ಪ್ರಯಾಣಿಕರೇ ಎಚ್ಚರ, ಕಾರಿನ ಹಿಂಬದಿ ಸವಾರರಿಗೂ ಸೀಟ್ ಬೆಲ್ಟ್ ಕಡ್ಡಾಯ, ಇಲ್ಲ 1,000 ರೂ ದಂಡ!

ಬೆಂಗಳೂರು, ಅ.20: ರಾಜ್ಯದಲ್ಲಿಯೂ ಸೀಟ್ ಬೆಲ್ಟ್ ಕಡ್ಡಾಯ ಮಾಡಲಾಗಿದ್ದು, ಕಾರಿನ ಹಿಂಬದಿ ಸವಾರರು ಸೀಟ್ ಬೆಲ್ಟ್ ಧರಿಸಬೇಕು. ಇಲ್ಲದಿದ್ದರೆ 1,000 ರೂಪಾಯಿ ದಂಡ ಕಟ್ಟಲು ತಯಾರಿರಬೇಕು.

ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ, ವಾಹನದ ಹಿಂಬದಿಯ ಆಸನಗಳಲ್ಲಿ ಕುಳಿತಿರುವ ಪ್ರಯಾಣಿಕರು ಸಹ ಸೀಟ್ ಬೆಲ್ಟ್‌ಗಳನ್ನು ಧರಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿ ಆದೇಶಿಸಿದೆ. ಆದೇಶದ ಉಲ್ಲಂಘನೆಯಾದರೆ ಪೊಲೀಸರು 1,000 ರೂಪಾಯಿ ದಂಡ ವಿಧಿಸುತ್ತಾರೆ ಎಂದು ಕರ್ನಾಟಕ ಪೊಲೀಸರು ಬುಧವಾರ ಆದೇಶ ಹೊರಡಿಸಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಪೊಲೀಸ್ ಇಲಾಖೆ ದಂಡವನ್ನು 500 ರಿಂದ 1 ಸಾವಿರ ರೂಪಾಯಿಗೆ ಏರಿಸಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) (ರಸ್ತೆ ಸುರಕ್ಷತೆ) ಆರ್ ಹಿತೇಂದ್ರ ಹೊರಡಿಸಿರುವ ಆದೇಶದ ಪ್ರತಿಯಲ್ಲಿ, ಎಲ್ಲಾ ಪೊಲೀಸ್ ಕಮಿಷನರೇಟ್‌ಗಳು ಮತ್ತು ಎಸ್‌ಪಿಗಳಿಗೆ ಆದೇಶವನ್ನು ಅನುಸರಿಸಲು ತಿಳಿಸಲಾಗಿದೆ.

Rs 1,000 Fine For Not Wearing Seat Belts On Rear Seats In Karnataka

ಸೆಪ್ಟೆಂಬರ್ 4 ರಂದು ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಾವು ದೇಶದಲ್ಲಿ ಸೀಟ್ ಬೆಲ್ಟ್‌ಗಳ ಪ್ರಾಮುಖ್ಯತೆಯ ಮೇಲೆ ಮತ್ತೆ ಗಮನ ಹರಿಸುವಂತೆ ಮಾಡಿದೆ. ಅಪಘಾತ ಸಂಭವಿಸಿದ ಕೆಲ ದಿನಗಳ ನಂತರ ಕೇಂದ್ರ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡುವಂತೆ ಪತ್ರ ಬರೆದಿದೆ.

ರಾಜ್ಯದಲ್ಲಿ 2022 ರ ಆಗಸ್ಟ್ ಅಂತ್ಯದವರೆಗೆ ರಸ್ತೆ ಅಪಘಾತಗಳಿಂದ ಪ್ರತಿದಿನ ಸರಾಸರಿ 31 ಸಾವುಗಳನ್ನು ದಾಖಲಿಸಿದೆ.

Rs 1,000 Fine For Not Wearing Seat Belts On Rear Seats In Karnataka

ರಾಜ್ಯ ಪೊಲೀಸರ ಪ್ರಕಾರ, 2022 ರಲ್ಲಿ ಆಗಸ್ಟ್ ಅಂತ್ಯದವರೆಗೆ ಸುಮಾರು 7,634 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಬೆಳಗಾವಿ, ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗರಿಷ್ಠ ಅಪಘಾತ ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+