ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗ್ಳೂರು: ಸದಾನಂದ ಗೌಡ ಭಾವಚಿತ್ರವಿದ್ದ ಬ್ಯಾನರ್ ಗೆ ಮಸಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್, 15: ನೇತ್ರಾವತಿ ನದಿ ತಿರುವು ಯೋಜನೆಗೆ ಸಮ್ಮತಿ ನೀಡಿದ ಕೇಂದ್ರ ಕಾನೂನು ಸಚಿವ ಸದಾನಂದ ಗೌಡರ ವಿರುದ್ಧ ನಗರದ ಸಹ್ಯಾದ್ರಿ ಸಂಚಯದ ಸದಸ್ಯರು ಕುಪಿತರಾಗಿದ್ದು, ಅವರ ಭಾವಚಿತ್ರವುಳ್ಳ ಬ್ಯಾನರ್‌ಗಳಿಗೆ ಸೋಮವಾರ ಮಸಿ ಬಳಿದಿದ್ದಾರೆ.

ನಗರದಲ್ಲಿ ನಡೆಯುವ ವಾರ್ಷಿಕ ಸಮಾರಂಭಕ್ಕೆ ಸ್ವಾಗತ ಕೋರಿ ಸದಾನಂದ ಗೌಡರ ಭಾವಚಿತ್ರವಿರುವ ಬ್ಯಾನರ್ ಗಳನ್ನು ಲಾಲ್‌ಬಾಗ್, ಮಣ್ಣಗುಡ್ಡೆ , ಲೇಡಿಹಿಲ್ ಸ್ಥಳದಲ್ಲಿ ಹಾಕಲಾಗಿತ್ತು. ಇದನ್ನು ಗಮನಿಸಿದ ನೇತ್ರಾವತಿ ನದಿ ಪರ ಹೋರಾಟ ನಡೆಸುತ್ತಿರುವ ಸಹ್ಯಾದ್ರಿ ಸಂಚಯದ ಸದಸ್ಯರು ಈ ಕೃತ್ಯ ಎಸಗಿದ್ದಾರೆ.

ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಹ್ಯಾದ್ರಿ ಸಂಚಯದ ಸದಸ್ಯರು ಈ ಬಾರಿ ಸದಾನಂದ ಗೌಡರ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆಯ ಇನ್ನೊಂದು ಘಟಕ್ಕೆ ಕಾಲಿಟಿದ್ದೇವೆ. ಮುಂದಿನ ದಿನಗಳಲ್ಲಿ ಆರೋಗ್ಯ ಸಚಿವ ಯು.ಟಿ ಖಾದರ್ ಹಾಗೂ ಮಂಗಳೂರು ಉಸ್ತುವಾರಿ ಸಚಿವ ರಮಾನಾಥ ರೈ ಅವರ ಭಾವ ಚಿತ್ರಗಳಿಗೆ ಮಸಿ ಬಳಿಯಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.[ಸುಪ್ರೀಂಕೋರ್ಟಿನಿಂದ ಕೇಂದ್ರ ಸಚಿವ ಡಿವಿಎಸ್ ಗೆ ರಿಲೀಫ್]

Sahyadri sanchayana team members smeared ink to banner of Sadananda gowda in Mangaluru

ಹೊಸ ಬೆಳಕು ಯೋಜನೆ ಪ್ರಚಾರಕ್ಕೆ ನಟಿ ರಮ್ಯಾ ಬೇಕಿತ್ತಾ? : ಈಶ್ವರಪ್ಪ

ಉಡುಪಿ, ಡಿ. 14: ರಾಜ್ಯ ಸರಕಾರವು ಎಲ್ ಇಡಿ ಬಲ್ಬ್ ವಿತರಣೆಯ 'ಹೊಸ ಬೆಳಕು' ಯೋಜನೆ ಜಾರಿಗೆ ತರಲು ಪ್ರಚಾರಕ್ಕೆ ನಟಿ ರಮ್ಯ ಅವರನ್ನು ಬಳಸಿಕೊಳ್ಳಬೇಕಿತ್ತಾ? ಬೇರೆ ತಾರೆಯರು ಇರಲಿಲ್ಲವೇ? ಅದರಲ್ಲೂ ರಾಜಕೀಯ ಏಕೆ? ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದರು.[ನಿನ್ನನ್ನು ಯಾವನೋ ರೇಪ್ ಮಾಡಿದ್ರೆ ನಾ ಏನ್ ಮಾಡಕಾಗುತ್ತೆ: ಈಶ್ವರಪ್ಪ]

ಉಡುಪಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೊಗಳೆ ಬಿಡುವುದನ್ನು ಮೊದಲು ನಿಲ್ಲಿಸಬೇಕು. ಮುಂಬರುವ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಿಡಿತದಲ್ಲಿರುವ ಒಂದು ಸ್ಥಾನವನ್ನೂ ಕಾಂಗ್ರೆಸ್ ಗೆದ್ದರೂ ಸಿದ್ದು ಹೇಳಿದಂತೆ ಕೇಳುವೆ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ಸರ್ಕಾರವೇ ಅಸ್ಥಿತ್ವದಲ್ಲಿಲ್ಲ. ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.

English summary
Sahyadri sanchayana team members smeared ink to banner of Sadananda gowda in Mangaluru, on Monday, December 14th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X