ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್, ನಟಿ ರಾಗಿಣಿ ಅರೆಸ್ಟ್: ಇಕ್ಕಟ್ಟಿನಲ್ಲಿ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ

|
Google Oneindia Kannada News

ಬೆಂಗಳೂರು, ಸೆ 5: ಸದ್ಯ ರಾಜ್ಯದಲ್ಲಿ ಭಾರೀ ಸದ್ದನ್ನು ಮಾಡುತ್ತಿರುವ ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರ, ಯಾವ ಹಂತಕ್ಕೆ ಬಂದು ನಿಲ್ಲುತ್ತದೋ ಎನ್ನುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಯಾಕೆಂದರೆ, ಬಗೆದಷ್ಟು ಹೊಸ ವಿಚಾರಗಳು ಹೊರ ಬರುತ್ತಿವೆ.

Recommended Video

ಇಡೀ ರಾತ್ರಿ ಪೊಲೀಸ್ ವಶದಲ್ಲಿದ್ದ Raginiಗೆ ಇಂದು ಎರಡನೇ ದಿನದ ವಿಚಾರಣೆ | Oneindia Kannada

ಡ್ರಗ್ಸ್ ಮೂಲವನ್ನೇ ಜಾಲಾಡಲು ಹೊರಟಿರುವ ಬೆಂಗಳೂರಿನ ಕ್ರೈಂ ಬ್ರಾಂಚ್ ಪೊಲೀಸರು, ಈಗಾಗಲೇ ನಟಿ ರಾಗಿಣಿ ದ್ವಿವೇದಿ ಆದಿಯಾಗಿ ಹಲವರನ್ನು ಬಂಧಿಸಿದ್ದಾರೆ. ಇವರಲ್ಲಿ ಹಲವು ನಟಿಯರ ಸ್ನೇಹಿತರೂ ಸೇರಿದ್ದಾರೆ.

ಡ್ರಗ್ಸ್: ಬಿಜೆಪಿ ನಾಯಕರೊಂದಿಗೆ ಚರ್ಚಿಸಿದ್ದ ನಟಿ ರಾಗಿಣಿ!ಡ್ರಗ್ಸ್: ಬಿಜೆಪಿ ನಾಯಕರೊಂದಿಗೆ ಚರ್ಚಿಸಿದ್ದ ನಟಿ ರಾಗಿಣಿ!

ರಾಗಿಣಿ ಬಂಧನ ವಿಚಾರ ಸ್ಯಾಂಡಲ್ ವುಡ್ ನಲ್ಲಿ ಸಂಚಲನವನ್ನು ಮೂಡಿಸಿದೆ. ವಿಪರ್ಯಾಸವೆಂದರೆ, ಇದೇ ರಾಗಿಣಿ, ಡ್ರಗ್ಸ್ ವಿರೋಧಿ ಅಭಿಯಾನದ ಕುರಿತು ಸುದೀರ್ಘ ಚರ್ಚೆಯನ್ನು ಬಿಜೆಪಿ ಮುಖಂಡರ ಜೊತೆಗೆ ಮಾಡಿದ್ದರು.

ಇದೊಂದೇ ವಿಚಾರವಲ್ಲದೇ, ಹಿಂದೆ, ಬಿಜೆಪಿಯ ಸ್ಟಾರ್ ಪ್ರಚಾರಕಿ ರಾಗಿಣಿ ದ್ವಿವೇದಿ ಆಗಿದ್ದರಿಂದ, ರಾಗಿಣಿ ಬಂಧನ ವಿಚಾರ, ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದೆ. ಜೊತೆಗೆ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರಗೆ ಕೂಡಾ ಈ ವಿದ್ಯಮಾನ ಇರಿಸುಮುರಿಸನ್ನು ತಂದೊಡ್ಡಿದೆ.

ರಾಗಿಣಿ, ಮನೆಮನೆ ಪ್ರಚಾರ ಮಾಡಿದ್ದರು

ರಾಗಿಣಿ, ಮನೆಮನೆ ಪ್ರಚಾರ ಮಾಡಿದ್ದರು

ಆಪರೇಷನ್ ಕಮಲದ ಮೂಲಕ ಜೆಡಿಎಸ್-ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದಾದ ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪರ ಸ್ಟಾರ್ ಪ್ರಚಾರಕಿಯಾಗಿ ರಾಗಿಣಿ ದ್ವಿವೇದಿಯಾಗಿದ್ದರು. ಅಂದು ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದ ರಾಗಿಣಿ, ಬಿಜೆಪಿ ಪರ ಮನೆಮನೆ ಪ್ರಚಾರ ಮಾಡಿದ್ದರು.

ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣ ಗೌಡ

ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣ ಗೌಡ

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣ ಗೌಡ ಸ್ಪರ್ಧಿಸಿದ್ದರು. ಬಿಜೆಪಿಗೆ ನೆಲೆಯೇ ಇಲ್ಲದ ಜಿಲ್ಲೆಯಾಗಿರುವ ಮಂಡ್ಯ ಜಿಲ್ಲೆಯ ಈ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಸಿಎಂ ಪುತ್ರ ಬಿ.ವೈ.ವಿಜಯೇಂದ್ರಗೆ ವಹಿಸಲಾಗಿತ್ತು. ಈಗ, ರಾಗಿಣಿ, ಬಂಧನವಾಗುತ್ತಿದ್ದಂತೆಯೇ, ರಾಗಿಣಿಗೆ ಬಿಜೆಪಿಯ ನಂಟು ಎಂದು ವಿಡಿಯೋ, ಫೋಟೋಗಳು, ಸಾಮಾಜಿಕ ತಾಣದಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ, ವಿಜಯೇಂದ್ರ ಪಕ್ಷದಲ್ಲಿ ಉತ್ತಮ ಹೆಸರನ್ನು ಪಡೆದಿದ್ದರು.

ಈ ಬಿಜೆಪಿ ಅವಧಿಯಲ್ಲಿ ಯಾಕಾದರೂ ಶಾಸಕನಾದೆನೋ ಎನ್ನುವ ನೋವು ಕಾಡುತ್ತಿದೆ!ಈ ಬಿಜೆಪಿ ಅವಧಿಯಲ್ಲಿ ಯಾಕಾದರೂ ಶಾಸಕನಾದೆನೋ ಎನ್ನುವ ನೋವು ಕಾಡುತ್ತಿದೆ!

ಗ್ರಾಮದ ಮಹಿಳೆಯೊಬ್ಬಳು ಆರತಿ ಎತ್ತಿ ಸ್ವಾಗತಿಸುವ ವಿಡಿಯೊ

ಪ್ರಚಾರಕ್ಕೆ ರಾಗಿಣಿ ಜೊತೆ ಆಗಮಿಸಿದ್ದ ವಿಜಯೇಂದ್ರಗೆ ಗ್ರಾಮದ ಮಹಿಳೆಯರು ಆರತಿ ಎತ್ತಿ ಸ್ವಾಗತಿಸುವ ವಿಡಿಯೊ ಈಗ ವೈರಲ್ ಆಗಿದೆ. ಇದರಲ್ಲಿ ಮೊದಲು ರಾಗಿಣಿಗೆ ಆರತಿ ಎತ್ತುವ ಮಹಿಳೆ, ನಂತರ, ವಿಜಯೇಂದ್ರಗೆ ಆರತಿ ಎತ್ತಿ, ಕುಂಕುಮವನ್ನು ಇಡುತ್ತಾರೆ. 'ಕೇಸು ಯಾವುದೇ ಇರಲಿ, ಅದಕ್ಕೆ ಬಿಜೆಪಿ ಜೊತೆಗೆ ಲಿಂಕ್ ಇರುತ್ತದೆ' ಎನ್ನುವ ಒಕ್ಕಣೆಯನ್ನು ಬರೆದು ವಿಡಿಯೋ ಜೊತೆ ಒಬ್ಬರು ಇದನ್ನು ಟ್ವೀಟ್ ಮಾಡಿದ್ದಾರೆ.

ಡ್ರಗ್ಸ್ ವಿರೋಧಿ ಅಭಿಯಾನದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದಾಗಿ ರಾಗಿಣಿ ಹೇಳಿದ್ದರು

ಡ್ರಗ್ಸ್ ವಿರೋಧಿ ಅಭಿಯಾನದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದಾಗಿ ರಾಗಿಣಿ ಹೇಳಿದ್ದರು

ಶಾಲಾ‌ ಮಕ್ಕಳಲ್ಲಿ ಡ್ರಗ್ಸ್ ಜಾಗೃತಿ ಮೂಡಿಸುವ ಕುರಿತು ರಾಜ್ಯ ಬಿಜೆಪಿ ಘಟಕ ಬೃಹತ್ ಅಭಿಯಾನವನ್ನು ನಡೆಸಿತ್ತು. ಡ್ರಗ್ಸ್ ಕುರಿತು ನಿರ್ಣಾಯಕ ಹೋರಾಟವನ್ನು ಬಿಜೆಪಿ ಮಾಡಿತ್ತು. ಇದೇ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದ ರಾಗಿಣಿ ಅವರು, ಜಾಗೃತಿ ಕಾರ್ಯಕ್ರಮದ ಕುರಿತು ಮಾಹಿತಿಯನ್ನು ಪಡೆದಿದ್ದರು. ತಾವೂ ಕೂಡ ಡ್ರಗ್ಸ್ ವಿರೋಧಿ ಅಭಿಯಾನದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದಾಗಿ ರಾಗಿಣಿ ಹೇಳಿದ್ದರು.

English summary
Sandalwood Drugs Ragini Arrest: Link With BJP Leaders During By Election 2019,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X