• search

ರಾಜ್ಯೋತ್ಸವ ತಿಂಗಳಲ್ಲಿ 'ಬಾರಿಸು ಕನ್ನಡ ಡಿಂಡಿಮ' ಇರಲಿ

By Vanitha
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಅಕ್ಟೋಬರ್, 30: ಕರ್ನಾಟಕ ಸರ್ಕಾರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹೊಸದಾಗಿ ನಿರ್ಮಿಸಿರುವ 'ಬಾರಿಸು ಕನ್ನಡ ಡಿಂಡಿಮ ಗೀತೆ'ಯನ್ನು ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರದಂದು ಮನವಿ ಪತ್ರ ಸಲ್ಲಿಸಿದ್ದಾರೆ.

  ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮ ಗೀತೆ ಯೂಟ್ಯೂಬ್ ನಲ್ಲಿ ಭಾರೀ ಜನರ ಮೆಚ್ಚುಗೆಗೆ ಪಾತ್ರವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಪ್ರದರ್ಶನಕ್ಕೆ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್ ರೋಷನ್ ಬೇಗಂ ತಿಳಿಸಿದ್ದಾರೆ.[]

  Roshan begum insist chief minister to performance Baarisu Kannada Dindimava song in film Theatres

  ಬಾರಿಸು ಕನ್ನಡ ಡಿಂಡಿಮ ಗೀತೆಯೂ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಸಂಯೋಜನೆಯಲ್ಲಿ ಮೂಡಿಬಂದಿದ್ದು, ಉದಿತ್ ಹರಿತಾಸ್, ಅನನ್ಯ ಭಟ್, ನವೀನ್ ಸಜ್ಜು ಮುಂತಾದವರು ಕುವೆಂಪು ಅವರ ಹಾಡಿಗೆ ದನಿಗೂಡಿಸಿದ್ದಾರೆ.

  ಒಟ್ಟಿನಲ್ಲಿ ಯೂಟ್ಯೂಬ್ ಮೂಲಕ ಇದುವರೆಗೂ ಸುಮಾರು 15ಲಕ್ಷಕ್ಕೂ ಹೆಚ್ಚು ಜನರಿಗೆ ತಲುಪಿದ್ದು, ಎಲ್ಲಾ ವಯೋಮಾನದವರ ಮನಸ್ಸನ್ನು ಬಹಳ ಗಾಢವಾಗಿ ತಟ್ಟಿದೆ. ಭಾರತದಲ್ಲಿ ಅತ್ಯಧಿಕವಾಗಿ ವೀಕ್ಷಿಸಿರುವ ಮತ್ತು ಅತ್ಯಂತ ಜನಪ್ರಿಯವಾಗಿರುವ ಐದು ವೀಡಿಯೋಗಳಲ್ಲಿ ಇದು ಅಗ್ರಪಂಕ್ತಿಯಲ್ಲಿದೆ.[ರಾಜ್ಯೋತ್ಸವಕ್ಕೆ ನಿರ್ಬಂಧ : ಕನ್ನಡ ಹೋರಾಟಗಾರರು ಏನಂತಾರೆ?]

  ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಕಂಪು ನಾಡಿನೆಲ್ಲೆಡೆ ಹರಡಲಿದೆ. ಈ ಅವಧಿಯಲ್ಲಿ ವಿನೂತನ ಶೈಲಿಯಲ್ಲಿ ಸಂಯೋಜನೆಯಾಗಿರುವ ಕುವೆಂಪು ಅವರ ಬಾರಿಸು ಕನ್ನಡ ಗೀತೆ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶಿಸುವುದರಿಂದ ಕುವೆಂಪು ಅವರನ್ನು ನೆನೆಪಿಸಿಕೊಂಡಂತಾಗುತ್ತದೆ ಎಂದು ರೋಷನ್ ಪ್ರದರ್ಶನದ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Chikkaballapur Incharge Minister Roshan begum insisted the chief minister siddaramaiah to performance the Baarisu Kannada Dindimava song in film Theatres on October 30th.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more