ರುದ್ರೇಶ್ ಹತ್ಯೆ ಆರೋಪಿಗಳಿಗೆ ಇಂಡಿಯನ್ ಮುಜಾಹಿದೀನ್ ನಂಟು!
ರುದ್ರೇಶ್ ಹತ್ಯೆಯ ಆರೋಪಿಗಳಿಗೆ ಇಂಡಿಯನ್ ಮುಜಾಹಿದೀನ್, ಎಸ್ ಡಿಪಿಐ, ಪಿಎಫ್ ಐ ಹಾಗೂ ತಮಿಳುನಾಡಿನ ಅಲ್ ಉಮ್ಮಾ ಸಂಘಟನೆ ಜತೆಗೆ ನಂಟಿದೆ. ಮೈಸೂರಿನ ಆರ್ ಎಸ್ ಎಸ್ ಕಾರ್ಯಕರ್ತ ರಾಜು ಹತ್ಯೆಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಬೆಂಗಳೂರು, ಡಿಸೆಂಬರ್ 2: ಇತ್ತೀಚೆಗೆ ಬೆಂಗಳೂರಿನಲ್ಲಿ ಆದ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಸರಕಾರದ ಪ್ರಕಾರ ಆರೋಪಿಗಳಿಗೆ ಇಂಡಿಯನ್ ಮುಜಾಹಿದೀನ್, ಎಸ್ ಡಿಪಿಐ, ಪಿಎಫ್ ಐ ಹಾಗೂ ಅಲ್-ಉಮ್ಮಾ ಜತೆಗೆ ನಂಟಿತ್ತು ಎಂದು ಹೇಳಲಾಗಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದು, ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಅಥವಾ ಆರ್ ಎಸ್ ಎಸ್ ಜತೆ ಗುರುತಿಸಿಕೊಂಡ ಒಂಬತ್ತು ಮಂದಿ ಹತ್ಯೆಯಾಗಿದೆ. ಒಂದು ವೇಳೆ ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರು ರಕ್ಷಣೆ ಬೇಕು ಎಂದು ಕೋರಿದರೆ ಒದಗಿಸಲು ಸಿದ್ಧ ಎಂದಿದ್ದಾರೆ.[ಹಿಂದೂ ಸಂಘಟನೆ ಸದಸ್ಯರು ಎಷ್ಟೊಂದು ಮಂದಿ ಸತ್ತರು?]

ರುದ್ರೇಶ್ ಹತ್ಯೆಯ ಆರೋಪಿಗಳಿಗೆ ಇಂಡಿಯನ್ ಮುಜಾಹಿದೀನ್, ಎಸ್ ಡಿಪಿಐ, ಪಿಎಫ್ ಐ ಹಾಗೂ ತಮಿಳುನಾಡಿನ ಅಲ್ ಉಮ್ಮಾ ಸಂಘಟನೆ ಜತೆಗೆ ನಂಟಿದೆ. ಮೈಸೂರಿನ ಆರ್ ಎಸ್ ಎಸ್ ಕಾರ್ಯಕರ್ತ ರಾಜು ಹತ್ಯೆಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.[ರುದ್ರೇಶ್ ಹತ್ಯೆ, ಬೆಂಗಳೂರಲ್ಲಿ ನಾಲ್ವರ ಬಂಧನ]
ವಿಚಾರಣೆಯಿಂದ ತಿಳಿದುಬಂದಿರುವುದು ಏನೆಂದರೆ ಕೆಲವು ಪ್ರಕರಣಗಳಲ್ಲಿ ವಯಕ್ತಿಕ ಕಾರಣಗಳಿಗಾಗಿ ಕೊಲೆಯಾಗಿದೆ. ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಲ್ಲ ಆರೋಪಿಗಳನ್ನು ಕಾನೂನಿನ ಮುಂದೆ ನಿಲ್ಲಿಸಲಾಗುವುದು ಎಂದು ಗೃಹಸಚಿವರು ಹೇಳಿದರು.












Click it and Unblock the Notifications