ಆರ್.ಎನ್.ನಾಯಕ್ ಹತ್ಯೆ ಪ್ರಕರಣ : ಇಬ್ಬರ ಬಂಧನ

arrest
ಉಡುಪಿ, ಜ.12 : ಅಂಕೋಲದಲ್ಲಿ ನಡೆದ ಸಹಕಾರಿ ಕ್ಷೇತ್ರದ ಧುರೀಣ, ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಭೂಗತ ಪಾತಕಿ ಬನ್ನಂಜೆ ರಾಜನ ಸಹಚರರು ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಹೇಳಿದ್ದಾರೆ.

ಆರ್.ಎನ್. ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಶನಿವಾರ ರಾತ್ರಿ ಬಿಜಾಪುರ ಮೂಲದ ಅಂಬಾಜಿ ಬಂಡಗಾರ್, ಕಾರ್ಕಳದ ಈದೂ ಗ್ರಾಮದ ಗಣೇಶ್ ಅವರನ್ನು ಬಂಧಿಸಲಾಗಿದೆ ಎಂದು ಪ್ರತಾಪ್ ರೆಡ್ಡಿ ಹೇಳಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. [ಶೂಟೌಟ್ ಆರ್.ಎನ್.ನಾಯಕರ್ ಹತ್ಯೆ]

ಆರ್.ಎನ್. ನಾಯಕ್ ಹತ್ಯೆ ಮಾಡಲು ಇಬ್ಬರು ಆರೋಪಿಗಳು 2 ಲಕ್ಷ ರೂಪಾಯಿ ಸುಪಾರಿ ಪಡೆದಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ಕೊಲೆಗೆ ಮೈಸೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹಚ್ಚಂಗಿ ಮಹೇಶ್, ಸಂತೋಷ್ ಸಹಕಾರ ನೀಡಿ ಸಂಚು ರೂಪಿಸಿದ್ದರು. ಕೊಲೆಯಲ್ಲಿ ಸ್ಥಳೀಯರು ಕೈ ಜೋಡಿಸಿರುವ ಶಂಕೆ ಇದೆ ಎಂದು ಪ್ರತಾಪ್ ರೆಡ್ಡಿ ಹೇಳಿದ್ದಾರೆ. [ಆರ್.ಎನ್.ನಾಯಕ್ ಹತ್ಯೆ ಮಾಡಿಸಿದ್ದು ಬನ್ನಂಜೆ ರಾಜಾ]

ನಾಯಕ್ ಹತ್ಯೆಯಾದ ಬಳಿಕ ಮಾಧ್ಯಮಗಳಿಗೆ ಕರೆ ಮಾಡಿದ್ದ ಭೂಗತ ಪಾತಕಿ ಬನ್ನಂಜೆ ರಾಜ ಹತ್ಯೆಯಲ್ಲಿ ತನ್ನ ಕೈವಾಡವಿದೆ ಎಂದು ಹೇಳಿಕೆ ನೀಡಿದ್ದನು. ಬಂಧಿತರು ಬನ್ನಂಜೆ ರಾಜ ಸಹಚರರು ಎಂದು ಪ್ರತಾಪ್ ರೆಡ್ಡಿ ಹೇಳಿದ್ದಾರೆ. ಇದರಿಂದ ಹತ್ಯೆಯಲ್ಲಿ ಅವರ ಕೈವಾಡವಿದೆ ಎಂಬುದು ಸಾಬೀತಾಗಿದೆ.

ಘಟನೆ ವಿವರ : ಡಿ.21ರಂದು ಅಂಕೋಲಾ ಬಸ್ ‌ನಿಲ್ದಾಣದ ಬಳಿ ಬಳಿ ನಾಲ್ಕು ಜನ ದುಷ್ಕರ್ಮಿಗಳು ನಡೆಸಿದ ಶೂಟೌಟ್ ನಲ್ಲಿ ಆರ್.ಎನ್ ನಾಯಕ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯತ್ನಿಸಲಾಯಿತು. ಆದರೆ, ಮಾರ್ಗಮಧ್ಯದಲ್ಲೇ ನಾಯಕ್ ಅವರು ಸಾವನ್ನಪ್ಪಿದ್ದರು.

ಗುಂಡಿನ ಚಕಮಕಿ ಆರಂಭವಾಗುತ್ತಿದ್ದಂತೆ ನಾಯಕ್ ಅವರ ಗನ್ ಮ್ಯಾನ್ ಕೂಡಾ ಪ್ರತಿದಾಳಿ ನಡೆಸಿದ್ದು, ಓರ್ವ ದುಷ್ಕರ್ಮಿ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದ. ಸ್ಥಳೀಯರ ಸಹಕಾರಿಂದ ಇನ್ನೊಬ್ಬ ಹಂತಕನನ್ನು ಸೆರೆ ಹಿಡಿಯಲಾಗಿತ್ತು. ಆರ್ .ಎನ್ .ನಾಯಕ್ ಅವರು ರಾಜಕೀಯವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು, ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು ಹಾಗೂ ಹಣಕಾಸು ಸಂಸ್ಥೆಯೊಂದನ್ನು ನಡೆಸುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+