ನನ್ನ ಕುಟುಂಬದ ಬಗ್ಗೆ ಅನಗತ್ಯ ಮಾತು ಸರಿಯಲ್ಲ: ಡಿ.ರೂಪಾ ವಿರುದ್ಧ ರೋಹಿಣಿ ಸಿಂಧೂರಿ ಪತಿ ಕಿಡಿ

ಐಪಿಎಸ್ ಅಧಿಕಾರಿ ಡಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜಟಾಪಟಿ ಜೋರಾಗಿದ್ದು, ಇದೀಗ ಡಿ ರೂಪಾ ವಿರುದ್ದ ರೋಹಿಣಿ ಸಿಂಧೂರಿ ಪತಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು,ಫೆಬ್ರವರಿ20: ಐಪಿಎಸ್ ಅಧಿಕಾರಿ ಡಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ಸಾಕಷ್ಟು ಚರ್ಚೆಯಾಗುತ್ತಿದ್ದು, ಇದೀಗ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಅವರು ಡಿ ರೂಪಾ ವಿರುದ್ದ ಕಿಡಿಕಾಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ನನ್ನ ಪತ್ನಿ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿ, ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡಿರುವ ರೂಪಾ ವಿರುದ್ದ ದೂರು ನೀಡುತ್ತೆನೆ ಎಂದು ಹೇಳಿದ್ದಾರೆ.

ನಮ್ಮ ಕುಟುಂಬದ ಬಗ್ಗೆ ಅನಗತ್ಯವಾಗಿ ಮಾತನಾಡಬಾರದು. ರೋಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ. ಅವರು ಯಾವುದೇ ಸಾಮಾಜಿಕ ಜಾಲತಾಣ ಸಹ ಬಳಕೆ ಮಾಡುತ್ತಿಲ್ಲ. ನಾನು ಆಂಧ್ರ ಪ್ರದೇಶದವನೂ ಅಲ್ಲ. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದಿರುವ ಕನ್ನಡಿಗ. ಪತ್ನಿಯ ಫೋಟೋಗಳು ರೂಪಾ ಅವರಿಗೆ ಸಿಕ್ಕಿದ್ದು ಹೇಗೆ? ಈ ರೂಪಾ ಅನ್ನೋರು ಯಾರು ಎಂದು ಪ್ರಶ್ನಿಸಿದ್ದಾರೆ.

Rohini Sindhuri Husband Sudhir reddy Slams D Roopa

ರೋಹಿಣಿ ಸಿಂಧೂರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಹಜವಾಗಿ ರಾಜ್ಯದಲ್ಲಿ ಅವರಿಗೆ ಒಳ್ಳೆಯ ಹೆಸರು ಇದೆ. ಆದರೆ ಅವರ ಹೆಸರಿಗೆ ಮಸಿ ಬಳೆಯುವ ಕೆಲಸಗಳು ನಡೆಯುತ್ತಿವೆ. ರೋಹಿಣಿ ಸಿಂಧೂರಿ ಯಾವ ಯಾವ ಅಧಿಕಾರಿಗೆ ಫೋಟೋ ಕಳುಹಿಸಿದ್ದಾರೆ ಎಂಬುದನ್ನು ರೂಪಾ ಅವರು ಹೇಳಲಿ ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಸವಾಲು ಹಾಕಿದ್ದಾರೆ.

ಈ ರೀತಿಯಾಗಿ ಆರೋಪ ಮಾಡುವ ರೂಪಾ ಅವರ ಪರ್ಸನಲ್ ಅಜೆಂಡಾ ಏನು ಎಂಬುವುದು ಗೊತ್ತಾಗಬೇಕು. ರೋಹಿಣಿ ಸಿಂಧೂರಿ ಬಗ್ಗೆ ಯಾಕೆ ಮಾತನಾಡ್ತಿದ್ದಾರೆ. ರೂಪಾ ಅವರಿಗೆ ಮಾನಸಿಕ ತೊಂದರೆ ಇರಬಹುದು. ಮೂರು ಜನ ಐಎಎಸ್ ಅಧಿಕಾರಿಗಳು ಯಾರು ಅನ್ನೋದನ್ನು ರೂಪಾ ಸ್ಪಷ್ಟಪಡಿಸಬೇಕು. ಔಟ್ ಆಫ್ ಕಾಂಟಾಕ್ಟ್ ಫೋಟೋ ಯಾಕೆ ತೆಗೆದು ವೈರೆಲ್ ಮಾಡಿದ್ದಾರೆ. ನಾವು ಯಾರಿಗೂ ಶೇರ್ ಮಾಡಿಲ್ಲ, ಇವರಿಗೆ ಹೇಗೆ ಸಿಕ್ಕಿದೆ. ಫೋಟೊಗಳನ್ನ ಹ್ಯಾಕ್ ಮಾಡಿ ತೆಗೆದುಕೊಂಡಿರಬಹುದು ಎಂದು ಕಿಡಿಕಾರಿದರು.

ರೋಹಿಣಿ ಸಿಂಧೂರಿ ಅಭಿಮಾನಿಗಳಿಂದ ಡಿ ರೂಪಾಗೆ 9 ಪ್ರಶ್ನೆಗಳು

Rohini Sindhuri Organization ಎಂಬ ಫೇಸ್‌ಬುಕ್ ಪೇಜ್ ಮೂಲಕ ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ 9 ಪ್ರಶ್ನೆಗಳನ್ನು ಕೇಳಲಾಗಿದ್ದು, ಉತ್ತರ ಕೊಡಿ ರೂಪಾ ಅವರೇ ಎಂದು ಹ್ಯಾಷ್ ಟ್ಯಾಗ್ ಬಳಸಿ ಪ್ರಶ್ನೆಗಳನ್ನ ಕೇಳಿದ್ದಾರೆ.

1. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ರೋಹಿಣಿ ಸಿಂಧೂರಿ ಅವರದ್ದು ಏನೂ ತಪ್ಪಿಲ್ಲ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದ್ದು, ಮತ್ತೆ ಮತ್ತೆ ನೀವು ಅವರ ಮೇಲೆ ಆರೋಪ ಹೊರಿಸುತ್ತಿರುವುದು ಏಕೆ ಡಿ ರೂಪಾ ರವರೇ.? ಎಂದು ಪ್ರಶ್ನಿಸಿದ್ದಾರೆ.

2. ತಮ್ಮ ಟ್ವೀಟ್'ನಲ್ಲಿ ಶಿಲ್ಪಾನಾಗ್ ಅವರನ್ನು 'ಕನ್ನಡತಿ' ಎಂದು ಹೈಲೈಟ್ ಮಾಡಿರುವ ತಾವು, ಸಿಂಧೂರಿಯವರು ಎಂದಾದರೂ ಕನ್ನಡಿಗರನ್ನು ದ್ವೇಷಿಸಿದ್ದನ್ನು ನೋಡಿದ್ದೀರಾ? ಅವರು ಯಾವುದೇ ವೇದಿಕೆ ಮೇಲೆ ತೆಲುಗುನಲ್ಲಿ ಭಾಷಣ ಮಾಡಿದ್ದನ್ನು ನೋಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

3.ತಾವು ನಿನ್ನೆ ಮಾತನಾಡುವಾಗ 'ರೋಹಿಣಿಗೂ ನನಗೂ ಹೋಲಿಸಬೇಡಿ' ಎಂದಿದ್ರಿ, ಇಷ್ಟೆಲ್ಲಾ ನಡೆದರೂ 'ಎಂದಿನಂತೆ ಶ್ರದ್ಧೆಯಿಂದ ಕೆಲಸ ಮಾಡ್ತೀನಿ' ಎನ್ನುವ ಅವರೆಲ್ಲಿ.? ಮಾಧ್ಯಮಗಳ ಗಮನ ತಮ್ಮೆಡೆಗೆ ಪ್ರಯತ್ನಿಸುತ್ತಿರುವ ನೀವೆಲ್ಲಿ? ಎಂದು ಪ್ರಶ್ನಸಿದ್ದಾರೆ.

4. ಮೈಸೂರಿನ ಡಿಸಿ ನಿವಾಸದ ಈಜುಕೊಳ ನಿರ್ಮಾಣದ ಯೋಜನೆ ಮತ್ತು ಯೋಚನೆ ಎರಡು ನನ್ನದಲ್ಲ ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲವೇ ಮೇಡಂ?

5. ಗಾಯಕ ಲಕ್ಕಿ ಅಲಿ ಜಮೀನಿಗೂ ಮತ್ತು ನನಗೂ ಯಾವುದು ಸಂಬಂಧ ಇಲ್ಲ' ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದಾರೆ, ಅವರ ಕುಟುಂಬದ ಯಾರ ಮೇಲೆ ಆರೋಪ ಬಂದರೂ, ಸಿಂಧೂರಿಯವರ ಮೇಲೆ ನೇರ ಆರೋಪ ಹೊರಿಸುವುದು ಏಕೆ?

6. ಎಲ್ಲಾ ಕನ್ನಡಿಗರಿಗೆ ತಮ್ಮ ಮೇಲೆ ಅಪಾರ ಗೌರವವಿದೆ, ಕನ್ನಡದ ಎಲ್ಲಾ ಹೆಣ್ಣು ಮಕ್ಕಳಿಗೆ ತಾವೇ ದೊಡ್ಡ ಸ್ಪೂರ್ತಿ, ಇದರ ನಡುವೆ ಕರ್ನಾಟಕ ಸರ್ಕಾರದ ಹಿರಿಯ, ಮಹಿಳಾ ಅಧಿಕಾರಿಯನ್ನು ಬೇರೆ ರಾಜ್ಯದವರು ಎಂದು ಹೇಳಿ ನೋವುಂಟು ಮಾಡುವುದು ಸರಿಯೇ?

7. ಸಿಂಧೂರಿಯವರು ಕರ್ನಾಟಕಕ್ಕೆ ಬಂದ ಆರೇ ತಿಂಗಳಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿತಿದ್ದಾರೆ, ಅವರು ತಮ್ಮ ಕಚೇರಿ ವೇಳೆಯಲ್ಲಿ ಎಂದಾದರೂ ಕನ್ನಡಿಗರನ್ನು ಕಡೆಗಣಿಸಿರುವುದು ತಮ್ಮ ಗಮನಕ್ಕೆ ಬಂದಿದೆಯೇ?

8. ರೋಹಿಣಿ ಅವರ ಮೇಲೆ ಯಾವುದೇ ಆರೋಪ ಇದ್ದರೂ, ಅದನ್ನು ನೇರವಾಗಿ @CSofKarnataka ಹಾಗೂ @DgpKarnataka ರವರ ಗಮನಕ್ಕೆ ತರದೆ, WhastApp Screenshot ಗಳಲ್ಲಿ ತೆಗೆದ ಅವರ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+