ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಆಗಸ್ಟ್‌ 23 ರಂದು ಶಾಲೆ-ಕಾಲೇಜು ಪ್ರಾರಂಭ: ಸಿಎಂ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್ 22: ಪ್ರವಾಹ ಪೀಡಿತ ಕೊಡಗಿನಲ್ಲಿ ಪರಿಹಾರ ಕಾರ್ಯಗಳು ಭರದಿಂದ ಮುಂದುವರೆದಿದ್ದು, ನಾಳೆ (ಆಗಸ್ಟ್ 23) ಶಾಲೆ-ಕಾಲೇಜುಗಳು ತೆರೆಯಲಿವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹಾಗೂ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ತ್ವರಿತವಾಗಿ ವಿತರಣೆ ಮಾಡಲು ಅನುಕೂಲವಾಗುವಂತೆ ಜಿಲ್ಲೆಯ 5 ದಾಸ್ತಾನು ಕೇಂದ್ರಗಳ ಮೂಲಕ 100 ಕ್ಕೂ ಹೆಚ್ಚು ವಾಹನಗಳಲ್ಲಿ ಗ್ರಾ.ಪಂ. ಹಾಗೂ ಇತರೆ ಪಟ್ಟಣ ಪ್ರದೇಶಗಳಿಗೆ ನಿರಂತರವಾಗಿ ತಲುಪಿಸಲಾಗುತ್ತಿದೆ ಎಂದರು.

ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಬಿಸಿನೀರಿನ ವ್ಯವಸ್ಥೆ ಕಲ್ಪಿಸಲು ಗ್ಯಾಸ್ ಗೀಸರ್ ಹಾಗೂ ಅಡುಗೆ ಅನಿಲ ಪೂರೈಕೆ ಸಹ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಟಾರ್ಪಲ್‌, ಪ್ಲಾಸ್ಟಿಕ್ ಬ್ಯಾಗ್ ಅವಶ್ಯಕತೆ ಇದೆ

ಟಾರ್ಪಲ್‌, ಪ್ಲಾಸ್ಟಿಕ್ ಬ್ಯಾಗ್ ಅವಶ್ಯಕತೆ ಇದೆ

ನಿರಾಶ್ರಿತರಿಗೆ ಒದಗಿಸಲು ಹೆಚ್ಚುವರಿಯಾಗಿ ಟಾರ್ಪಲ್‌ಗಳು ಹಾಗೂ ಪ್ಲಾಸ್ಟಿಕ್ ಬ್ಯಾಗ್‌ಗಳು ಅಗತ್ಯವಿದ್ದು, ಉಳಿದಂತೆ ಇತರೆ ಎಲ್ಲಾ ಬಗೆಯ ಪರಿಹಾರ ಸಾಮಗ್ರಿಗಳು ದಾಸ್ತಾನು ಕೇಂದ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಕೊಡಗು ಜಿಲ್ಲೆಯಲ್ಲಿ ಅಡುಗೆ ಅನಿಲ, ಗ್ಯಾಸ್ ಗೀಜರ್, ಪೆಟ್ರೋಲ್, ಡೀಸಲ್ ಪೂರೈಕೆಯಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯ ಉಂಟಾಗದಂತೆ ನಿಗಾ ವಹಿಸುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ. ಹಾಗೂ 50 ಸಾವಿರ ಆಹಾರ ಕಿಟ್‌ಗಳನ್ನು ಸಮರ್ಪಕವಾಗಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಮೋದಿಯ ಭೇಟಿಯಾದರೂ ಕೊಡಗು ವಿಷಯ ಮಾತನಾಡಲಿಲ್ಲ ಯಡಿಯೂರಪ್ಪ ಮೋದಿಯ ಭೇಟಿಯಾದರೂ ಕೊಡಗು ವಿಷಯ ಮಾತನಾಡಲಿಲ್ಲ ಯಡಿಯೂರಪ್ಪ

ಐದು ಸಾವಿರ ಶಾಲಾ ಪುಸ್ತಕ ವಿತರಿಸಲು ಕ್ರಮ

ಐದು ಸಾವಿರ ಶಾಲಾ ಪುಸ್ತಕ ವಿತರಿಸಲು ಕ್ರಮ

ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ತೀವ್ರ ಹಾನಿಗೊಳಗಾಗಿರುವ ಪ್ರದೇಶಗಳ 61 ಶಾಲೆಗಳನ್ನು ಹೊರತುಪಡಿಸಿ ಉಳಿದೆಡೆ -ಆಗಸ್ಟ್ 23 ರಿಂದಲೇ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಐದು ಸಾವಿರ ಶಾಲಾ ಪುಸ್ತಕ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಮಕ್ಕಳಿಗೆ ಶಾಲಾ ಪಠ್ಯ ಚಟುವಟಿಕೆ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಲು ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಂಚಾಯತ್ ಎಂಜಿನಿಯರಿಂಗ್ ವಿಭಾಗ, ಈ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಕೊಡಗು ವಿದ್ಯಾರ್ಥಿಗಳಿಗೆ ಹೊಸ ಅಂಕಪಟ್ಟಿ ನೀಡಲು ಸರ್ಕಾರ ಸೂಚನೆಕೊಡಗು ವಿದ್ಯಾರ್ಥಿಗಳಿಗೆ ಹೊಸ ಅಂಕಪಟ್ಟಿ ನೀಡಲು ಸರ್ಕಾರ ಸೂಚನೆ

ಭೂಕುಸಿತ ತಡೆಯಲು ಮರಳು ಚೀಲಗಳ ಬಳಕೆ

ಭೂಕುಸಿತ ತಡೆಯಲು ಮರಳು ಚೀಲಗಳ ಬಳಕೆ

ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತ ತಪ್ಪಿಸಲು ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಭೂ ಕುಸಿತ ತಡೆಯಲು ರಕ್ಷಣಾ ತಡೆಗೋಡೆ ನಿರ್ಮಿಸಲು ಮರಳು ಚೀಲಗಳನ್ನು ಬಳಸುವ ಮೂಲಕ ತಾತ್ಕಾಲಿಕ ಪರಿಹಾರ ಕಾಮಗಾರಿ ಕೈಗೊಳ್ಳಲು ಸಂಬಂಧಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಾದ್ಯಂತ ಬಸ್ ಸಂಚಾರ ಹಾಗೂ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಕೆಎಸ್‍ಆರ್‌ಟಿಸಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಭೂಕುಸಿತದ ಕಾರಣ ಪತ್ತೆಗಾಗಿ ಕೊಡಗಿಗೆ ಭೇಟಿ ನೀಡಿದ ಇಸ್ರೋ ವಿಜ್ಞಾನಿಗಳುಭೂಕುಸಿತದ ಕಾರಣ ಪತ್ತೆಗಾಗಿ ಕೊಡಗಿಗೆ ಭೇಟಿ ನೀಡಿದ ಇಸ್ರೋ ವಿಜ್ಞಾನಿಗಳು

ವ್ಯವಸ್ಥಿತ ಚರಂಡಿ ನಿರ್ಮಾಣಕ್ಕೆ ಕ್ರಮ

ವ್ಯವಸ್ಥಿತ ಚರಂಡಿ ನಿರ್ಮಾಣಕ್ಕೆ ಕ್ರಮ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪರಿಹಾರ ಕಾಮಗಾರಿಗಳನ್ನು ತಕ್ಷಣದಿಂದ ಪ್ರಾರಂಭಿಸಲು ಅಧಿಕಾರಿಗಳಗೆ ಸೂಚನೆ ನೀಡಲಾಗಿದೆ. ಬರುವ ದಿನಗಳಲ್ಲಿ ಪ್ರಕೃತಿ ವಿಕೋಪ ತಡೆಯುವ ನಿಟ್ಟಿನಲ್ಲಿ ಮಳೆ ನೀರು ಸಾರಾಗವಾಗಿ ಹರಿದು ಹೋಗಲು ವ್ಯವಸ್ಥಿತ ಚರಂಡಿ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ.

ಕೊಡಗು ಪ್ರವಾಹ ಹಿನ್ನೆಲೆ ಸಮನ್ವಯ ಸಮಿತಿ ಮುಂದಕ್ಕೆ: ಪರಮೇಶ್ವರ್‌ ಕೊಡಗು ಪ್ರವಾಹ ಹಿನ್ನೆಲೆ ಸಮನ್ವಯ ಸಮಿತಿ ಮುಂದಕ್ಕೆ: ಪರಮೇಶ್ವರ್‌

ಕೃಷಿ ನಷ್ಟದ ಸಮೀಕ್ಷೆಗೆ ಸೂಚನೆ

ಕೃಷಿ ನಷ್ಟದ ಸಮೀಕ್ಷೆಗೆ ಸೂಚನೆ

ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಭೂಮಿ ಗುರ್ತಿಸುವ ಪ್ರಕ್ರಿಯೆಯನ್ನು ತಕ್ಷಣವೇ ಕೈಗೊಳ್ಳಲಾಗುವುದು.

ಪ್ರಕೃತಿ ವಿಕೋಪದಿಂದ ಉಂಟಾದ ಮನೆ ಹಾನಿ, ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟದ ಸಮೀಕ್ಷೆ ವರದಿ ಪಡೆದು ಸಂಬಂಧಪಟ್ಟವರಿಗೆ ಪರಿಹಾರ ಧನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ತಂಡ ಪ್ರವಾಹ ಪೀಡಿತ ಕೊಡಗಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ತಂಡ ಪ್ರವಾಹ ಪೀಡಿತ ಕೊಡಗಿಗೆ

ಆಸ್ತಿ ದಾಖಲೆಗೆ ವಿತರಿಸಲು ಕ್ರಮ

ಆಸ್ತಿ ದಾಖಲೆಗೆ ವಿತರಿಸಲು ಕ್ರಮ

ಅತಿವೃಷ್ಟಿಯಿಂದಾಗಿ ಆಸ್ತಿ-ಪಾಸ್ತಿಯ ದಾಖಲೆಗಳನ್ನು ಕಳೆದುಕೊಂಡವರಿಗೆ ದಾಖಲೆಗಳನ್ನು ಸೃಜಿಸಿಕೊಡುವ ಕಾರ್ಯ ಪ್ರಾರಂಭಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಇವರ ಸಮನ್ವಯತೆಯಲ್ಲಿ ಅಗತ್ಯಕ್ಕನುಗುಣವಾಗಿ ಡ್ರೋಣ್ ಕ್ಯಾಮರಾಗಳನ್ನು ಬಳಸಿ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುವುದು.

English summary
Schools and colleges re opening in Kodagu from tomorrow said CM Kumaraswamy. He said all measures has been taken to re-construct Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X