ಖಾತೆ ಹಂಚಿಕೆಯಾಗದಿದ್ದರೂ ಕೊಠಡಿ ಹಂಚಿಕೆಯಂತೂ ಆಯಿತು!

ಬೆಂಗಳೂರು, ಜೂನ್ 8: ಸಮ್ಮಿಶ್ರ ಸರ್ಕಾರದ ಮೊದಲ ಹಂತದ ಸಂಪುಟ ವಿಸ್ತರಣೆ ವೇಳೆ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಇನ್ನೂ ಯಾವ ಖಾತೆ ಎಂಬುದು ಅಧಿಕೃತವಾಗಿ ಘೋಷಣೆಯಾಗಿಲ್ಲ.

ಖಾತೆ ಘೋಷಣೆಗೆ ವಿಳಂಬವಾಗಿರುವುದರಿಂದ ಈಗಾಗಲೇ ವಿಧಾನಸೌಧ ಮತ್ತು ವಿಕಾಸಸೌಧಗಳಲ್ಲಿ ಈ ಸಚಿವರಿಗೆ ಕೊಠಡಿಗಳ ಹಂಚಿಕೆ ಮಾಡಲಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸಚಿವರಿಗೆ ಗುರುವಾರದಿಂದಲೇ ಜಾರಿಗೆ ಬರುವಂತೆ ಕೊಠಡಿಗಳನ್ನು ನೀಡಿ ಸರ್ಕಾರ ಆದೇಶ ಮಾಡಿದೆ.

rooms are allotted to ministers in vidhansoudha and vikas soudha

ಆರು ಮಂದಿ ಸಚಿವರಿಗೆ ವಿಕಾಸಸೌಧದಲ್ಲಿ ಕೊಠಡಿ ನೀಡಲಾಗಿದ್ದರೆ, ಉಳಿದ 19 ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ನೀಡಲಾಗಿದೆ.

ಎಚ್‌.ಡಿ. ರೇವಣ್ಣ, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್, ಬಂಡೆಪ್ಪ ಕಾಶೆಂಪೂರ, ಕೆ.ಜೆ. ಜಾರ್ಜ್, ಡಿ.ಸಿ. ತಮ್ಮಣ್ಣ, ಮನಗೂಳಿ, ರಮೇಶ್ ಜಾರಕಿಹೊಳಿ, ಜಯಮಾಲ, ಸಾ.ರಾ. ಮಹೇಶ್ ಮುಂತಾದವರಿಗೆ ವಿಧಾನಸೌಧದಲ್ಲಿ ಕೊಠಡಿ ನೀಡಲಾಗಿದೆ.

ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್, ರಾಜಶೇಖರ್ ಪಾಟೀಲ್, ಜಮೀರ್ ಅಹ್ಮದ್, ಯು.ಟಿ. ಖಾದರ್ ಅವರಿಗೆ ವಿಕಾಸ ಸೌಧದಲ್ಲಿ ಕೊಠಡಿಗಳನ್ನು ಹಂಚಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+