ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಧರಿಸದೆ ಸಂಸದ ತೇಜಸ್ವಿ ಸೂರ್ಯ ಕೂಡಾ ದಂಡ ಕಟ್ಟಿದ್ರು

|
Google Oneindia Kannada News

ಬೆಂಗಳೂರು, ನ.9: ಕೊವಿಡ್ 19 ನಿಯಂತ್ರಿಸಲು ಮಾಸ್ಕ್ ಕಡ್ಡಾಯ ನಿಯಮ ಏನಿದ್ದರೂ ಜನ ಸಾಮಾನ್ಯರಿಗೆ ಮಾತ್ರ. ರಾಜಕೀಯ ಮುಖಂಡರು ಪಾಲ್ಗೊಳ್ಳುವ ಸಮಾವೇಶಗಳಲ್ಲಿ ಈ ನಿಯಮ ಉಲ್ಲಂಘನೆಯಾದರೂ ಯಾವುದೇ ದಂಡ ವಿಧಿಸುತ್ತಿಲ್ಲ, ಕೇಂದ್ರ ಗೃಹ ಇಲಾಖೆ ಮೂರ್ಗಸೂಚಿಯ ಅನ್ವಯ ಕೋವಿಡ್‌ ನಿರ್ವಹಣೆಗೆ ರಾಷ್ಟ್ರೀಯ ಸೂಚನೆಗಳನ್ನು ರಾಜ್ಯದಲ್ಲಿ ಅನುಸರಿಸಲಾಗುತ್ತಿಲ್ಲ ಎಂಬ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಇಂದು ಕೈಗೆತ್ತಿಕೊಂಡಿದೆ.

ಸಾರ್ವಜನಿಕ ಸಭೆಗಳಲ್ಲಿ ಸಂಸದ, ವಕೀಲ ತೇಜಸ್ವಿ ಸೂರ್ಯ ಹಾಗೂ ಮತ್ತಿತರರು ಮಾಸ್ಕ್‌ ಧರಿಸಿದೆ ಭಾಗವಹಿಸಿದ್ದಾರೆ. ಇವರಿಂದ ದಂಡ ವಸೂಲಿ ಮಾಡಲಾಗಿದೆಯೇ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ಪ್ರಶ್ನಿಸಿತ್ತು. ಸಂಸದರ ಬಳಿ ದಂಡ ವಸೂಲಿ ಮಾಡಿಲ್ಲವಾದರೆ ಜನತೆಗೆ ಯಾವ ಸಂದೇಶ ರವಾನಿಸುತ್ತಿದ್ದೀರಿ?" ಎಂದು ಸರ್ಕಾರವನ್ನು ಪ್ರಶ್ನಿಸಲಾಗಿತ್ತು.

ಕೋವಿಡ್ ಉಲ್ಲಂಘನೆ: ಉಡುಪಿಯಲ್ಲಿ ದಂಡದ ರೂಪದಲ್ಲಿ ಸಂಗ್ರಹಿಸಿದ ಮೊತ್ತವೆಷ್ಟು?ಕೋವಿಡ್ ಉಲ್ಲಂಘನೆ: ಉಡುಪಿಯಲ್ಲಿ ದಂಡದ ರೂಪದಲ್ಲಿ ಸಂಗ್ರಹಿಸಿದ ಮೊತ್ತವೆಷ್ಟು?

ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠಕ್ಕೆ ಈ ಕುರಿತಂತೆ ರಾಜ್ಯ ಸರ್ಕಾರವು ಇಂದು ಮಾಹಿತಿ ನೀಡಿದೆ.

Rs 250 recovered from Tejasvi Surya for not wearing face mask

ಸೆಪ್ಟೆಂಬರ್‌ನಲ್ಲಿ ನಡೆದಿದ್ದ ರಾಜಕೀಯ ಸಮಾವೇಶದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಮಾಸ್ಕ್‌ ಧರಿಸದೆ ಪಾಲ್ಗೊಂಡಿದ್ದರು. ಅವರಿಗೆ 250 ರೂಪಾಯಿ ದಂಡ ವಿಧಿಸಲಾಗಿದೆ. ತೇಜಸ್ವಿ ಸೂರ್ಯ ಅವರು ನವೆಂಬರ್‌ 7ರಂದು ದಂಡ ಪಾವತಿಸಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಕರ್ನಾಟಕ ಸಾಂಕ್ರಾಮಿಕ ರೋಗ ಸುಗ್ರೀವಾಜ್ಞೆ 2020ರ ಅಡಿ ಹೊಸದಾಗಿ ರೂಪಿಸಲಾಗಿರುವ ನಿಯಂತ್ರಣ ಕ್ರಮಗಳನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ಸೂಚಿಸಿದ ನ್ಯಾಯಪೀಠವು ನವೆಂಬರ್‌ 12ಕ್ಕೆ ವಿಚಾರಣೆ ಮುಂದೂಡಿದೆ.

Recommended Video

Joe Biden Family Connection with India : ನಮ್ ಕುಟುಂಬದವರು ಇನ್ನೂ ಮುಂಬೈ ಅಲ್ಲಿ ಇದಾರೆ! | Oneindia Kannada

English summary
The Karnataka High Court was informed today that a fine of Rs 250 was imposed on Member of Parliament and Advocate Tejasvi Surya for not wearing face mask while attending a political rally in September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X