ಶಾಂತಿಗ್ರಾಮದ ಬಳಿ 'ಶಿರಾಡಿ ಘಾಟ್' ಸಿನ್ಮಾ ಮಂದಿ ಸಾವು

ಸಕಲೇಶಪುರ, ಮಾ.3: ಶಿರಾಡಿ ಘಾಟ್ ಹೆಸರಿನ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಮರಳುತ್ತಿದ್ದ ಚಿತ್ರತಂಡಕ್ಕೆ ಆಘಾತ ಎದುರಾಗಿದೆ. ಶಾಂತಿಗ್ರಾಮದ ಬಳಿ ಭೀಕರ ಅಪಘಾತದಲ್ಲಿ ಚಿತ್ರತಂಡ ಇಬ್ಬರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಹಾಸನ ಜಿಲ್ಲೆಯ ಶಾಂತಿ ಗ್ರಾಮದಲ್ಲಿ ಕ್ವಾಲೀಸ್ ಹಾಗೂ ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕ್ವಾಲೀಸ್ ನಲ್ಲಿದ್ದ ಚಿತ್ರತಂಡದ ಸದಸ್ಯರ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Sakleshpur: Accident on Shiradi Ghat - Two dead, many injured of film crew

ಮೃತಪಟ್ಟವರನ್ನು ಸಹಾಯಕ ಸಿಬ್ಬಂದಿ ಚಿರಂಜೀವಿ(32) ಮತ್ತು ಮಾಲತೇಶ್(35) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಕ್ವಾಲೀಸ್ ನಲ್ಲಿದ್ದ ಮೂವರಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯಗೊಂಡ ಮೂವರ ಪೈಕಿ ರಾಜೇಶ್ ಎಂಬುವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಬಿದ್ದರೆ ಬೆಂಗಳೂರಿಗೆ ಕರೆದೊಯ್ಯಲಾಗುವುದು ಎಂದು ಚಿತ್ರತಂಡ ಹೇಳಿದೆ.

ಘಟನಾ ಸ್ಥಳಕ್ಕೆ ಶಾಂತಿ ಗ್ರಾಮ ಠಾಣೆ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+