ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಸ್‌ಮಿಲ್‌ ಮಾಲೀಕರ ಪ್ರತಿಭಟನೆ , ಅಕ್ಕಿ ಬೆಲೆ ಹೆಚ್ಚಳ?

|
Google Oneindia Kannada News

ಬೆಂಗಳೂರು, ಡಿ. 16 : ಕರ್ನಾಟಕ ಸರ್ಕಾರದ ಲೆವಿ ನೀತಿ ವಿರೋಧಿಸಿ ಸೋಮವಾರದಿಂದ ಅನಿರ್ದಿಷ್ಟಾವಧಿ ರೈಸ್‌ಮಿಲ್‌ಗ‌ಳನ್ನು ಬಂದ್‌ ಮಾಡಲು ಅಕ್ಕಿ ಗಿರಣಿ ಮಾಲೀಕರು ನಿರ್ಧರಿಸಿದ್ದಾರೆ. ಇದರಿಂದಾಗಿ ರಾಜ್ಯದ 1800 ರೈಸ್‌ ಮಿಲ್‌ಗ‌ಳಲ್ಲಿ ಭತ್ತದ ಮಿಲ್ಲಿಂಗ್‌ ಸ್ಥಗಿತಗೊಳ್ಳಲಿದ್ದು, ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗು ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ಅಕ್ಕಿ ಗಿರಣಿ ಮಾಲೀಕರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೋಮವಾರದಿಂದ ರೈಸ್‌ಮಿಲ್‌ಗ‌ಳನ್ನು ಬಂದ್ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ವ್ಯಾಪಾರಿಗಳು ಅಕ್ಕಿಬೆಲೆಯನ್ನು ಮತ್ತಷ್ಟು ಹೆಚ್ಚು ಮಾಡುವ ಸಾಧ್ಯತೆ ಇದೆ. ಸರ್ಕಾರ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದು, ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಬಹುದು.

rice

ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿಯನ್ನು ಬೇರೆ ರಾಜ್ಯಗಳಿಂದ ಖರೀದಿ ಮಾಡುವುದಿಲ್ಲ. ರಾಜ್ಯದ ರೈತರು ಮತ್ತು ಅಕ್ಕಿಗಿರಣಿಗಳಿಂದ ಖರೀದಿ ಮಾಡುತ್ತೇವೆ ಎಂದು ಸರ್ಕಾರ ತೀರ್ಮಾನ ಕೈಗೊಂಡಿತ್ತು. ಕ್ವಿಂಟಾಲ್‌ 2400 ರೂ. ದರದಲ್ಲಿ ಅಕ್ಕಿಯನ್ನು ಮಿಲ್ ಗಳಿಂದ ಖರೀದಿಸಲಾಗುವುದು, ಮಿಲ್ ಗಳು 5 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಪೂರೈಸಬೇಕು ಎಂದು ಸರ್ಕಾರ ಹೇಳಿತ್ತು. (ಸಚಿವ ಸಂಪುಟ ಸಭೆ ತೀರ್ಮಾನಗಳು)

ಆದರೆ, ರೈಸ್‌ಮಿಲ್‌ ಮಾಲೀಕರು ಸರ್ಕಾರ ನಿಗದಿ ಪಡಿಸಿರುವ ಬೆಲೆ ಅವೈಜ್ಞಾನಿಕವಾದದ್ದು, 2800 ರೂ. ದರದಲ್ಲಿ ಅಕ್ಕಿಯನ್ನು ನೀಡಿದರೂ ನಷ್ಟ ಉಂಟಾಗುತ್ತದೆ. 2400 ರೂ. ದರದಲ್ಲಿ 5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸಲು ಸಾಧ್ಯವಿಲ್ಲ ಎಂದು ಸೋಮವಾರದಿಂದ ರೈಸ್‌ಮಿಲ್‌ಗ‌ಳನ್ನು ಬಂದ್ ಮಾಡಿ ಪ್ರತಿಭಟನೆ ಆರಂಭಿಸಲಿದ್ದಾರೆ.

ಲೇವಿ ಅಕ್ಕಿ ಸಂಗ್ರಹ ವಿರೋಧಿಸಿ ಧರಣಿಗಿಳಿಯುವ ರೈಸ್ ಮಿಲ್ ಮಾಲೀಕರನ್ನು ಮಣಿಸಲು ಕಾದು ನೋಡುವ ತಂತ್ರಕ್ಕೆ ಶರಣಾಗಲು ಸರ್ಕಾರ ನಿರ್ಧರಿಸಿದೆ. ಬಿಕ್ಕಟ್ಟು ಇತ್ಯರ್ಥಕ್ಕೆ ಸರ್ಕಾರದ ಕಡೆಯಿಂದ ಯಾವುದೇ ಸಂಧಾನ ಪ್ರಕ್ರಿಯೆ ನಡೆದಿಲ್ಲ. ಆದ್ದರಿಂದ ಸೋಮವಾರದಿಂದ ರೈಸ್ ಮಿಲ್ ಗಳು ಸ್ಥಗಿತಗೊಳ್ಳಲಿವೆ. ಇದರಿಂದ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

English summary
Protest against government’s move on levy procurement for Anna Bhagya scheme rice mills across the State will shut indefinitely from Monday, December 16. In protest against the State Cabinet’s decision to procure 5 lakh tonnes of levy rice before March 31 next to meet the requirements of the Anna Bhagya scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X