ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಬಿಬಿಎಸ್ ಪೂರ್ಣಗೊಂಡ ಬಳಿಕ ಗ್ರಾಮೀಣ ಸೇವೆ ಕಡ್ಡಾಯ

|
Google Oneindia Kannada News

ಬೆಂಗಳೂರು, ಜೂ. 03 : ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದವರು ಇನ್ನು ಮುಂದೆ ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗಿದೆ. ಕಡ್ಡಾಯ ಸೇವಾ ತರಬೇತಿ ವಿಧೇಯಕ 2012ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಅವರು ಈ ಕುರಿತು ಮಾಹಿತಿ ನೀಡಿದರು. ಎಂಬಿಬಿಎಸ್ ಕೋರ್ಸ್ ಮುಗಿಸಿದವರು ಗ್ರಾಮೀಣ ಭಾಗದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಹಿ ಹಾಕಿದ್ದು, ತಕ್ಷಣದಿಂದಲೇ ವಿಧೇಯಕ ಜಾರಿಗೆ ಬರಲಿದೆ ಎಂದು ಹೇಳಿದರು. [ಗ್ರಾಮೀಣ ಸೇವೆ ತಪ್ಪಿಸಿದರೆ ವೈದ್ಯರಿಗೆ ದಂಡ!]

sharan prakash patil

ಎಂಬಿಬಿಎಸ್ ಕೋರ್ಸ್ ಮುಗಿಸಿದ ತಕ್ಷಣ ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ದಂಡ ಕಟ್ಟಿ ಈ ನಿಯಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ. ಈ ವಿಧೇಯಕ ಜಾರಿಗೆ ಬಂದರೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ಕಡಿಮೆಯಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. [ವೃತ್ತಿ ಶಿಕ್ಷಣ ಶುಲ್ಕ ದುಬಾರಿ]

ಕಡ್ಡಾಯ ಸೇವಾ ತರಬೇತಿ ವಿಧೇಯಕ-2012ರ ಅನ್ವಯ ಅನಿವಾಸಿ ಭಾರತೀಯರು ಕಾಮೆಡ್-ಕೆ, ಸರ್ಕಾರಿ ಕೋಟಾ ಸೇರಿದಂತೆ ಕರ್ನಾಟಕದ ಕಾಲೇಜುಗಳಲ್ಲಿ ಎಂಬಿಬಿಎಸ್, ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯುವವರು ಗ್ರಾಮೀಣ ಭಾಗದಲ್ಲಿ 1 ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎಂದರು. [ರಾಜ್ಯದಲ್ಲಿ ಮೂರು ವೈದ್ಯಕೀಯ ಕಾಲೇಜು ಆರಂಭ]

ಗ್ರಾಮೀಣ ಸೇವೆ ಮಾಡಲೇಬೇಕು : ಎಂಬಿಬಿಎಸ್ ಪೂರ್ಣಗೊಳಿಸಿದವರು ತಕ್ಷಣ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಹೋದರೆ ಅಂತಹವರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕಾಗಿಲ್ಲ. ಆದರೆ, ಸ್ನಾತಕೋತ್ತರ ಪದವಿ ಮುಗಿದ ಬಳಿಕ ಸೇವೆ ಸಲ್ಲಿಸುವುದು ಅನಿವಾರ್ಯವಾಗಲಿದೆ.

ಎಂಬಿಬಿಎಸ್ ಪೂರ್ಣಗೊಳಿಸಿರುವವರಿಂದ ಯಾವ ರೀತಿ ಸೇವೆ ಪಡೆಯಬೇಕು? ಎಲ್ಲಿಗೆ ಅವರನ್ನು ನಿಯೋಜನೆ ಮಾಡಬೇಕು ಎಂಬ ಬಗ್ಗೆ ಒಂದುವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಶರಣಪ್ರಕಾಶ್ ಪಾಟೀಲ ಅವರು ಹೇಳಿದರು.

English summary
Karnataka medical education minister Sharan Prakash Patil said, rural service mandatory for MBBS graduates in state. President Pranab Mukherjee has approved forKarnataka Compulsory Service bill 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X