ಕರ್ನಾಟಕದ ಫಿಟ್ಟೆಸ್ಟ್ ಮಿನಿಸ್ಟರ್ ಯಾರು ಗೊತ್ತಾ!?
ಬೆಂಗಳೂರು, ಜೂನ್ 26: ಇಂದಿನ ಜಗತ್ತಿನಲ್ಲಿ ಸದೃಢ ದೇಹ ಹಾಗೂ ಆರೋಗ್ಯಕರ ಮನಸ್ಥಿತಿ ಹೊಂದುವುದು ಬಹಳ ಮುಖ್ಯ. ತಮ್ಮ 47ನೇ ವಯಸ್ಸಿನಲ್ಲಿ ಕೂಡ ಯುವಕರನ್ನ ನಾಚಿಸುವ ಹಾಗೆ ತನ್ನ ದೇಹವನ್ನು ದಂಡಿಸುವ ಹಾಗೂ ಸದೃಢ ಆರೋಗ್ಯ ಕಾಪಾಡಿಕೊಂಡಿರುವುದು ಕಾರ್ಮಿಕ ಸಚಿವ ಸಂತೋಷ್ ಲಾಡ್.
ಹೌದು, ಇಂದು(ಸೋಮವಾರ) ಧಾರವಾಡಕ್ಕೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆಗಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಬೆಳ್ಳಂಬೆಳಗ್ಗೆ ಧಾರವಾಡದ ಬೀದಿಗಳಲ್ಲಿ ರನ್ನಿಂಗ್ ಮಾಡುತ್ತಿರುವ ದೃಶ್ಯ ಬಹಳ ವೈರಲ್ ಆಗಿದೆ. ಸಂತೋಷ್ ಲಾಡ್ ವರ್ಕೌಟ್ ಮಾಡುತ್ತಿರುವ ಹಲವು ಎಕ್ಸ್ ಕ್ಲೂಸಿವ್ ದೃಶ್ಯಗಳನ್ನ ನೋಡಿದ್ರೆ ನಿಮಗೆ ತಿಳಿಯುತ್ತದೆ.

ಸಂತೋಷ್ ಲಾಡ್ ಅವರು ಮೊದಲಿಂದಲೂ ಫಿಟ್ನೆಸ್ ವಿಷಯದಲ್ಲಿ ಶಿಸ್ತು ಪಾಲಿಸುತ್ತ ಬಂದಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದ ಸಮಯದಲ್ಲಿಯೂ ಕೂಡಾ ಸಂತೋಷ್ ಲಾಡ್ ಅವರು ಫಿಟ್ ಆಗಿರಲು ದಿನವೂ ಕೂಡ ವಾಕಿಂಗ್ ಹಾಗೂ ರನ್ನಿಂಗ್ ಅಷ್ಟೇ ಅಲ್ಲದೇ ಜಿಮ್ ನಲ್ಲಿ ಸಮಯವನ್ನ ಕಳೆಯುತ್ತಾರೆ.
ನಿಯಮಿತವಾದ ಸಮಯವನ್ನು ಜಿಮ್ ನಲ್ಲಿ ಕಳೆಯಬೇಕು ಹಾಗೂ ಯುವಕರು ಉತ್ಸಾಹಿಗಳಾಗಿ ಕಾರ್ಯವನ್ನು ಮಾಡಲಿಕ್ಕೆ ಹಾಗೂ ಫಿಟ್ ಇರಲು ಅತ್ಯಂತ ಉತ್ತಮ ಹವ್ಯಾಸ ಎನ್ನುವುದು ಸಂತೋಷ್ ಲಾಡ್ ಅಭಿಪ್ರಾಯವಾಗಿದೆ.
ಅಬಕಾರಿ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದ ಸಂತೋಷ್ ಲಾಡ್
ಧಾರವಾಡ ಜಿಲ್ಲೆಯಲ್ಲಿ ಅಕ್ರಮ ಸಾರಾಯಿ ಧಂಧೆ ಎಗ್ಗಿಲ್ಲದೆ ಸಾಗುತ್ತಿದ್ದು. ಈಗ ಮುಂದುವರಿದು ಹಳ್ಳಿಗಳಿಗೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ ಈ ಕುರಿತು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಇಂದು ಅಬಕಾರಿ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.
ಅಕ್ರಮ ಸಾರಾಯಿ ಮಾರಾಟ ಮಾಡುವುದು ಧಾರವಾಡದಲ್ಲಿ ಅತಿಯಾಗಿ ನಡೆಯುತ್ತಿದೆ. ನೀವು ಇನ್ನೂ 2 ದಿನಗಳಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಾನು ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಲಾಡ್ ಅವರು ಎಚ್ಚರಿಸಿದರು.












Click it and Unblock the Notifications