ಚುನಾವಣೆ ವೇಳೆ ಕಾಂಗ್ರೆಸ್ ನಾಯಕರು ಹಿಂದೂ ಆಗುತ್ತಾರೆ: ಬಿಜೆಪಿ
ಬೆಂಗಳೂರು, ಸೆಪ್ಟಂಬರ್ 05: ಭಾರತೀಯ ಸನಾತನ ಧರ್ಮ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಪರ ವಿರೋಧ ಚರ್ಚೆಗಳು, ಖಂಡನೆ ಮುಂದುವರಿದಿದೆ. ಸ್ಟಾಲಿನ್ ಇದೀಗ ಮತ್ತೆ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಬಿಜೆಪಿ ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸ್‌ನವರು ಹಿಂದುಗಳಾಗುತ್ತಾರೆ. ಹಿಂದೂ ಧರ್ಮ ಅವಹೇಳನ ಮಾಡುವವರನ್ನು ಕಾಂಗ್ರೆಸ್ ಬೆಂಬಲಿಸುತ್ತಲೇ ಇದೆ ಎಂದು ಕಿಡಿ ಕಾರಿದೆ.
ಮಂಗಳವಾರ ರಾಜ್ಯ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದರು. ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಹಿಂದೂಗಳಾಗುವ ಐಎನ್‌ಸಿ ನಾಯಕರು ನಾಯಕರು, ಹಿಂದಿನಿಂದಲೂ ಹಿಂದೂಗಳನ್ನು ಹಾಗೂ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಲೇ ಬಂದಿದ್ದಾರೆ. ಜೊತೆ ಜೊತೆಗೆ ಹಿಂದೂ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿಗಳಿಗೆ ಹಾಗೂ ಅಂತಹ ಸಂಘಟನೆಗಳಿಗೆ ಕಾಂಗ್ರೆಸ್ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದು ಈಗ ಗುಟ್ಟಾಗಿ ಉಳಿದಿಲ್ಲ ಎಂದು ಬಿಜೆಪಿ ಟೀಕಿಸಿದೆ.

ಹಿಂದೂಗಳನ್ನು ಕಂಡರೆ ಸದಾ ದ್ವೇಷ ಕಾರುವ ಪಕ್ಷಗಳ ಜೊತೆ ಸ್ನೇಹ ಬೆಳೆಸುವ ಕಾಂಗ್ರೆಸ್, ಈಗ ಹಿಂದೂ ಧರ್ಮದ ಮೇಲೆ ತನಗಿರುವ ದ್ವೇಷವನ್ನು ತನ್ನ ಮಿತ್ರ ಪಕ್ಷಗಳಿಂದ ವ್ಯಕ್ತಪಡಿಸುತ್ತಿದೆ.
ಹಿಂದೂ ವಿರುದ್ಧದಇಂಡಿಯಾ ಮೈತ್ರಿಕೂಟ
ಕುಟುಂಬ ರಾಜಕಾರಣ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಹಿಂದೂ ವಿರೋಧಿ ಸ್ಥಿತಿ, ಹಿಂದೂ ಧರ್ಮ ಹಾಗೂ ದೇವರುಗಳ ಅವಹೇಳನ ಹೀಗೆ ಕಾಂಗ್ರೆಸ್‌ನ DNA ನಲ್ಲಿ ಅಡಕವಾಗಿರುವ ಗುಣಗಳನ್ನೇ ಹೊಂದಿರುವ ಕೆಲವು ಪಕ್ಷಗಳ ನಾಯಕರು, ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದನ್ನೇ ತಮ್ಮ ದಿನನಿತ್ಯದ ಕಾಯಕವಾಗಿಸಿಕೊಂಡಿದ್ದಾರೆ. ಸಾಲದ್ದಕ್ಕೆ, ಹಿಂದೂಗಳ ಮೇಲೆ ದ್ವೇಷ ಕಾರುವ ಈ ಒಕ್ಕೂಟಕ್ಕೆ I.N.D.I.A. ಮೈತ್ರಿಕೂಟವೆಂದು ಎಂಬ ಹೆಸರಿಟ್ಟುಕೊಂಡಿದ್ದಾರೆ ಎಂದು ಬಿಜೆಪಿ ಜರಿದಿದೆ.

ಇಂಡಿಯಾ ಮೈತ್ರಿಕೂಟ ದಲ್ಲಿ ಗುರುತಿಸಿಕೊಂಡಿರುವ ಪಕ್ಷಗಳ ನಾಯಕರು, ಹೊರ ಜಗತ್ತಿಗೆ ಪರಿಚಯವಾಗಿದ್ದು, ಅವರ ಹಿಂದೂ ವಿರೋಧಿ ಹಿನ್ನೆಲೆಯಿಂದಲೇ ಹೊರತು ಮತ್ತಾವ ಘನಂದಾರಿ ಕೆಲಸದಿಂದಲ್ಲ ಎಂದು ಕಿಡಿ ಕಾರಿದೆ.
ಕುಟುಂಬ ರಾಜಕಾರಣ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಹಿಂದೂ ವಿರೋಧಿ ಮನಸ್ಥಿತಿ, ಹಿಂದೂ ಧರ್ಮ ಹಾಗೂ ದೇವರುಗಳ ಅವಹೇಳನ ಹೀಗೆ ಕಾಂಗ್ರೆಸ್‌ನ ಡಿ.ಎನ್.ಎ ಯಲ್ಲಿ ಅಡಕವಾಗಿರುವ ಗುಣಗಳನ್ನೇ ಹೊಂದಿರುವ ಕೆಲವು ಪಕ್ಷಗಳ ನಾಯಕರು, ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದನ್ನೇ ತಮ್ಮ ದಿನನಿತ್ಯದ ಕಾಯಕವನ್ನಾಗಿಸಿಕೊಂಡಿದ್ದಾರೆ. ಸಾಲದ್ದಕ್ಕೆ, ಹಿಂದೂಗಳ…
— BJP Karnataka (@BJP4Karnataka) September 5, 2023
ಆಂತರ್ಯದಲ್ಲಿನ ಹಿಂದೂ ವಿರೋಧಿಗೆ ದಿದಿ ಜೈಕಾರ
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿರವರಿಗೆ ಹಿಂದೂಗಳ ನೆರಳನ್ನು ಕಂಡರೂ ಆಗುವುದಿಲ್ಲ. ಒಂದೆಡೆ ಶ್ರೀರಾಮ್ ತಮ್ಮ ಸಮಾಜವನ್ನು ಒಡೆಯುವುದಿಲ್ಲ ಅದನ್ನು ಹೇಳಬೇಡಿ ಎನ್ನುತ್ತಾ, ಇನ್ನೊಂದೆಡೆ ಪಕ್ಷ TMC ಯಲ್ಲಿ 'M ಎಂದರೆ ಮದರಸಾ C ಅಂದರೆ ಮತಾಂತರ (Conversion) ಎಂಬಂತೆ ತಮ್ಮ ಆಂತರ್ಯದಲ್ಲಿನ ಹಿಂದೂ ವಿರೋಧಿಗೆ ಅವರು ಜೈ ಎನ್ನುತ್ತಾರೆ ಎಂದು ಬಿಜೆಪಿ ಆರೋಪಿಸಿದೆ.
ರಾಹುಲ್ ಗಾಂಧಿಯವರ ಅತ್ಯಾಪ್ತ ಐಯುಎಂಎಲ್ (ಮುಸ್ಲಿಂ ಲೀಗ್) ಹಿಂದೂಗಳನ್ನು ದೇವಸ್ಥಾನದಲ್ಲಿ ನೇತು ಹಾಕಿ ಬೆಂಕಿ ಹಚ್ಚುತ್ತೇವೆ ಎಂದು ಬಹಿರಂಗವಾಗಿ ಘೋಷಣೆ ಕೂಗುತ್ತಿದೆ. ಹಿಂದೂಗಳನ್ನು ಈ ನೆಲದಿಂದ ಓಡಿಸಬೇಕೆಂಬುದೇ ಈ ಪಕ್ಷದ ಪ್ರಮುಖ ಸಿದ್ಧಾಂತ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಹಿಂದೂಗಳ ಮೇಲೆ ಎಡಪಕ್ಷಗಳ ದ್ವೇಷ
ಓಲೈಕೆ, ಕುಟುಂಬ ಮತ್ತು ಭ್ರಷ್ಟ ರಾಜಕಾರಣಕ್ಕೆ ಹೆಸರುವಾಸಿಯಾಗಿ, ಕುಖ್ಯಾತಿ ಪಡೆದಿರುವ RJD ಲಾಲೂ ಪ್ರಸಾದ್ ಯಾದವ್, ತಾವು ಮೇವು ಹಗರಣದಲ್ಲಿ ಜೈಲೂಟ ತಿಂದರೂ, ಹಿಂದೂಗಳು ಗೋಭಕ್ಷಕರು ಎಂದು ಸುಳ್ಳು ಹೇಳುತ್ತಿದ್ದಾರೆ.
ಇನ್ನು ಭಾರತ ಚೀನಾಕ್ಕೆ ಆದಿಯಾಗಿ ಕೆಲಸ ಮಾಡುವ ಎಡಪಕ್ಷಗಳು, ಹಿಂದೂಗಳು ಹಾಗೂ ಹಿಂದೂ ಧರ್ಮದ ಮೇಲೆ ಸದಾ ದ್ವೇಷ ಕಾರುತ್ತಿವೆ. ಒಂದೆಡೆ ಹಿಂದೂ ದೇವರುಗಳನ್ನೇ ಅವಹೇಳನ ಮಾಡುತ್ತಾ, ಮತ್ತೊಂದೆಡೆ ಭಾರತಕ್ಕೆ ಕಮ್ಮಿ ನಿಷ್ಠೆ ತೋರುವುದೇ ಈ ಪಕ್ಷಗಳ ಮುಖ್ಯ ಸಾಲು ಅಜೆಂಡಾ ಆಗಿದೆ.
ಸ್ಟಾಲಿನ್ ಹೇಳಿಕೆಗೆ ಕಾಂಗ್ರೆಸ್ ಬೆಂಬಲ: ಬಿಜೆಪಿ
ಈಗ ತಮಿಳುನಾಡಿನ DMK ಪಕ್ಷದ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ, ಅದನ್ನೂ ಶಾಶ್ವತವಾಗಿ ನಿರ್ಮೂಲನೆ ಮಾಡಬೇಕೆಂದು ಕರೆ ನೀಡಿದ್ದಾರೆ. ರಾಹುಲ್ ಗಾಂಧಿಯವರ ಕಾಂಗ್ರೆಸ್ ಇಂತಹ ಕೀಳು ಮಟ್ಟದ ಹೇಳಿಕೆಯನ್ನು ಖಂಡಿಸುವ ಬದಲು, ಎಲ್ಲಾ ರಾಜಕೀಯ ಪಕ್ಷಗಳಿಗೆ ಮಾತನಾಡುವ ಸ್ವಾತಂತ್ರ್ಯವಿದೆ ಎಂದು ಉದಯನಿಧಿಯವರ ಹಿಂದೂ ವಿರೋಧಿ ಹೇಳಿಕೆಗೆ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ಈ ಎಲ್ಲಾ ಹಿಂದೂ ವಿರೋಧಿ ರಾಜಕೀಯ ಪಕ್ಷಗಳು ಇಂಡಿಯಾ ಮೈತ್ರಿಕೂಟದ ಪ್ರಮುಖ ಸದಸ್ಯರು. ಈ ಸ್ವಾರ್ಥದ ಮೈತ್ರಿಕೂಟಕ್ಕೆ I.N.D.I.A. ಮೈತ್ರಿಕೂಟ ಎನ್ನುವ ಬದಲು ಹಿಂದೂ ವಿರೋಧಿ ಮೈತ್ರಿಕೂಟ ಎಂಬ ಹೆಸರು ಅತ್ಯಂತ ಸೂಕ್ತವಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
-
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications