ಸಹಕಾರ ಸಾರಿಗೆ ಮುಷ್ಕರ; ಕೆಎಸ್ಆರ್‌ಟಿಸಿಯಿಂದ ಬಸ್ ಸೇವೆ

ಬೆಂಗಳೂರು, ಫೆಬ್ರವರಿ 18 : ಸಹಕಾರ ಸಾರಿಗೆ ನಿಗಮದ ನೌಕರರು ಬಸ್ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜನರ ಅನುಕೂಲಕ್ಕಾಗಿ ಕೆಎಸ್ಆರ್‌ಟಿಸಿ ಬಸ್ ಓಡಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

16/2/2020ರಿಂದ ಸಹಕಾರ ಸಾರಿಗೆ ಸಂಸ್ಥೆಯ ನೌಕರರು ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸ್ಥೆಯ ನೆರವಿಗೆ ಸರ್ಕಾರ ಬರಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಜನರಿಗೆ ತೊಂದರೆಯಾಗಿದೆ.

ಬಸ್ ಸೇವೆ ಸ್ಥಗಿತಗೊಂಡಿರುವುದರಿಂದ ಕೆಎಸ್ಆರ್‌ಟಿಸಿಯ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಮಂಗಳೂರು ವಿಭಾಗದ ವತಿಯಿಂದ ವಿವಿಧ ಮಾರ್ಗದಲ್ಲಿ ಬಸ್ ಓಡಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Sahakara Sarige

ಕೊಪ್ಪದಿಂದ ಶಿವಮೊಗ್ಗ, ತೀರ್ಥಹಳ್ಳಿ, ಮೇಲ್ಪಾಲ್, ಬಾಳೆಹೊನ್ನೂರು, ಮೂಡಬೂರು, ಮಲ್ಲಂದೂರು, ಕಟ್ಟಿನಮನೆಗೆ ಬಸ್ ಓಡಿಸಲಾಗುತ್ತದೆ.

ಶೃಂಗೇರಿ-ಕೊಪ್ಪ-ಶಿವಮೊಗ್ಗ, ಉಡುಪಿ-ಶೃಂಗೇರಿ-ಬಾಳೆಹೊನ್ನೂರು, ಉಡುಪಿ-ಶೃಂಗೇರಿ-ಚಿಕ್ಕಮಗಳೂರು, ಕೊಲ್ಲೂರು-ಕುಂದಾಪುರ-ಶೃಂಗೇರಿ-ಕೊಪ್ಪ, ಉಡುಪಿ-ಕೊಪ್ಪ-ಬೀರೂರು ಮಾರ್ಗದಲ್ಲಿ ಬಸ್ ಸಂಚಾರ ನಡೆಸಲಿದೆ.

ಒಟ್ಟು 16 ಬಸ್‌ಗಳಿಂದ 56 ಟ್ರಿಪ್ ಬಸ್‌ಗಳನ್ನು ಓಡಿಸಿ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಅವಶ್ಯಕತೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿರುತ್ತದೆ.

ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಶಕ್ತಿಮೀರಿ ಪ್ರಯತ್ನ ನಡೆಸಿದೆ. ಆದರೆ, ಸರ್ಕಾರದಿಂದ ನೆರವು ಸಿಗದಿರುವ ಹಿನ್ನಲೆಯಲ್ಲಿ ಬಸ್ ಸೇವೆಯನ್ನು ನಿಲ್ಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+