Get Updates
Get notified of breaking news, exclusive insights, and must-see stories!

Good News: ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣ, ಬಿಗ್ ಅಪ್ಡೇಟ್ಸ್

ಬೆಂಗಳೂರು: ಕರ್ನಾಟಕದಲ್ಲಿ ರೈಲ್ವೆ ವಿದ್ಯುದೀಕರಣ ಪೂರ್ಣಗೊಳಿಸುವ ಪ್ರಕ್ರಿಯೆಗೆ ಪೂರಕವಾಗಿ ಮತ್ತೊಂದು ಯಶಸ್ವಿ ಕಾರ್ಯ ಪೂರ್ಣಗೊಂಡಿದೆ. ರಾಜ್ಯದಲ್ಲಿ ಅತೀ ಸವಾಲಿನ ರೈಲು ಮಾರ್ಗವಾಗಿರುವ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ವಿದ್ಯುದೀಕರಣ ಕೆಲಸ ಪೂರ್ಣಗೊಂಡಿದೆ. ಈ ಬಗ್ಗೆ ನೈಋತ್ಯ ರೈಲ್ವೆ ವಿಭಾಗವು (South Western Railway) ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಇಂದಿನ ಈ ಸಾಧನೆ ರಾಜ್ಯದಲ್ಲಿ ರೈಲ್ವೆ ಮಾರ್ಗದಲ್ಲಿ ಶೇಕಡಾ 100 ರಷ್ಟು ವಿದ್ಯುದೀಕರಣದ ಗುರಿ ತಲುಪಲು ಸಹಕಾರಿಯಾಗಿದೆ.

ಭಾನುವಾರ (ಡಿಸೆಂಬರ್ 28) ರಂದು ₹93.55 ಕೋಟಿ ವೆಚ್ಚದಲ್ಲಿ ಯಶಸ್ವಿ ವಿದ್ಯುತ್ ಲೋಕೋಮೋಟಿವ್ ಪ್ರಯೋಗ ಮಾಡಲಾಯಿತು. 57 ಸುರಂಗಗಳು ಮತ್ತು 258 ಸೇತುವೆಗಳನ್ನು ಹೊಂದಿರುವ ತಾಂತ್ರಿಕವಾಗಿ ಬೇಡಿಕೆಯಿರುವ ಈ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ 55 ಕಿಲೋ ಮೀಟರ್ ಉದ್ದದ ವಿದ್ಯುದ್ದೀಕರಣ ಪೂರ್ಣಗೊಂಡಿದೆ ಎಂದು ಬೆಂಗಳೂರು ಮತ್ತು ಮೈಸೂರು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Sakleshpur-Subrahmanya Road Railway line 55km Electrification Done Amide Eco Challenges SWR

ಇಂಧನ ಮುಕ್ತ ರೈಲು ಕಾರ್ಯಾಚರಣೆ: ಶೀಘ್ರವೇ ವಿಬಿ ರೈಲು ಸೇವೆ

ದೇಶಾದ್ಯಂತ ರೈಲ್ವೆ ಡಬ್ಲಿಂಗ್ ಮತ್ತು ವಿದ್ಯುದೀಕರಣ ಕೈಗೊಂಡಿರುವ ಭಾರತೀಯ ರೈಲ್ವೆ ಇಲಾಖೆಗೆ ರಾಜ್ಯದ ಈ ಮಾರ್ಗದಲ್ಲಿ ವಿದ್ಯುದೀಕರಣ ಪ್ರಕ್ರಿಯೆ ಸವಾಲಾಗಿತ್ತು. ಅದರ ನಡುವೆ ಕಾರ್ಯ ಯಶಸ್ವಿಯಾಗಿದ್ದು, ಇಲಾಖೆಗೆ ಇದು ಮತ್ತೊಂದು ಮೈಲಿಗಲ್ಲು ಸಾಧನೆಯಾಗಿದೆ. ಇದರಿಂದ ಬೆಂಗಳೂರು-ಮಂಗಳೂರು ರೈಲು ಕಾರಿಡಾರ್‌ನಲ್ಲಿ ಡೀಸೆಲ್ ಮುಕ್ತ ರೈಲುಗಳ ಕಾರ್ಯಾಚರಣೆಗಳನ್ನು ಇನ್ನು ಮುಂದೆ ಸಕ್ರಿಯಗೊಳಿಸಲಾಗುತ್ತದೆ. ಈ ಪರಿಸರ ಸ್ನೇಹಿ ಕ್ರಮವಾದ ವಿದ್ಯುದೀಕರಣದಿಂದ ವಾರ್ಷಿಕವಾಗಿ ಅಂದಾಜು 1.5 ಮಿಲಿಯನ್ ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆ ಆಗುತ್ತದೆ.

New Railway Line: ಗಿಣಿಗೇರಾ-ರಾಯಚೂರು ರೈಲು ಮಾರ್ಗ ಯೋಜನೆ ಅಪ್ಡೇಟ್‌, ತೆಲಂಗಾಣಕ್ಕೆ ಸಂಪರ್ಕ ಸುಲಭ
ಈ ರೈಲು ಮಾರ್ಗವು ಇಂಧನ ಮುಕ್ತ ಮಾರ್ಗವಾಗುತ್ತಿದ್ದಂತೆ ಭವಿಷ್ಯದಲ್ಲಿ ವಂದೇ ಭಾರತ್ ರೈಲುಗಳ ಕಾರ್ಯಾಚರಣೆಗೆ ಇಲಾಖೆ ಉತ್ಸಾಹ ತೋರಿಸಲಿದೆ. ಈಗಾಗಲೇ ಬೆಂಗಳೂರು-ಮಡಗಾಂವ್ ಮಾರ್ಗವಾಗಿ ವಂದೇ ಭಾರತ್ ರೈಲು ಕಾರ್ಯಾಚರಣೆ ಪ್ರಸ್ತಾಪಿಸಲಾಗಿದೆ.

120 ಕಿಮೀ. ವೇಗದಲ್ಲಿ ಚಲಿಸುವಂತೆ ವಿನ್ಯಾಸ

ಇಲ್ಲಿ ವಿದ್ಯುದ್ದೀಕರಣ ಯೋಜನೆಯು ಡಿಸೆಂಬರ್ 2023ರಿಂದ ಆರಂಭವಾಯಿತು. ಒಟ್ಟು 93.55 ಕೋಟಿ ರೂ. ವೆಚ್ಚದಲ್ಲಿ ವಿದ್ಯುದ್ದೀಕರಣ ನಡೆದಿದೆ. ಇದರಲ್ಲಿ ಐದು ಸ್ವಿಚಿಂಗ್ ಸ್ಟೇಷನ್‌ಗಳ ನಿರ್ಮಾಣ ಮತ್ತು ಸಂಪೂರ್ಣ ಪ್ರದೇಶದ ಓವರ್‌ಹೆಡ್ ಸಹ ಸೇರಿದೆ. ಓವರ್‌ಹೆಡ್ ಉಪಕರಣಗಳನ್ನು ಗರಿಷ್ಠ 120 ಕಿಮೀ ವೇಗಕ್ಕೆ ವಿನ್ಯಾಸಗೊಳಿಸಲಾಗಿದೆ. ಸುರಕ್ಷತೆ ಮತ್ತು ಸೂಕ್ತ ಕಾರ್ಯಾಚರಣೆಗೆ ಆದ್ಯತೆ ನೀಡಲಾಗಿದೆ. ಪೂರಕವಾಗಿ ಬಿಡಿ ಬ್ರಾಕೆಟ್‌ಗಳನ್ನು ಸ್ಥಾಪಿಸಲಾಗಿದೆ. ಹಲವು ಪರೀಕ್ಷೆಗಳನ್ನು ಕೈಗೊಂಡು ಪರಿಶೀಲಿಸಲಾಗಿದೆ.

ಕಡಿದಾದ ಇಳಿಜಾರು ಪ್ರದೇಶದಲ್ಲಿ 830 ಮೀಟರ್‌ಗಳವರೆಗೆ ವಿಸ್ತರಿಸಿದ ಓವರ್‌ಹೆಡ್ ವ್ಯವಸ್ಥೆ ಮಾಡಲಾಗಿದೆ. ಭಾರೀ ಮಳೆಗಾಲ ಎದುರಾದರೆ, ಭೂಕುಸಿತ ಸಂಭವಿಸಿ ಕಲ್ಲುಬಂಡೆ ಕಾಣುವಂತಾಗಿತ್ತು. ಇಲ್ಲಿ ಮಣ್ಣು ಇಲ್ಲದಂತಾಗಿತ್ತು. ಇಂತಹ ಒಂದಷ್ಟು ಗಂಭೀರ ಅಡೆತಡೆಗಳು ಎದುರಾದರೂ ಸಹಿತ ಕಾರ್ಯವನ್ನು ಮುಂದುವರಿಸಿ ಯಶಸ್ವಿಗೊಳಿಸಲಾಗಿದೆ. ಶನಿವಾರ ವಿದ್ಯುದ್ದೀಕರಣ ಮತ್ತು ವಿದ್ಯುತ್ ಲೋಕೋಮೋಟಿವ್ ಪ್ರಯೋಗ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ವಿದ್ಯುತ್ ಕೇಬಲ್ ಎಳೆಯಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ಹಂಚಿಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+