ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಹಿಣಿ ಸಿಂಧೂರಿ ಸೇರಿ 6 ಐಎಎಸ್ ಅಧಿಕಾರಿಗಳ ವರ್ಗಾವಣೆ

|
Google Oneindia Kannada News

ಬೆಂಗಳೂರು, ಜನವರಿ 22 : ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಸೇರಿದಂತೆ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ರೋಹಿಣಿ ಸಿಂಧೂರಿ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು ನೀಡಲಾಗಿತ್ತು.

ಸೋಮವಾರ ಸಂಜೆ ಕರ್ನಾಟಕ ಸರ್ಕಾರ 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಸನ ದ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವುದರಿಂದ ಐದು ವರ್ಷಗಳಲ್ಲಿ6ನೇ ಜಿಲ್ಲಾಧಿಕಾರಿಯನ್ನು ಕಂಡಂತಾಗಿದೆ.

ಡಿಸಿ ರೋಹಿಣಿ ವರ್ಗಾವಣೆ ಮಾಡದಂತೆ ಸಾರ್ವಜನಿಕರ ಆಗ್ರಹಡಿಸಿ ರೋಹಿಣಿ ವರ್ಗಾವಣೆ ಮಾಡದಂತೆ ಸಾರ್ವಜನಿಕರ ಆಗ್ರಹ

ರೋಹಿಣಿ ಸಿಂಧೂರಿ ದಾಸರಿ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ವ್ಯವಸ್ಥಾಪಕ ನಿರ್ದೇಶಕಿಯಾಗಿ ವರ್ಗಾವಣೆ ಮಾಡಲಾಗಿದೆ. ಎಂ.ವಿ.ವೆಂಕಟೇಶ್ ಅವರು ಹಾಸನದ ನೂತನ ಡಿಸಿಯಾಗಿ ನೇಮಕವಾಗಿದ್ದಾರೆ.

Rohini Sindhuri

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಸಿದ್ಧತೆಯಲ್ಲಿ ರೋಹಿಣಿ ಸಿಂಧೂರಿ ದಾಸರಿ ತೊಡಗಿಸಿಕೊಂಡಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ರೋಹಿಣಿ ಸಿಂಧೂರಿ ದಾಸರಿ ಅವರ ಕಾರ್ಯಗಳನ್ನು ಶ್ಲಾಘಿಸಿದ್ದರು.

ಹಾಸನ ಡಿಸಿ ರೋಹಿಣಿ ವಿರುದ್ಧ ಸಿದ್ದರಾಮಯ್ಯಗೆ ದೂರುಹಾಸನ ಡಿಸಿ ರೋಹಿಣಿ ವಿರುದ್ಧ ಸಿದ್ದರಾಮಯ್ಯಗೆ ದೂರು

ಮಹಾಮಸ್ತಕಾಭಿಷೇಕಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ರೋಹಿಣಿ ಸಿಂಧೂರಿ ದಾಸರಿ ಅವರನ್ನು ವರ್ಗಾವಣೆ ಮಾಡಲಾಗಿದೆ. 2017ರ ಜುಲೈ 14ರಂದು ರೋಹಿಣಿ ಸಿಂಧೂರಿ ದಾಸರಿ ಅವರು ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ತಮ್ಮ ಕಾರ್ಯ ವೈಖರಿಯ ಮೂಲಕ ಜನ ಮೆಚ್ಚುಗೆ ಗಳಿಸಿದ್ದರು.

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ

* ಎಂ.ವಿ.ಜಯಂತಿ - ಕೆಎಟಿ ಮುಖ್ಯಸ್ಥರು
* ವಿ.ಚೈತ್ರಾ - ಕಾರ್ಮಿಕ ಇಲಾಖೆ ಆಯುಕ್ತರು
* ಎಸ್.ಬಿ.ಶೆಟ್ಟಣ್ಣವರ್ - ಹಾವೇರಿ ಜಿಲ್ಲಾಧಿಕಾರಿ
* ಎಂ.ವಿ.ವೆಂಕಟೇಶ್ - ಹಾಸನ ಜಿಲ್ಲಾಧಿಕಾರಿ
* ಡಾ.ಕೆ.ರಾಮಚಂದ್ರ - ರಾಮನಗರ ಜಿಲ್ಲಾಧಿಕಾರಿ
* ಡಾ.ಬಿ.ಆರ್.ಮಮತಾ - ಆಹಾರ ಇಲಾಖೆ ಆಯುಕ್ತರು
* ರೋಹಿಣಿ ಸಿಂಧೂರಿ ದಾಸರಿ - ಕೆಎಸ್ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ

English summary
The Karnataka government on Monday, January 22, 2018 transferred 7 IAS officers including Hassan Deputy Commissioner Rohini Sindhuri. Following are their new postings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X