Rudrappa Lamani Profile: ಬಂಜಾರ ಸಮುದಾಯದ ಏಕೈಕ ಶಾಸಕ ರುದ್ರಪ್ಪ ಲಮಾಣಿ ಈಗ ಉಪಸಭಾಧ್ಯಕ್ಷ!

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಕಾಂಗ್ರೆಸ್‌ 135 ಸ್ಥಾನಗಳನ್ನ ಗೆದ್ದು ಪೂರ್ಣ ಬಹುಮತದ ಸರ್ಕಾರ ರಚಿಸಿದ ಬಳಿಕ ಹಲವು ಬದಲಾವಣೆಗಳಾಗಿವೆ. ಲಂಬಾಣಿ ಸಮುದಾಯದ ಕಾಂಗ್ರೆಸ್‌ ನ ಏಕೈಕ ನಾಯಕನಿಗೆ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಹಾಗಾದ್ರೆ ನೂತನ ಡೆಪ್ಯುಟಿ ಸ್ಪೀಕರ್ ಆಗಿರುವ ರುದ್ರಪ್ಪ ಲಮಾಣಿ ಅವರ ಬಗ್ಗೆ ನಿಮಗೆಷ್ಟು ಗೊತ್ತು? ಅವರ ವಿಧ್ಯಾಭ್ಯಾಸ ಏನು? ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ

Rudrappa Lamani Profile: New Wise-President of Karnataka Vidhan Sabha

1959 ಜೂನ್‌ 01, ರಂದು ಜನಿಸಿರುವ ರುದ್ರಪ್ಪ ಲಮಾಣಿ ಬಿಎ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. 1980ರಲ್ಲಿ ರಾಜಕೀಯ ಪ್ರವೇಶಿಸಿದ ರುದ್ರಪ್ಪ ಮಾನಪ್ಪ ಲಮಾಣಿ, 1985 ರಿಂದ 89ರವರೆಗೆ ಜಿಲ್ಲಾ ಪರಿಷತ್‌ನ ಸದಸ್ಯರಾಗಿ ಆಯ್ಕೆಯಾಗಿದ್ದರು. 1990 ರಿಂದ 1994ರವರೆಗೂ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿ ರುದ್ರಪ್ಪ ಲಮಾಣಿ ಶ್ರಮಿಸಿದ್ದಾರೆ. ಇನ್ನೂ 1994ರಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟದ ಪರೀಕ್ಷೆಗೆ ಇಳಿದಿದ್ದರು. ಆದರೆ, ತಾವೂ ಸ್ಪರ್ಧಿಸಿದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ರುದ್ರಪ್ಪ ಲಮಾಣಿಗೆ ಸೋಲನ್ನ ಅನುಭವಿಸಿದ್ದಾರೆ.

1999ರ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಡಗಿ ಕ್ಷೇತ್ರದಲ್ಲಿ ಸ್ಪರ್ಧಿಸಿದ ರುದ್ರಪ್ಪ ಮಾನಪ್ಪ ಲಮಾಣಿ ಅವರು ನೆಹರು ಓಲೇಕಾರ್‌ ವಿರುದ್ಧ ಸುಮಾರು 18 ಸಾವಿರ ಮತಗಳಿಂದ ಗೆಲುವು ಸಾಧಿಸಿದರು. 2004ರ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿ ಬ್ಯಾಡಗಿಯಿಂದ ಸ್ಪರ್ಧಿಸಿದ್ದ ರುದ್ರಪ್ಪ ಲಮಾಣಿ, ನೆಹರು ಓಲೇಕಾರ್‌ ವಿರುದ್ಧ ಸೋಲು ಅನುಭವಿಸಿದರು. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಸ್ಪರ್ಧಿಸಿದ ರುದ್ರಪ್ಪ ಲಮಾಣಿ, 2013 ಹಾಗೂ 2023ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013ರ ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಮತ್ತು ಮುಜರಾಯಿ ಖಾತೆಯ ಸಚಿವರಾಗಿ ಸಹ ಕೆಲಸ ನಿರ್ವಹಿಸಿದ್ದಾರೆ.

ಸಿದ್ದರಾಮಯ್ಯ ಸಂಪುಟ ರಚನೆ ವೇಳೆ ಕೊನೆ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದ ಮೂರು ಬಾರಿಯ ಶಾಸಕ ರುದ್ರಪ್ಪ ಲಮಾಣಿ ಈಗ ವಿಧಾನಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬ್ಯಾಡಗಿಯಿಂದ ಒಂದು ಬಾರಿ, ಹಾವೇರಿಯಿಂದ ಎರಡು ಬಾರಿ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಜವಳಿ ಹಾಗೂ ಮುಜರಾಯಿ ಖಾತೆ ಸಚಿವರಾಗಿದ್ದರು.

ರುದ್ರಪ್ಪ ಲಮಾಣಿ ಸಾಧನೆಗಳು ಇಲ್ಲಿವೆ!

ರುದ್ರಪ್ಪ ಲಮಾಣಿ ಅವರು ರಾಜಕೀಯಕ್ಕೆ ಧುಮುಕ್ಕಿದ ಬಳಿಕ ಹಲವು ಸಾಮಾಜಮುಖಿ ಕೆಲಸ ಕಾರ್ಯಗಳನ್ನ ನಿರ್ವಹಿಸಿದ್ದು, ತುಂಗಭದ್ರಾ ನದಿಯಿಂದ ಪೈಪ್‌ಲೈನ್‌ ಮೂಲಕ ನೀರು ತಂದು ಬ್ಯಾಡಗಿ ತಾಲೂಕಿನ ಹಾಗೂ ರಾಣೇಬೆನ್ನೂರು ತಾಲೂಕಿನ ಕೆಲವು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಇನ್ನೂ ಗುಡ್ಡದ ಮಲ್ಲಾಪುರದ 13 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಬ್ಯಾಡಗಿಯ ಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಯ ಅಭಿವೃದ್ಧಿ ಸೇರಿ ಎಪಿಎಂಸಿ ಸಂಕೀರ್ಣ ಹಾಗೂ ಕ್ರೀಡಾಂಗಣಗಳ ನಿರ್ಮಾಣ ಮಾಡಿರುವ ಕೀರ್ತಿ ಇವರಿಗೆ ಸಲ್ಲಲಿದೆ.

ಇತ್ತ ಹಾವೇರಿ ನಗರದಲ್ಲನ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಯತ್ನ ನಡೆಸಿದ್ದು, ಹಾವೇರಿ ನಗರದ ಸ್ಲಮ್‌ಗಳ ಅಭಿವೃದ್ಧಿ ಸೇರಿ ಅನೇಕ ಕಾರ್ಯ ಮಾಡಿದ್ದಾರೆ. ಹೊನ್ನಾಳಿ ತಾಲೂಕಿನ ಸುರಗೊಂಡನಕೊಪ್ಪದ ಸಂತ ಶ್ರೀ ಸೇವಾಲಾಲ್‌ ಜನ್ಮಸ್ಥಾನ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ರುದ್ರಪ್ಪ ಲಮಾಣಿ, ಸಂತ ಸೇವಾಲಾಲ್‌ ಜನ್ಮಸ್ಥಳದ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ರುದ್ರಪ್ಪ ಲಮಾಣಿ ಅವರು ಕಾರಣವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+