ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಶೈವ ಲಿಂಗಾಯತ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

By Prasad
|
Google Oneindia Kannada News

ಬೆಂಗಳೂರು, ಆಗಸ್ಟ್ 31 : ವೀರಶೈವ ಲಿಂಗಾಯತ ಯುವ ವೇದಿಕೆಯಿಂದ 2017-2018 ಸಾಲಿನ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ 'ಬಸವಜ್ಯೋತಿ' ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನಿಸಲಾಗಿದೆ.

Recommended Video

Bengaluru : Akhila Bharata Veerashaiva Mahasabha crucial meeting today

ವೀರಶೈವ-ಲಿಂಗಾಯತರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನ: ಖಂಡ್ರೆವೀರಶೈವ-ಲಿಂಗಾಯತರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನ: ಖಂಡ್ರೆ

ಪ್ರಶಾಂತ್ ಕಲ್ಲೂರ್ ಅವರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಕಳೆದ ನಾಲ್ಕು ವರ್ಷಗಳಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿಕೊಂಡು ಬರುತ್ತಿದೆ. ಈ ವರ್ಷ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಗುರಿಯನ್ನು ಯುವ ವೇದಿಕೆ ಹೊಂದಿದೆ.

Scholarship for students by Veerashaiva Lingayat Yuva Vedike

ವೆಬ್ ಸೈಟಿನಲ್ಲಿ ಅರ್ಜಿಯನ್ನು ಪಡೆದುಕೊಳ್ಳಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5ನೇ ಸೆಪ್ಟೆಂಬರ್, 2017.

ಉನ್ನತ ಶಿಕ್ಷಣಕ್ಕೆ ರೋಟರಿಯಿಂದ ವಿದ್ಯಾರ್ಥಿ ವೇತನ, ಸೆಪ್ಟೆಂಬರ್ 20 ಕೊನೆ ದಿನಉನ್ನತ ಶಿಕ್ಷಣಕ್ಕೆ ರೋಟರಿಯಿಂದ ವಿದ್ಯಾರ್ಥಿ ವೇತನ, ಸೆಪ್ಟೆಂಬರ್ 20 ಕೊನೆ ದಿನ

ಅರ್ಜಿ ಸಲ್ಲಿಸುವವರ ಗಮನಕ್ಕೆ :

* 5ನೇ ತರಗತಿ ಮತ್ತು ಮೇಲ್ಪಟ್ಟ ಬಡ/ ಪ್ರತಿ ಭಾವಂತ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು. (ಉದಾ : 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ, ಪಿಯುಸಿ, ಡಿಪ್ಲೊಮಾ, ಬಿಇ, ಬಿಎಡ್, ಎಂಎ, ಎಂಎಸ್ಸಿ , ಎಂಬಿಎ, ಎಂಬಿಬಿಎಸ್ ಇತ್ಯಾದಿ ಕಲಿಯುತ್ತಿರವ ವಿದ್ಯಾರ್ಥಿಗಳು)

* ನಿಮ್ಮ ಹ್ಯಾಂಡ್ ರೈಟಿಂಗ್ (ಕೈಬರಹ) ಅಚ್ಚುಕಟ್ಟಾಗಿ ಅರ್ಥವಾಗಿರುವಂತೆ ಬರೆದು ಕಳುಹಿಸಿ.

* ಡಿಡಿ / ಮನಿ ಆರ್ಡರ್ / ಪೋಸ್ಟಲ್ ಆರ್ಡರ್ ಫೋಲ್ಡ್ ಆಗದಂತೆ ಹಾಗೂ ಪಿನ್ ಹಾಕದಂತೆ ಅಚ್ಚುಕಟ್ಟಾಗಿ ಕಳುಹಿಸತಕ್ಕದ್ದು.

* ನಿಮ್ಮ ಅರ್ಜಿಯಲ್ಲಿ ಅಂಚೆಪೆಟ್ಟಿಗೆ ಸಂಖ್ಯೆ ತುಂಬಿಸುವುದು ಕಡ್ಡಾಯ.

* ಆಯ್ಕೆಯಾದ ವಿದ್ಯಾರ್ಥಿ ಪಟ್ಟಿಯನ್ನು ಎರಡು ಹಂತದಲ್ಲಿ ಬಿಡುಗಡೆಯಾಗಲಿದ್ದು ಸೆಪ್ಟೆಂಬರ್ 19ರ ಮಂಗಳವಾರ ಮೊದಲ ಪಟ್ಟಿ ಹಾಗೂ, ಎರಡನೇ ಪಟ್ಟಿ ಅಕ್ಟೋಬರ್ 10ರ ಮಂಗಳವಾರ ವೇದಿಕೆ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು.

* ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಭರ್ತಿ ಮಾಡಿರುವ ಪುಟದೊಂದಿಗೆ ಈ ಮೇಲೆ ನಮೂದಿಸಿರುವ ದಾಖಲಾತಿಗಳನ್ನು (ಅಂಕಪಟ್ಟಿ, ಜಾತಿ ಪ್ರಮಾಣಪತ್ರ, 100 ರುಪಾಯಿ ಮನಿ ಆರ್ಡರ್ ಅಥವಾ ಪೋಸ್ಟಲ್ ಆರ್ಡರ್ ಅಥವಾ ಡಿಡಿ) ಮಾತ್ರ ಕಳುಹಿಸತಕ್ಕದು.

ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕಾದ ವಿಳಾಸ :

VEERASHAIVA LINGAYAT YUVA VEDIKE
#55, 2nd cross, 3rd main, AECS 1stage, RMV 2nd stage, Sanjayanagara main road, Ashwathnagara, Bengaluru - 560 094.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು 8861179393 / 080 40979393.

English summary
Veerashaiva Lingayat Yuva Vedike has invited eligible candidates for scholarships for the year 2017. The organization is lead by Prashant Kallur. The candidates can get application on www.vlyvedike.org. Last date to apply for the scholarship is 5th September, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X