ಬರೀ 100 ರೂ.ಗೆ ಫುಲ್ ಮೀಲ್ಸ್: ಹಳ್ಳಿಯ ಈ ಪುಟ್ಟ ಹೋಟೆಲ್‌ನ ತಿಂಗಳ ಆದಾಯ ಕೇಳಿದ್ರೆ ಆಶ್ಚರ್ಯಪಡ್ತೀರಾ!

ಭಾರತದಲ್ಲಿ ಕೇವಲ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು, ಫೈವ್‌ ಸ್ಟಾರ್‌- ತ್ರೀ ಸ್ಟಾರ್‌ ಹೊಟೇಲ್‌ ಮಾತ್ರವಲ್ಲ, ಸಣ್ಣ ಪುಟ್ಟ ಹೊಟೇಲ್‌, ಕಾಂಡಿಮೆಂಟ್ಸ್‌, ಬೇಕರಿಗಳೂ ಸಹ ನಿರೀಕ್ಷೆಗೂ ಮೀರಿದ ಆದಾಯ ತಂದುಕೊಡಬಲ್ಲವು ಎಂಬುದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಸುದ್ದಿ ಒಂದು ಒಳ್ಳೆಯ ಉದಾಹರಣೆ.

ಹೌದು, ಹಳ್ಳಿಗೆ ಸಮೀಪವಿರುವ ಮುಖ್ಯರಸ್ತೆಯಲ್ಲಿರುವ ಪುಟ್ಟ ಹೋಟೆಲ್ ಒಂದು ತನ್ನ ಯಶಸ್ಸಿನ ಮೂಲಕ ನೆಟ್ಟಿಗರ ಗಮನ ಸೆಳೆದಿದೆ. ಕೇವಲ 100 ರೂಪಾಯಿಗೆ ಊಟ ನೀಡುತ್ತದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಹೋಟೆಲ್‌ನ ಆದಾಯದ ಲೆಕ್ಕಾಚಾರ ಇದೀಗ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

Rs 100 Thali

ಸಣ್ಣ ಹೋಟೆಲ್, ದೊಡ್ಡ ಆದಾಯ

ನಳಿನಿ ಉನಗರ್ ಎಂಬುವವರು ತಮ್ಮ ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಹೋಟೆಲ್‌ನಲ್ಲಿ ಕೇವಲ 100 ರೂಪಾಯಿಗೆ ಫುಲ್‌ ಊಟ ಸಿಗುತ್ತದೆ. ಇದರಲ್ಲಿ ಎರಡು ಬಗೆಯ ಪಲ್ಯ, ರೊಟ್ಟಿ, ದಾಲ್, ಅನ್ನ, ಹಪ್ಪಳ ಹಾಗೂ ಸಲಾಡ್ ನೀಡಲಾಗುತ್ತದೆ. ಪ್ರತಿದಿನ ಕನಿಷ್ಠ 25ಕ್ಕೂ ಹೆಚ್ಚು ಗ್ರಾಹಕರು ಇಲ್ಲಿ ಭೋಜನ ಸವಿಯುತ್ತಾರೆ. ಇದಲ್ಲದೆ, ಪ್ರತಿದಿನ 40 ಟಿಫಿನ್ ಆರ್ಡರ್‌ಗಳು ಬರುತ್ತವೆ. ಒಟ್ಟಾರೆಯಾಗಿ ದಿನಕ್ಕೆ 65 ಊಟಗಳು ಮಾರಾಟವಾಗುತ್ತವೆ ಎಂದು ಈ ಹೊಟೇಲ್‌ ಮಾಲೀಕರು ತಿಳಿಸಿದ್ದಾರೆ.

ಒಂದು ಊಟಕ್ಕೆ 100 ರೂಪಾಯಿಯಂತೆ 65 ಥಾಲಿಗಳಿಂದ ದಿನಕ್ಕೆ 6,500 ರೂಪಾಯಿ ಆದಾಯ ಬರುತ್ತದೆ. ಇದೇ ರೀತಿ ತಿಂಗಳ 30 ದಿನ ವ್ಯಾಪಾರ ಮಾಡಿದರೆ, ಈ ಸಣ್ಣ ಹೋಟೆಲ್ ತಿಂಗಳಿಗೆ ಬರೊಬ್ಬರಿ 1.95 ಲಕ್ಷ ರೂಪಾಯಿ ವಹಿವಾಟು ನಡೆಸುತ್ತದೆ. ಇದನ್ನೇ ವರ್ಷಕ್ಕೆ ಲೆಕ್ಕ ಹಾಕಿದರೆ, ಈ ಮೊತ್ತ 23.4 ಲಕ್ಷ ರೂಪಾಯಿ ತಲುಪುತ್ತದೆ. ಕೃಷಿ ಕಾರ್ಮಿಕರು ಹಾಗೂ ಒಂಟಿಯಾಗಿ ಮನೆಯಲ್ಲಿ ವಾಸಿಸುವ ವೃದ್ಧರೇ ಈ ಹೋಟೆಲ್‌ನ ಪ್ರಮುಖ ಗ್ರಾಹಕರು ಎಂಬುದು ವಿಶೇಷ.

ಶೇ. 60ರಷ್ಟು ಲಾಭದ ಲೆಕ್ಕಾಚಾರ: ನೆಟ್ಟಿಗರ ಪ್ರತಿಕ್ರಿಯೆ

ಹೋಟೆಲ್‌ನ ಮಾಲೀಕರು ಹಾಗೂ ಅವರ ಪತ್ನಿ ಇಬ್ಬರೇ ಅಡುಗೆ ಮಾಡುವುದರಿಂದ ಸಿಬ್ಬಂದಿಯ ಖರ್ಚು ಸಹ ಉಳಿಯುತ್ತದೆ. ಜೊತೆಗೆ, ತಮಗೆ ಬೇಕಾದ ತರಕಾರಿಗಳನ್ನ ಅವರೇ ತಮ್ಮ ಸ್ವಂತ ಜಮೀನಿನಲ್ಲಿ ಬೆಳೆಯುವುದರಿಂದ ಕಚ್ಚಾ ವಸ್ತುಗಳ ವೆಚ್ಚವೂ ಗಣನೀಯವಾಗಿ ಕಡಿಮೆಯಾಗಿದೆ. ಈ ಕಾರಣದಿಂದಾಗಿ ಒಟ್ಟು ಆದಾಯದಲ್ಲಿ ಶೇ. 60ರಷ್ಟು ಲಾಭಾಂಶ ಉಳಿಯುತ್ತಿದ್ದು, ಮಾಲೀಕರು ತಿಂಗಳಿಗೆ ಕನಿಷ್ಠ 1 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸುತ್ತಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಈ ಲಾಭದ ಲೆಕ್ಕಾಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿದೆ. ಕೇವಲ ಆದಾಯವನ್ನಷ್ಟೇ ನೋಡಿ ಲಾಭವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆಹಾರ ಪದಾರ್ಥಗಳು, ಎಲ್‌ಪಿಜಿ ಸಿಲಿಂಡರ್, ಕರೆಂಟ್‌ ಬಿಲ್‌, ಪ್ಯಾಕೇಜಿಂಗ್, ಬಾಡಿಗೆ ಹಾಗೂ ಸ್ವತಃ ಮಾಲೀಕರ ಶ್ರಮದ ಮೌಲ್ಯವನ್ನೂ ಸೇರಿಸಿದರೆ ನಿವ್ವಳ ಲಾಭದ ಪ್ರಮಾಣ ಬೇರೆಯದ್ದೇ ಆಗಿರಬಹುದು ಎಂದು ಹಲವರು ವಾದಿಸಿದ್ದಾರೆ. ಆದರೂ, ಕಡಿಮೆ ಬಂಡವಾಳ ಹಾಗೂ ಸ್ಥಿರ ಬೇಡಿಕೆ ಇರುವ ಇಂತಹ ವ್ಯಾಪಾರವನ್ನ ಕಡಿಮೆ ಎಂದು ಅಂದಾಜಿಸುವಂತಿಲ್ಲ ಎಂಬುದು ಹಲವರ ಅಭಿಪ್ರಾಯ.

ಸ್ವಚ್ಛತೆ ಮತ್ತು ಗುಣಮಟ್ಟದ ಕುರಿತು ಚರ್ಚೆ

ಈ ಚರ್ಚೆ ಕೇವಲ ಆದಾಯದ ಲೆಕ್ಕಾಚಾರಕ್ಕೆ ಸೀಮಿತವಾಗಿಲ್ಲ ನೋಡಿ. ಸರ್ಕಾರಿ ನೌಕರರು ತಾವು ದುಡಿಯುವ ಹಣಕ್ಕೆ ಕಟ್ಟುನಿಟ್ಟಾಗಿ ತೆರಿಗೆ ಪಾವತಿಸುತ್ತಾರೆ. ಆದರೆ, ಇಂತಹ ಅಸಂಘಟಿತ ವಲಯದ ವ್ಯಾಪಾರಿಗಳು ಉತ್ತಮ ಆದಾಯ ಗಳಿಸುತ್ತಿದ್ದರೂ, ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯುತ್ತಾರೆಯೇ ಹೊರತು ಸೂಕ್ತ ತೆರಿಗೆ ಕಟ್ಟುವುದಿಲ್ಲ ಎಂಬ ಅಸಮಾಧಾನವನ್ನ ಕೂಡ ಕೆಲವರು ಹೊರಹಾಕಿದ್ದಾರೆ.

ಮತ್ತೊಂದೆಡೆ, 100 ರೂಪಾಯಿಗೆ ಇಷ್ಟೊಂದು ರುಚಿಕರ ಹಾಗೂ ಗುಣಮಟ್ಟದ ಆಹಾರ ನೀಡುವುದು ಸಾಮಾನ್ಯ ವಿಷಯವಲ್ಲ. ರುಚಿ ಹಾಗೂ ನೈರ್ಮಲ್ಯವನ್ನ ಕಾಪಾಡಿಕೊಂಡರೆ ಮಾತ್ರ ಇಂತಹ ಉದ್ಯಮಗಳು ದೀರ್ಘಕಾಲ ಉಳಿಯಲು ಸಾಧ್ಯ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+