ನಾವು ಅದರ ಬಗ್ಗೆ ಮಾತನಾಡಿದರೆ ತೇಜೋವಧೆ ಮಾಡಿದಂತೆ: ಸೊಸೆ ಆರೋಪಕ್ಕೆ S.ನಾರಾಯಣ್ ಪ್ರತಿಕ್ರಿಯೆ
ಬೆಂಗಳೂರು, ಸೆಪ್ಟಂಬರ್ 11: ಖ್ಯಾತ ನಿರ್ದೇಶಕ, ಕಲಾಸಾಮ್ರಾಟ್ ಎಸ್.ನಾರಾಯಣ್ ಮತ್ತವರ ಕುಟುಂಸ್ಥರ ಮೇಲೆ ಗುರುತರ ಆರೋಪ ಕೇಳಿ ಬಂದಿದೆ. ಸ್ವತಃ ಪುತ್ರ ಪವನ್ ಪತ್ನಿಯೇ (ಸೊಸೆ) ಅತ್ತೆ, ಮಾವ ಹಾಗೂ ಪತಿ ಮೇಲೆ ಆರೋಪ ಮಾಡಿದ್ದರಿಂದ FIR ದಾಖಲಾಗಿದೆ. ಈ ಆರೋಪ ಕುರಿತು ಎಸ್. ನಾರಾಯಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿದ್ದೇನು, ಅಸಲಿಗೆ ಸೊಸೆ ಮನೆಬಿಟ್ಟು ಹೋಗಿದ್ದು ಯಾವಾಗ? ಇಲ್ಲಿದೆ ಮಾಹಿತಿ.
ತಮ್ಮ ಮೇಲಿನ ಆರೋಪ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್. ನಾರಾಯಣ್ ಅವರು, ಸೊಸೆಗೆ ನಾವು ಅವರಿಗೆ ಹಿಂಸೆ ಕೊಟ್ಟಿದ್ದೇವೆ ಎಂದು ಒಂದು ವರ್ಷದ ಬಳಿಕ ಅವರು ದೂರು ನೀಡಿದ್ದಾರೆ. ಈ ದೂರು ಕೋರ್ಟ್‌ಗೆ ಹೋಗಿದೆ. ಅದರ ಬಗ್ಗೆ ನಾನು ಮಾತನಾಡಿದರೆ ಅವರಿಗೇ ಅವಮಾನ ಮಾಡಿದಂತಾಗುತ್ತದೆ. ನಾನು ಹೆಣ್ಣುಮಕ್ಕಳಿಗೆ ಗೌರವ ಕೊಡುತ್ತೇನೆ ಎಂದಿದ್ದಾರೆ.

ಪಾಪಾ ಹೆಣ್ಮಗು ಅಲ್ವಾ. ಅದರ ಬಗ್ಗೆ ಮಾತನಾಡಿದರೆ ಅವರಿಗೆ ತೇಜೋವಧೆ ಮಾಡಿದಂತಾಗುತ್ತದೆ. ವರದಕ್ಷಿಣಿ ಕಿರುಕುಳ ಆರೋಪ ಪ್ರಶ್ನೆಗೆ ಉತ್ತರಿಸಿದ ಅವರು, ಈ ದೇಶದಲ್ಲಿ ಎಲ್ಲ ಹೆಣ್ಣುಮಕ್ಕಳು ಮಾಡುವುದು ಅದೊಂದೆ ತಾನೆ. ನನ್ನ ವ್ಯಕ್ತಿತ್ವ, ನಾನು ಏನೆಂಬುದು ಎಲ್ಲರಿಗೂ ಗೊತ್ತಿದೆ. ಮಹಿಳೆಯರನ್ನು ಗೌರವದಿಂದ ಕಾಣುವಂತವರು ನಾವು ಎಂದು ಅವರು ಹೇಳಿದ್ದಾರೆ.
ಸೊಸೆ ಮನೆ ಬಿಟ್ಟು ಹೋಗಿಯೇ ಒಂದು ವರ್ಷವಾಯಿತು. ಈಗ ಹಲ್ಲೆ ಮಾಡಿದ್ದೇವೆ ಎಂದು ದೂರು ಕೊಟ್ಟಿದ್ದಾರೆ. ದೇಶದಲ್ಲಿ ರೆಗ್ಯೂಲರ್ ಆಗಿ ಮಾಡೋದು ಇದೇ ತಾನೆ. ಅವರಿಗೆ ಎಲ್ಲಿ ಸುಃಖ, ಸಂತೋಷ ಸಿಗುತ್ತೋ ಅಲ್ಲಿಗೆ ಹೋಗಿದ್ದಾರೆ ಎನ್ನುವ ಮೂಲಕ ತಮ್ಮ ಮೇಲಿನ ಆರೋಪವನ್ನು ಅವರು ನಿರಾಕರಿಸಿದ್ದಾರೆ.
ಎಸ್.ನಾರಾಯಣ ಕುಟುಂಬದ ಮೇಲಿನ ಆರೋಪವೇನು?
ತನ್ನ ಪತಿ ಪವನ್ ನಾರಾಯಣ್ ಅಷ್ಟಾಗಿ ಓದಿಕೊಂಡಿಲ್ಲ. ಅವರಿಗೆ ಹಾಗಾಗಿ ಕೆಲಸ ಸಿಕ್ಕಿರಲಿಲ್ಲ. ಕಲಾಸಾಮ್ರಾಟ್ ಸಿನಿಮಾ ಸಂಸ್ಥೆ ತೆಗೆದಿದ್ದರು. ಅದಕ್ಕಾಗಿ ಹತ್ತು ಲಕ್ಷ ಹಣವನ್ನು ನಾನು ನನ್ನ ತಾಯಿಯ ಚಿನ್ನಾಭರಣ ಮಾಡಿ ನೀಡಿದ್ದೆ. ಆದರೆ ಸಂಸ್ಥೆ ಲಾಸ್ ಆಯಿತು. ಖರ್ಚು ವೆಚ್ಚ ಸರಿದೂಗಿಸಲು ನಾನು ಮತ್ತೆ ಸಾಲ ಮಾಡಿ ನೀಡಿದ್ದೆ. ಮನೆ ಸಂಸಾರ ಜವಾಬ್ದಾರಿ ನಾನೇ ನೋಡಿಕೊಳ್ಳುತ್ತೇನೆ ಎಂದು ಸೊಸೆ ದೂರು ನೀಡಿದ್ದಾರೆ.
ಅಲ್ಲದೇ ಇಷ್ಟೆಲ್ಲ ಆದ ಮೇಲೂ ಹಣಕ್ಕೆ ಮತ್ತೆ ಬೇಡಿಕೆ ಇಟ್ಟಿದ್ದಾರೆ. ವರದಕ್ಷಿಣಿ ತರುವಂತೆ ಕಿರುಕುಳ ನೀಡಿ, ಹಲ್ಲೆ ಮಾಡಿ ಮನೆಯಿಂದ ಆಚೆ ಹಾಕಿದ್ದಾರೆ ಎಂದು ಪತಿ ಮತ್ತು ಅತ್ತೆ, ಕುಟುಂಬಸ್ಥರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಸ್.ನಾರಾಯಣ್ ಹಾಗೂ ಅವರ ಪುತ್ರ ಪವನ್ ಮೇಲೆ ಎಫ್‌ಐಆರ್ ದಾಖಲಾಗಿದೆ.












Click it and Unblock the Notifications