ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಿಂದ ರಾಜ್ಯಕ್ಕೆ ವಾಪಸಾಗುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯವಲ್ಲ

|
Google Oneindia Kannada News

ಬೆಂಗಳೂರು, ನವೆಂಬರ್ 24: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಾಪಸಾಗುವವರಿಗೆ ಕೊರೊನಾ ಪರೀಕ್ಷೆಯ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ.

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಾಪಸ್​ ಆಗುವವರಿಗೆ ಆರ್​​ಟಿ-ಪಿಸಿಆರ್ ಕೋವಿಡ್ ಪರೀಕ್ಷೆ ವರದಿ ನೀಡುವ ನಿಯಮಕ್ಕೆ ಬ್ರೇಕ್ ಬಿದ್ದಿದ್ದು, ಸದ್ಯ ಪ್ರಯಾಣಿಕರು ವರದಿ ತೋರಿಸದೆ ನಿರಾಳವಾಗಿ ಓಡಾಡಬಹುದಾಗಿದೆ. ಆದರೆ, ಕೋವಿಡ್ ಪರೀಕ್ಷೆ ಇಲ್ಲದಿದ್ದರೂ ಕೆಲ ಷರತ್ತುಗಳು ಅನ್ವಯ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಭಾರತದಲ್ಲಿ ಮೊದಲು 2 ಡೋಸ್ ನೀಡಿ, ಬೂಸ್ಟರ್ ಡೋಸ್ ಚಿಂತೆ ಬಿಡಿ!ಭಾರತದಲ್ಲಿ ಮೊದಲು 2 ಡೋಸ್ ನೀಡಿ, ಬೂಸ್ಟರ್ ಡೋಸ್ ಚಿಂತೆ ಬಿಡಿ!

ಮಾರ್ಗಸೂಚಿ ಪಾಲನೆ ಕಡ್ಡಾಯ:

*ಮಹಾರಾಷ್ಟ್ರದಲ್ಲಿ ಕೇವಲ 2 ದಿನಗಳು ಇದ್ದು ವಾಪಸಾಗುವ ಪ್ರಯಾಣಿಕರಿಗೆ ಈ ನಿಯಮ ಅನ್ವಯ ಆಗಲಿದೆ.

Revised Test Rules Who Travels From Maharashtra To Karnataka

*ಮಹಾರಾಷ್ಟ್ರದಿಂದ ವಾಪಸಾಗುವವರಿಗೆ ಎರಡು ಡೋಸ್ ಕೋವಿಡ್ ಲಸಿಕೆ ‌ಕಡ್ಡಾಯ.
*ಎರಡನೇ ಡೋಸ್ ಲಸಿಕೆ ಪಡೆದು 14 ದಿನಗಳಾಗಿರಬೇಕು.
*ಕೋವಿಡ್ ಗುಣಲಕ್ಷಣಗಳನ್ನು ಹೊಂದಿರಬಾರದು.
*ಜ್ವರ, ಶೀತ, ಕೆಮ್ಮು, ಗಂಟಲು‌ ನೋವು, ಉಸಿರಾಟದ ತೊಂದರೆಯಿಂದ ಮುಕ್ತರಾಗಿರಬೇಕು.
*ವಾಪಸಾಗುವಾಗ ಮಹಾರಾಷ್ಟ್ರದಲ್ಲಿ ಕೇವಲ ಎರಡು ದಿನಗಳು ಮಾತ್ರ ಇದ್ದ ಬಗ್ಗೆ ಟಿಕೆಟ್ ಪ್ರೊಡ್ಯೂಸ್ ಮಾಡಬೇಕು‌.
*7 ದಿನಗಳ ಕಾಲ ಸ್ವಯಂಪ್ರೇರಿತವಾಗಿ ಆರೋಗ್ಯದ ಬಗ್ಗೆ ನಿಗಾ ಇಡಬೇಕು.
*ಒಂದು ವೇಳೆ ಕೋವಿಡ್ ಗುಣಲಕ್ಷಣಗಳು ಕಂಡುಬಂದರೆ ತಕ್ಷಣ ಟೆಸ್ಟ್ ಮಾಡಿಸಬೇಕು.

ರಾಜ್ಯದಲ್ಲಿ ಕೊರೊನಾ ಏರಿಳಿತ ಮುಂದುವರೆದಿದ್ದು, ಸೋಮವಾರಕ್ಕಿಂತ ಮಂಗಳವಾರ ತುಸು ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 224 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,94,001ಕ್ಕೆ ಏರಿಕೆಯಾಗಿದೆ.

379 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 6,707 ಸಕ್ರಿಯ ಪ್ರಕರಣಗಳಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸೋಂಕಿನಿಂದ ಇಂದು ಐವರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಮೃತರ ಸಂಖ್ಯೆ 38,182ಕ್ಕೆ ಏರಿಕೆಯಾಗಿದೆ. ಸೋಂಕಿನ ಶೇಕಡವಾರು ಪ್ರಮಾಣ ಶೇ. 0.43 ರಷ್ಟಿದ್ದು, ಮರಣ ಪ್ರಮಾಣ ಶೇ. 2.23 ರಷ್ಟಿದೆ.

ಬೆಂಗಳೂರಿನಲ್ಲಿ 122 ಸೋಂಕಿತರು ಪತ್ತೆಯಾಗಿದ್ದು, 300 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಬಾಗಲಕೋಟೆ, ಬಳ್ಳಾರಿ, ಬೀದರ್, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ರಾಮನಗರ, ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.

Recommended Video

ಕೆಂಚಪ್ಪ ಗೌಡರ ಮನದಾಳದ ಮಾತು | Oneindia Kannada

English summary
As the state witnessed a significant decline in the coronavirus cases, the Karnataka government on Tuesday used fresh guidelines for waiver of RT-PCR test requirement for those returning to the state within two days of their stay in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X