Government Employee: ಸರ್ಕಾರಿ ನೌಕರರ ಗೃಹ ನಿರ್ಮಾಣ ಮುಂಗಡ ಹಣ ಪಡೆಯಲು ನಿಯಮಗಳು

ಬೆಂಗಳೂರು, ಜುಲೈ 30: ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಗೃಹ ನಿರ್ಮಾಣದ ಮುಂಗಡ ಮಂಜೂರು ಮಾಡುತ್ತದೆ. ಆದರೆ ಇದಕ್ಕೆ ನಿಯಮಗಳು ಅನ್ವಯವಾಗುತ್ತವೆ. ಈ ಕುರಿತು ಸರ್ಕಾರ ಹೊರಡಿಸಿರುವ ಆದೇಶದ ವಿವರಗಳು ಇಲ್ಲಿವೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎನ್‌. ಲಕ್ಷ್ಮಣ, ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಆಡಳಿತ & ಮುಂಗಡ) ಆದೇಶದಲ್ಲಿ ವಿವರಣೆ ನೀಡಿದ್ದಾರೆ.

Rule To Take House Building Advance For Government Employee

ಆದೇಶ ರಾಜ್ಯ ಸಿವಿಲ್ ಸೇವೆಯ ಅಧಿಕಾರಿ ಮತ್ತು ನೌಕರರ ಗೃಹ ನಿರ್ಮಾಣ ಮುಂಗಡ ಮಂಜೂರು ಮಾಡುವ ಬಗ್ಗೆ ಷರತ್ತು ಮತ್ತು ನಿಬಂಧನೆಗಳನ್ನು ಹೊರಡಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಸರ್ಕಾರಿ ಆದೇಶ ದಿನಾಂಕ 20/01/2014 ಓದಲಾಗಿದೆ.

ವಿವರಗಳು: ಸರ್ಕಾರಿ ಆದೇಶದಲ್ಲಿ ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಿಗೆ ಅವರು ಪಡೆಯುತ್ತಿರುವ 70 ತಿಂಗಳ ವೇತನಕ್ಕೆ ಅನುಗುಣವಾಗಿ ಹಾಗೂ ಮರುಪಾವತಿ ಸಾಮರ್ಥ್ಯದನುಸಾರ ಗೃಹ ನಿರ್ಮಾಣ/ ಖರೀದಿ ಮುಂಗಡ ಮಿತಿಯನ್ನು ರೂ .25 ಲಕ್ಷಗಳಿಗೆ ಹೆಚ್ಚಿಸಲು ಮತ್ತು ರಾಜ್ಯ ಸಿವಿಲ್ ಸೇವೆಯ ಇತರೆ ಅಧಿಕಾರಿಗಳು ಮತ್ತು ನೌಕರರಿಗೆ ಗೃಹ ನಿರ್ಮಾಣ/ ಖರೀದಿ ಮುಂಗಡ ಮಿತಿಯನ್ನು ರೂ.15 ಲಕ್ಷಕ್ಕೆ ಹೆಚ್ಚಿಸಲು ಆದೇಶಿಸಲಾಗಿದೆ.

ಈ ಆದೇಶದಿಂದ ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಖಿಲ ಭಾರತ ಸೇವೆಗಳಿಗೆ ಸೇರಿದ ಅಧಿಕಾರಿಗಳು ಅವರ 70 ತಿಂಗಳ ಮೂಲ ವೇತನ ಮತ್ತು ವೇತನ ಶ್ರೇಣಿಯ ಗ್ರೇಡ್ ವೇತನವು ಸೇರಿದಂತೆ ಅವರ ಮರುಪಾವತಿ ಸಾಮರ್ಥ್ಯಕ್ಕನುಗುಣವಾಗಿ ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಂತೆ ಗರಿಷ್ಟ ರೂ. 25 ಲಕ್ಷ ಗೃಹ ನಿರ್ಮಾಣ ಮುಂಗಡವನ್ನು ಪಡೆಯಲು ಅರ್ಹರಿರುತ್ತಾರೆ.

ರಾಜ್ಯ ಸಿವಿಲ್ ಸೇವೆಯ ಅಧಿಕಾರಿಗಳು ಮತ್ತು ನೌಕರರಿಗೆ ಗೃಹ ನಿರ್ಮಾಣ/ ಖರೀದಿ ಮುಂಗಡ ಮಂಜೂರು ಮಾಡಲು ಸಾಲ ನೀಡುವ ಹಣಕಾಸು ಸಂಸ್ಥೆಯನ್ನು ಆಯ್ಕೆ ಮಾಡುವ ವಿಷಯವನ್ನು ಪರಿಶೀಲಿಸಿ, ಸಮಗ್ರ ಸಾಧಕ-ಬಾಧಕಗಳನ್ನು ವಿಶ್ಲೇಷಿಸಿದ ನಂತರ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಆಯವ್ಯಯದ ಮೂಲಕ ಅನುದಾನವನ್ನು ಒದಗಿಸುವುದು ಸೂಕ್ತವೆಂದು ನಿರ್ಣಯಿಸಿ, ಆದೇಶಿಸಿದೆ.

ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಿಗೆ ಅವರು ಪಡೆಯುತ್ತಿರುವ 70 ತಿಂಗಳ ವೇತನಕ್ಕೆ ಅನುಗುಣವಾಗಿ ಹಾಗೂ ಮರುಪಾವತಿ ಸಾಮರ್ಥ್ಯದನುಸಾರ ಗೃಹ ನಿರ್ಮಾಣ/ ಖರೀದಿ ಮುಂಗಡ ಗರಿಷ್ಠ ಮಿತಿಯನ್ನು ರೂ.25 ಲಕ್ಷಗಳಿಗೆ ಮತ್ತು ರಾಜ್ಯ ಸಿವಿಲ್ ಸೇವೆಯ ಇತರೆ ಅಧಿಕಾರಿಗಳು ಮತ್ತು ನೌಕರರಿಗೆ ಗೃಹ ನಿರ್ಮಾಣ/ ಖರೀದಿ ಮುಂಗಡ ಗರಿಷ್ಟ ಮಿತಿಯನ್ನು ರೂ.15 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಕರ್ನಾಟಕ ವೃಂದಕ್ಕೆ ಸೇರಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಖಿಲ ಭಾರತ ಸೇವೆಗಳಿಗೆ ಸೇರಿದ ಅಧಿಕಾರಿಗಳಿಗೂ ಈ ಸೌಲಭ್ಯವನ್ನು ಅನ್ವಯಿಸಿದ್ದು, ಅವರ 70 ತಿಂಗಳ ಮೂಲ ವೇತನ ಮತ್ತು ವೇತನ ಶ್ರೇಣಿಯ ಗ್ರೇಡ್ ವೇತನವು ಸೇರಿದಂತೆ ಅವರ ಮರುಪಾವತಿ ಸಾಮರ್ಥ್ಯಕ್ಕನುಗುಣವಾಗಿ ರಾಜ್ಯ ಸಿವಿಲ್ ಸೇವೆಯ 'ಎ' ಗುಂಪಿನ ಅಧಿಕಾರಿಗಳಂತೆ ಗರಿಷ್ಟ ರೂ. 25 ಲಕ್ಷ ಗೃಹ ನಿರ್ಮಾಣ ಮುಂಗಡವನ್ನು ಪಡೆಯಲು ಅರ್ಹರಿರುತ್ತಾರೆ.

ರಾಜ್ಯ ಸಿವಿಲ್ ಸೇವೆಯ ಅಧಿಕಾರಿಗಳು ಮತ್ತು ನೌಕರರಿಗೆ ಗೃಹ ನಿರ್ಮಾಣ/ ಖರೀದಿ ಮುಂಗಡ ಮಂಜೂರು ಮಾಡಲು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಲಾಗಿದೆ.

* ಗೃಹ ನಿರ್ಮಾಣ/ ಖರೀದಿ ಮುಂಗಡ ಮಂಜೂರು ಮಾಡುವ ಮುನ್ನ ಅರ್ಜಿದಾರರ ನಿವ್ವಳ ಸಂಬಳ ಎಲ್ಲಾ ಕಟಾವುಗಳ ನಂತರ, ಗೃಹ ನಿರ್ಮಾಣ/ ಖರೀದಿ ಮುಂಗಡದ ಪ್ರಸ್ತಾಪಿತ ಕಟಾವು ಸೇರಿ ಒಟ್ಟು ಸಂಬಳದ ಅರ್ಧದಷ್ಟು ಕಡಿಮೆ ಬೀಳದಂತೆ ಖಚಿತಪಡಿಸಿಕೊಳ್ಳುವುದು.

* ಪ್ರಸ್ತುತ ವಾಸಿಸುತ್ತಿರುವ ಗೃಹದ ವಿಸ್ತರಣೆ/ ನವೀಕರಣಕ್ಕೆ ಸಂಬಂಧಿಸಿದಂತೆ, ಗರಿಷ್ಟ ಮಿತಿಯನ್ನು ಗೃಹ ಮುಂಗಡದ ಶೇ.50 ರಷ್ಟು ಅಥವಾ ತಗಲುವ ಅಂದಾಜು ವೆಚ್ಚ ಇವುಗಳ ಪೈಕಿ ಯಾವುದು ಕಡಿಮೆಯೋ ಅದನ್ನು ಮಂಜೂರು ಮಾಡತಕ್ಕದ್ದು.

* ಗೃಹ ನಿರ್ಮಾಣ/ ಖರೀದಿ ಮುಂಗಡದ ಮೇಲಿನ ಬಡ್ಡಿದರದ ಮಾಹಿತಿ ರೂ. 50,000ದ ವರೆಗೆ ವಾರ್ಷಿಕ ಬಡ್ಡಿದರ ಶೇ 5. ರೂ.1,50,000ದ ವರೆಗೆ ಶೇ 6.5, ರೂ. 5,00,000ದ ವರೆಗೆ ಶೇ 8.5,
ರೂ. 5,00,000ಕ್ಕಿಂತ ಹೆಚ್ಚು ಮತ್ತು ರೂ. 25,00,000ದ ವರೆಗೆ ಶೇ 9.5 ಆಗಿರುತ್ತದೆ.

* ಈ ಮುಂಗಡಗಳಿಗೆ ಮೇಲಿನ ಷರತ್ತು ನಿಬಂಧನೆಗಳೇ ಅಲ್ಲದೇ, ಕರ್ನಾಟಕ ಆರ್ಥಿಕ ಸಂಹಿತೆ, 1958ರ ಮುಂಗಡ ನಿಯಮಾವಳಿಗಳೂ ಸಹ ಅನ್ವಯವಾಗುತ್ತವೆ. ಕರ್ನಾಟಕ ಆರ್ಥಿಕ ಸಂಹಿತೆ, 1958ಕ್ಕೆ ಅಗತ್ಯ ತಿದ್ದುಪಡಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.

ಈ ವಿಷಯದಲ್ಲಿ ಸರ್ಕಾರವು ಆಗಿಂದಾಗ್ಗೆ ಹೊರಡಿಸುವ ಸೂಚನೆಗಳು/ ತಿದ್ದುಪಡಿಗಳು ಮುಂದುವರೆದು ಅನ್ವಯವಾಗುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+