Satish Jarakiholi: ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕವಾಗಬೇಕು : ಡಿಕೆಶಿ ವಿರುದ್ಧ ಸಿಡಿದೆದ್ದ ಸಾಹುಕಾರ್

ಬೆಂಗಳೂರು, ಜನವರಿ 15: ಕಾಂಗ್ರೆಸ್‌ ಪಾಳಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ ಎಂಬ ವಿಚಾರ ಹರಿದಾಡುತ್ತಿದೆ. ಡಿಕೆ ಶಿವಕುಮಾರ್ ಬದಲಿಗೆ ಹೊಸ ಅಧ್ಯಕ್ಷರುನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ, ಈ ನಡುವೆ ಸಚಿವ ಸತೀಶ್ ಜಾರಕಿಹೊಳಿ ಸ್ಟೋಟಕ ಹೇಳಿಕೆಯನ್ನ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸುರ್ಜೇವಾಲರನ್ನ ಭೇಟಿ ಮಾಡಿದ್ದೆ, ಪಕ್ಷ ಮತ್ತು ಸಂಘಟನೆ ಬಗ್ಗೆ ವಿಶೇಷವಾಗಿ ಚರ್ಚೆ ಮಾಡಿದ್ಧೆವು. 2028ರ ಚುನಾವಣೆ ವಿಚಾರವಾಗಿ ಚರ್ಚೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿಯೂ ಚರ್ಚೆ ಆಗಿದೆ ಎಂದು ಹೇಳಿದರು.

Satish Jarkiholi reaction on the appointment of the new president of kpcc

ಸುರ್ಜೇವಾಲ ಅವರನ್ನು ಭೇಟಿ ಮಾಡಿದ ಸಮಯದಲ್ಲಿ ಇರುವ ಕೆಪಿಸಿಸಿ ಅಧ್ಯಕ್ಷರನ್ನಾದರೂ ಮುಂದುವರೆಸಿ ಇಲ್ಲಾ ಬೇರೆಯವರನ್ನ ನೇಮಕ‌ ಮಾಡಿ. ಈಗ ಗೊಂದಲ ಇದೆ, ಅದಕ್ಕೆ ಇತಿಶ್ರೀ ಹಾಡಿ ಎಂದಿದ್ದೇವೆ. ಪುಲ್​ಫ್ಲೆಡ್ಜ್ ಅಧ್ಯಕ್ಷರನ್ನು ನೇಮಕ ಮಾಡಿ ಎಂದು ಬೇಡಿಕೆ ಇಟ್ಟಿದ್ದೇವೆ. ವೋಟ್ ತರೋರು ಅಧ್ಯಕ್ಷರಾಗಬೇಕು ಎಂದು ಹಿಂದೆಯೂ ಹೇಳಿದ್ದೆ. ಯಾರೇ ಆಗಲಿ ವೋಟ್ ತರುವಂತವರು, ಜನಪ್ರಿಯ ಇದ್ದವರನ್ನ ಮಾಡಿ ಎಂದಿದ್ದೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಹೊಸ ಅಧ್ಯಕ್ಷರನ್ನು ನೇಮಿಸಬೇಕು. ಒಂದು ವೇಳೆ ಇದೇ ಅಧ್ಯಕ್ಷರನ್ನು ಮುಂದುವರೆಸುವುದಾದರೆ ಅವರಲ್ಲಿ ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಮನವಿ ಮಾಡಿದ್ದೇವೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುತ್ತದೆ ಎಂಬ ಗೊಂದಲವಿದೆ. ನಮಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕು ಎಂದು ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಇನ್ನೂ ಕಾಟಾಚಾರದ ಅಧ್ಯಕ್ಷರು ಬೇಡ. ಮುಂದೆ ಯಾರೇ ಪಕ್ಷದ ನೇತೃತ್ವ ವಹಿಸಿಕೊಂಡರೂ ಮತ ತರುವವರು ಇರಬೇಕು. ಮುಂದಿನ ಚುನಾವಣೆಯಲ್ಲಿ ನಮಗೆ ಅದು ಲಾಭವಾಗಬೇಕು. ಈ ವಿಷಯವಾಗಿ ಆ ಜಾತಿ, ಈ ಜಾತಿ ಎಂಬುದಿಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕೆಳಮಟ್ಟದಲ್ಲಿ ಚರ್ಚೆಯಾಗಿವೆ. ಎಲ್ಲರೂ ಬದಲಾವಣೆಯನ್ನು ಬಯಸಿದ್ದಾರೆ. ಆದರೆ ಮೇಲಟ್ಟದಲ್ಲಿ ಅದು ನಡೆಯುತ್ತಿಲ್ಲ. ತಾವು ಎಐಸಿಸಿ ಪ್ರತಿನಿಧಿಯೊಂದಿಗೆ ಚರ್ಚೆ ನಡೆಸಿದ ವೇಳೆ ಜ.25 ರ ನಂತರ ಇದರ ಬಗ್ಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಪಕ್ಷದಲ್ಲಿ 2‌023ರಲ್ಲಿ ಇದ್ದಷ್ಟು ಸ್ಪೀಡ್ ಆಗಿ ಕೆಲಸ ನಡೆಯುತ್ತಿಲ್ಲ. ಇದರಲ್ಲಿ ಹಠ ಏನಿಲ್ಲ ಕೆಲಸ ಮಾಡೋರು ಅಧ್ಯಕ್ಷರಾಗಬೇಕು. ಯಾರು ಆಗಬೇಕು ಎನ್ನುವುದು ಇನ್ನೂ ಚರ್ಚೆ ಆಗಿಲ್ಲ 2028ರವೆರೆಗೆ ಡಿಕೆಶಿ ಅವರೇ ಇರಬೇಕಾ ಬೇರೆಯವರು ಬರಬೇಕಾ ಎಂದು ಹೈ ಕಮಾಂಡ್ ತೀರ್ಮಾನ ಮಾಡಬೇಕು. ಒಂದೇ ಹುದ್ದೆ ಎನ್ನುವುದು ಅಂತಿಮವಲ್ಲ. ಕೆಲವೊಮ್ಮೆ ಸಮರ್ಥರಿದ್ದರೆ ಎರಡು, ಮೂರು ಪೋಸ್ಟ್ ಕೊಡಬಹುದು.

ನನಗೆ ಅಧ್ಯಕ್ಷರಾಗಿ ಎಂದು ಕೆಲವು ಶಾಸಕರ ಒತ್ತಾಯ ಇರೋದು ಸಹಜ. ಡಿ ಕೆ ಶಿವಕುಮಾರ್ ನಾನೇ ಅಧ್ಯಕ್ಷನಾಗಬೇಕೆಂದು ಬೇಡಿಕೆ ಇಟ್ಟರೆ, ಹೈಕಮಾಂಡ್ ಕ್ಲಿಯರ್ ಆಗಿ ಏನು ಅನ್ನೋದನ್ನ ಹೇಳಬೇಕು. ಇವರೇ ಇರುತ್ತಾರೋ ಅಥವ ಬೇರೆಯವರು ಆಗಬೇಕು ಎನ್ನೋದನ್ನ ಹೇಳಬೇಕು. ಲೋಕಸಭಾ ಚುನಾವಣೆ ನಂತರ ಬದಲಾವಣೆ ಮಾಡೋದಾಗಿ ಹೈಕಮಾಂಡ್ ನೋಟ್ ಇದೆ. ಚುನಾವಣೆ ಮುಗಿದು 6-7ತಿಂಗಳಾಯ್ತು ಹೀಗಾಗಿ ಯಾವುದರು ಒಂದು ತೀರ್ಮಾನ ಮಾಡಬೇಕು ಎಂದು ಸತೀಶ್ ಜಾರಕಿಹೊಳಿ ಅವರು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+