ಗೋಮಾಂಸ ಸೇವನೆ ವಿರುದ್ಧ ಹುಬ್ಬಳ್ಳಿಯಲ್ಲಿ ಆರೆಸ್ಸೆಸ್ ಜಾಥಾ

ಹುಬ್ಬಳ್ಳಿ, ಅಕ್ಟೋಬರ್, 26 : ವಿಜಯ ದಶಮಿ ಪ್ರಯುಕ್ತ ಹುಬ್ಬಳ್ಳಿ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಗಣವೇಷಧಾರಿಗಳು ನಗರದಲ್ಲಿ ಅಕ್ಟೋಬರ್ 26ರ ಸೋಮವಾರದಂದು ಸಮವಸ್ತ್ರ ಧರಿಸಿ ಆಕರ್ಷಕ ಪಥ ಸಂಚಲನ ನಡೆಸಿ, ದೇಶದ ಶಾಂತಿ ಕದಡದಂತೆ ಸಲಹೆ ನೀಡಿದರು.

ಆರ್ ಎಸ್ಎಸ್ ಕಾರ್ಯಕರ್ತರ ತಂಡ ನಗರದ ನೆಹರೂ ಮೈದಾನದಿಂದ ಪಥಸಂಚಲನ ಆರಂಭಿಸಿದ್ದು, ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಕೊನೆಗೆ ನೆಹರೂ ಮೈದಾನಕ್ಕೆ ಮರಳಿದ ಜಾಥಾದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಡಾ.ಜಿ.ಎಚ್.ನರೇಗಲ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಆರ್ ಎಸ್ಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.[ವಿಜಯ ದಶಮಿ ಭಾಷಣ: ಮೋದಿಗೆ ಭಾಗವತ್ ಸಲಹೆ]

RSS discussed at Hubballi about Beef Ban and Kalasa banduri issue on October 26th.

ಪಥಸಂಚಲನದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಉತ್ತರ ಪ್ರಾಂತ ಕಾರ್ಯನಿರ್ವಾಹಕ ಅರವಿಂದರಾವ್ ದೇಶಪಾಂಡೆ, 'ಜಗತ್ತಿನಲ್ಲಿ ಅತೀ ಹೆಚ್ಚು ಗೋಮಾಂಸ ಭಾರತದಿಂದ ರಫ್ತಾಗುತ್ತಿದೆ. ಗೋಮಾಂಸದ ಕಾರಣಕ್ಕಾಗಿ ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಗೋಮಾಂಸ ರಫ್ತು ಇಡೀ ದೇಶಾದ್ಯಂತ ನಿಲ್ಲಬೇಕು' ಎಂದು ತಿಳಿಸಿದರು.[ಆರ್ ಎಸ್ಎಸ್ ಪಥಸಂಚಲನಕ್ಕೆ ಮುಸ್ಲಿಂ ಪುಷ್ಪವೃಷ್ಟಿಯ ಸಿಂಚನ]

ಕಳಸಾ-ಬಂಡೂರಿ ಯೋಜನೆಗಾಗಿ ಕರ್ನಾಟಕ, ಗೋವಾ, ಮಹಾರಾಷ್ಟ್ರಗಳ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರತಿಪಕ್ಷದವರು ಒಗ್ಗೂಡಿ ಸಭೆ ನಡೆಸಿ ಶೀಘ್ರ ಪರಿಹಾರ ಕೈಗೊಳ್ಳಬೇಕು. ಈಗಾಗಲೇ ಕಣಕುಂಬಿಯಲ್ಲಿರುವ ಕಳಸಾ-ಬಂಡೂರಿ ನಾಲಾ ತಡೆಗೋಡೆ ಒಡೆಯಲು ಹೋರಾಟಗಾರರು ನಿರ್ಧರಿಸಿದ್ದಾರೆ. ಈ ಸಮಸ್ಯೆಯನ್ನು ಕಡೆಗಣಿಸಿದರೆ ಇದು ಇನ್ನಷ್ಟು ಬಿಗಾಡಿಯಿಸುವ ಸಾಧ್ಯತೆ ಇದೆ'ಎಂದು ಹೇಳಿದರು.

ಪಥಸಂಚಲನದ ವೇಳೆಯಲ್ಲಿ ಯಾವುದೇ ಗಲಾಟೆ ತಲೆದೋರದಂತೆ ಎಚ್ಚರಿಕೆ ವಹಿಸಲು ನೆಹರು ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+