ಸಚಿನ್ ತೆಂಡೂಲ್ಕರ್ ಆಂಧ್ರಾಕ್ಕೆ ಬಂದಿದ್ದು ಯಾಕೆ?

Posted By:
Subscribe to Oneindia Kannada

ನಲ್ಲೂರು(ಆಂಧ್ರ), ನವೆಂಬರ್ 16: ಕ್ರಿಕೆಟ್ ದಂತಕಥೆ, ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ತಾನು ಎರಡು ವರ್ಷದ ಹಿಂದೆ ದತ್ತು ಪಡೆದಿದ್ದ ಊರಿಗೆ ಬಂದು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಆಂಧ್ರ ಪ್ರದೇಶದ ನಲ್ಲೂರು ಜಿಲ್ಲೆಯ ಪುಟ್ಟಮ್ರಾಜು ಕಾಂಡ್ರಿಗವೇ ಎರಡು ವರ್ಷದ ಹಿಂದೆ ದತ್ತು ಪಡೆದಿದ್ದ ಊರು.[ಸಂಸತ್ ನಲ್ಲಿ ಕ್ರಿಕೆಟ್ ದೇವರ ದರ್ಶನ, ಇನ್ನಷ್ಟು ಸುದ್ದಿಗಳು]

Sachin Tendulkar returns to a transformed Andhra village

ಸಮುದಾಯ ಭವನದೊಂದಿಗೆ ಜನರಿಗೆ ನಿರ್ಮಿಸಲಾದ ವಸತಿನಿಲಯಗಳನ್ನು ಸಚಿನ್ ಉದ್ಘಾಟಿಸಿದರು. ಜನರೊಂದಿಗೆ ತಮ್ಮ ಕಾಲವನ್ನು ಕಳೆದರು. ಹಾಗೆಯೇ ಶಾಲೆಯಲ್ಲಿ ಮಕ್ಕಳೊಂದಿಗೆ ಸಂಭಾಷಣೆ ನಡೆಸಿದರು.

2014ರಲ್ಲಿ ಸಚಿನ್ ಪುಟ್ಟಮ್ರಾಜು ಗ್ರಾಮವನ್ನು ಮೋದಿಯವರ ಆದರ್ಶಗ್ರಾಮ ಯೋಜನೆಯಡಿಯಲ್ಲಿ ದತ್ತು ಪಡೆದಿದ್ದರು. ಹಾಗು ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಬಹುತೇಕ ಅನುಕೂಲಗಳನ್ನು ಮಾಡಲಾಗಿತ್ತು.[ಕ್ರಿಕೆಟ್ 'ದೇವರು' ಸಚಿನ್ ಅವರ ಸಂಶೋಧನೆ ಬಗ್ಗೆ ಟ್ವೀಟ್ ಕಾಮಿಡಿ]

Sachin Tendulkar returns to a transformed Andhra village

ಸಚಿನ್ ಈ ಗ್ರಾಮವನ್ನು ದತ್ತು ಪಡೆಯುವ ಮೊದಲು ಯಾವ ಮೂಲಸೌಕರ್ಯವೂ ಇರಲಿಲ್ಲ. ಮಾಹಿತಿಯ ಪ್ರಕಾರ ರಸ್ತೆಗಳು, ಕಾಲುದಾರಿಗಳು, ಗಿಡಮರಗಳಿಗೆ ಅನುಕೂಲವಾಗುವಂತೆ ಒಳಚರಂಡಿ ವ್ಯವಸ್ಥೆ, 24ಗಂಟೆಗಳ ನೀರು ಮತ್ತು ವಿದ್ಯುತ್ ವ್ಯವಸ್ಥೆಯನ್ನು ಈಗ ಕಲ್ಪಿಸಲಾಗಿದೆ.

ಈ ಸಂದರ್ಭಗಳಲ್ಲಿ ಸಚಿನ್ ಇಲ್ಲಿನ ಮಕ್ಕಳಿಗೆ ಕ್ರಿಕೆಟ್ ಬ್ಯಾಟ್ ಗಳನ್ನು ಹಂಚಿದರು.

ಸಚಿನ್ ಎಂಪಿ ಫಂಡ್ ನಿಂದ ಈ ಹಳ್ಳಿ ಅಭಿವೃದ್ಧಿಗೆ 2.9ಕೋಟಿ ಹಣವನ್ನು ವ್ಯಯಿಸಿದ್ದು, ಸರ್ಕಾರದಿಂದಲೂ ನೆರವು ಸಂದಾಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cricket icon and Rajya Sabha MP Sachin Tendulkar on Wednesday visited his adopted village of Puttamraju Kandriga in Andhra's Nellore district.
Please Wait while comments are loading...