುವುದಿಲ್ಲ. ಇದೆಲ್ಲ ಗಮನಿಸಿಯೇ ಮಳೆಗಾಲದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಡಳಿತಗಳು ಎಸ್‌ಎಸ್‌ಎಲ್‌ಸಿ ವರೆಗಿನ ಮಕ್ಕಳ ಶಾಲೆಗಳಿಗೆ ರಜೆ ನೀಡುತ್ತದೆ. ಅಗತ್ಯ ಮುಂಜಾಗೃತ ಕೈಗೊಳ್ಳುತ್ತವೆ.
ಕರ್ನಾಟಕದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಸಾಧಾರಣದಿಂದ ಭಾರೀ ಮಳೆ (Karnataka Rains) ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರುತ ಪ್ರಸರಣ: 150 ಮಿ. ಮೀ, ಹೆಚ್ಚಿನ ಮಳೆ
ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಮಳೆ ಮುನ್ಸೂಚನೆ ನೀಡಲಾಗಿದೆ. ಮುಂಗಾರು ಮಳೆ ಮತ್ತೆ ಚುರುಕಾಗಿದೆ. ಇದಲ್ಲದೇ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸುಮಾರು 150 ಮಿಲಿ ಮೀಟರ್‌ಗೂ ಹೆಚ್ಚಿನ ಮಳೆ ಸುರಿಯಲಿದೆ. ಈ ಕಾರಣದಿಂದ ಉತ್ತರ ಕನ್ನಡ ಭಾಗದ ವಿವಿಧ ತಾಲೂಕು ಶಾಲೆಗಳಿಗೆ ರಜೆ ನೀಡಿದೆ. ಇದಲ್ಲದೇ ರಾಜ್ಯದ ಇತರೆಡೆ ಜೋರು ಮಳೆ ಆದರೆ ಸೋಮವಾರ (ಜುಲೈ 07) School Holiday on July 7th ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ರಜೆ ಘೋಷಣೆ ಆದರೂ ಆಗಬಹುದು ಎಂದು ಊಹಿಸಲಾಗಿದೆ. ಈ ಮಳೆ ರಜೆ ಕುರಿತ ಆದೇಶ ಸ್ಥಳೀಯ ಜಿಲ್ಲಾಡಳಿತ ಇಲ್ಲವೇ ತಹಶೀಲ್ದಾರ್ ಅವರ ವಿವೇಚನೆಗೆ ಬಿಟ್ಟಿರುತ್ತದೆ. ಅಧಿಕಾರಿಗಳು ಮಳೆಗಾಲದಲ್ಲಿ ಹವಾಮಾನ ಇಲಾಖೆ ಜೊತೆಗೆ ನಿರಂತರವಾಗಿ ಸಂಹವನ ನಡೆಸುತ್ತಿರುತ್ತಾರೆ. ಅದರ ಮೇಲೆ ನಿರ್ಧಾರ ಕೈಗೊಂಡು ರಜೆಗೆ ಆದೇಶ ಹೊರಡಿಸುತ್ತಾರೆ.












Click it and Unblock the Notifications