ಇಲಾಖಾವಾರು ಅಭಿವೃದ್ದಿ, ಪೌರಾಡಳಿತ ಇಲಾಖೆಯ ಸಮಗ್ರ ಸುಧಾರಣೆ ಕುರಿತು ವರದಿ ಸಲ್ಲಿಕೆ

ಇಲಾಖಾವಾರು ಅಭಿವೃದ್ದಿ ಹಾಗೂ ಪೌರಾಡಳಿತ ಇಲಾಖೆಯ ಸಮಗ್ರ ಸುಧಾರಣೆ ಕುರಿತ ವರದಿಯನ್ನು ಪೌರಾಡಳಿತ ಸಚಿವರಾದ ರಹೀಂ ಖಾನ್‌ ಅವರಿಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೋಹನ್ ದಾಸ್ ಹೆಗಡೆ ಸಲ್ಲಿಸಿದ್ದಾರೆ. ಈ ಪ್ರಮುಖ ವರದಿಯು ಕೆಳಗಿನಂತಿದೆ.

'ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಪೌರಾಡಳಿತ ಇಲಾಖೆಯನ್ನು ಸಮಗ್ರವಾಗಿ, ಆದ್ಯತೆಯ ಮೇರೆಗೆ ಸುಧಾರಣೆ ಮಾಡುವ ಬಗ್ಗೆ ಮುಖ್ಯ ಅಂಶಗಳನ್ನು ನಿಮ್ಮ ಮುಂದೆ ಸಾದರಪಡಿಸುತ್ತಿದ್ದೇನೆ. ನಗರ ಪಟ್ಟಣ ಪ್ರದೇಶಗಳ ಆಡಳಿತ ಸುಧಾರಣೆ ಮಾಡಿ ಅದನ್ನು ಆಧುನಿಕ ತಂತ್ರ, ಸ್ಥಳೀಯ ಬೆಂಬಲ, ಸಹಕಾರ ಮತ್ತು ಜಾಗತಿಕ ಗುಣಮಟ್ಟಕ್ಕೇರಿಸುವುದು ಅತಿ ಮುಖ್ಯವಾಗಿದೆ.

Report Submission on Municipal Administration Reform Initiatives

ಈ ಮೂಲಕವಾಗಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅತ್ಯುತ್ತಮ ಸೇವೆ ಕಲ್ಪಿಸುವುದು, ಸೂರು ಮತ್ತು ಸೇವಾ ಸೌಲಭ್ಯ ನೀಡುವುದು ಹಾಗೂ ಸ್ವಚ್ಛ, ಹಸಿರು ವಾತಾವರಣ ನಿರ್ಮಿಸುವುದು ಈ ಬದಲಾವಣೆಯ ಮುಖ್ಯ ಸಂಗತಿಗಳಾಗಿವೆ.

ಮುಖ್ಯಾಂಶಗಳು

1- ಬಡತನ ನಿರ್ಮೂಲನೆ: ಕಡು ಬಡವರ ನೆರವಿಗೆ, ಹಿರಿಯ ನಾಗರೀಕರಿಗೆ , ಅಸ್ವಸ್ಥರು ಮತ್ತು ನಿರ್ಗತಿಕರಿಗಾಗಿ ಯೋಜನೆ.

2- ಕಲಿಕೆ ಮತ್ತು ದುಡಿಮೆ ಮೂಲಕ ಸಬಲೀಕರಣ: ನಾಗರೀಕರಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶ ಕಲ್ಪಿಸುವ ಮೂಲಕ ಘನತೆಯ ಬದುಕಿಗೆ ಅವಕಾಶ ಕಲ್ಪಿಸುವುದು.

3- ಮಕ್ಕಳ ಪೋಷಣೆ ಮತ್ತು ಕುಟುಂಬ ಕಲ್ಯಾಣಕ್ಕೆ ಆದ್ಯತೆ: ಸಣ್ಣ ಸಣ್ಣ ಕುಟುಂಬಗಳಿಗೆ ಉತ್ತೇಜನ ನೀಡಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಮತ್ತು ಭವಿಷ್ಯ ರೂಪಿಸುವುದು

4- ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸಬಲೀಕರಣ: ಮಹಿಳೆಯರಿಗೆ ಅಭಿವೃದ್ಧಿಯಲ್ಲಿ ಸಮಾನ ಅವಕಾಶ ಕಲ್ಪಿಸುವ ಮೂಲಕ ಲಿಂಗ ತಾರತಮ್ಯ ನಿವಾರಣೆ ಮಾಡಲು ಯೋಜನೆ ರೂಪಿಸುವುದು

5- ಕೃಷಿ ಮತ್ತು ಕೈಗಾರಿಕಾ ವಲಯವನ್ನು ಬಲಪಡಿಸುವುದು: ರೈತರು, ಉದ್ಯಮಿಗಳು, ವಿವಿಧ ವೃತ್ತಿ ಯ ಜನರ ಯಶಸ್ಸಿಗೆ, ಗುರಿ ಸಾಧನೆಗೆ ಕ್ರಮ ಕೈಗೊಳ್ಳುವುದು

6- ಪರಿಸರ ಸಂರಕ್ಷಣೆ: ಹಸಿರಿಗೆ ಆದ್ಯತೆ ನೀಡುವುದರ ಮೂಲಕ ನಗರ, ಪಟ್ಟಣ ಪ್ರದೇಶಗಳ ಉಳಿವಿಗೆ ಕ್ರಿಯಾ ಯೋಜನೆ

7- ನವೀನ ಮತ್ತು ಆಧುನಿಕ ಆಡಳಿತ: ಆಡಳಿತ ವಿಕೇಂದ್ರೀಕರಣ ಮಾಡುವುದು ಮತ್ತು ಹೆಚ್ಚಿನ ಹೊಣೆಗಾರಿಕೆ ಮತ್ತು ನಾಗರೀಕ ಪಾಲ್ಗೊಳ್ಳುವಿಕೆಗೆ ಡಿಜಿಟಲ್ ವೇದಿಕೆಗಳನ್ನು ಸೃಜಿಸುವುದು

8- ಪಾರದರ್ಶಕ ಆಡಳಿತ ಜಾರಿ: ಸರಕಾರಿ ವಹಿವಾಟನ್ನು ಸರಳೀಕರಣ, ಪಾರದರ್ಶಕ, ಜನಸ್ನೇಹಿ ಮಾಡುವುದು

9- ನಾಗರೀಕ ಸ್ನೇಹಿ ವ್ಯವಸ್ಥೆ: ಆಡಳಿತದಲ್ಲಿ ಸಾರ್ವಜನಿಕರ ದ್ವನಿ ಮತ್ತು ಸಹಭಾಗಿತ್ವ ಇರುವಂತೆ ನೋಡಿಕೊಳ್ಳುವುದು

ಪೌರಾಡಳಿತ ವ್ಯವಸ್ಥೆ ಸುಧಾರಣೆಯ ಮೂಲಮಂತ್ರ

1- ಸೇವಾದಾರಿತ ವ್ಯವಸ್ಥೆಯನ್ನು ವಿಸ್ತರಿಸುವುದು: ಪೌರಾಡಳಿತ ಸೇವೆಗಳನ್ನು ಸ್ಪರ್ಧಾತ್ಮಕ ವಾಗಿ ನೀಡುವುದು ಅಲ್ಲದೆ ಉತ್ತಮ ಗುಣಮಟ್ಟದ ಸೇವೆ ಎಲ್ಲ ವರ್ಗಕ್ಕೂ ಲಭ್ಯ ಆಗುವಂತೆ ನೋಡಿಕೊಳ್ಳುವುದು

2- ಖಾಸಗಿ ಸಾರ್ವಜನಿಕ ಸಹಭಾಗಿತ್ವ: ನಗರಾಭಿವೃದ್ಧಿ ಮೂಲಭೂತ ಸೌಕರ್ಯ ವ್ಯವಸ್ಥೆಯನ್ನು ಮತ್ತು ಸೇವೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ರೂಪಿಸುವುದು

3- ಸ್ಥಳೀಯ ನಿರ್ವಹಣೆ ಮತ್ತು ನಿಯಂತ್ರಣ: ಸ್ಥಳೀಯ ಪ್ರಾಧಿಕಾರ ಗಳಿಂದಲೇ ಸ್ಥಳೀಯ ಸಮಸ್ಯೆ ನಿವರಣೆಯಾಗುವಂತೆ ವ್ಯವಸ್ಥೆ ರೂಪಿಸುವುದು

4- ಸೂರು ಮತ್ತು ಮೂಲಭೂತ ಸೇವೆ: ಮೂಲಭೂತ ಸೇವೆ ಗಳಾದ ಸೂರಿ ನ ಸೌಲಭ್ಯ ಮತ್ತು ಮೂಲಭೂತ ಸೇವೆ ಕಲ್ಪಿಸುವ ಮೂಲಕ ನಗರ ಪಟ್ಟಣ ಪ್ರದೇಶದ ಸವಾಲುಗಳನ್ನು ಸ್ವೀಕರಿಸುವುದು

ಪೌರಾಡಳಿತ ವ್ಯವಸ್ಥೆ ಸುಧಾರಣೆಗೆ ಹೊಸ ದೃಷ್ಟಿ ಕೋನ

1- ದೃಷ್ಟಿಕೋನ: ನಾಗರೀಕರಿಗೆ ಸಕಲ ಸೌಲಭ್ಯವನ್ನು ಒಂದು ಸೂರಿನಲ್ಲಿ ನೀಡುವ ಕೇಂದ್ರ ಗಳನ್ನು ತೆರೆಯುವ ಮೂಲಕ ಸಮರ್ಥನೀಯ, ನವನವೀನ ವ್ಯವಸ್ಥೆ ರೂಪಿಸಲು ಕ್ರಮ

2- ಹೊಸ ಗುರಿ: ಸಮುದಾಯಗಳ ಸಮಸ್ಯೆಗಳ ಸ್ಪಂದನ, ಪರಸ್ಪರ ಸಹಕಾರದ ಆಡಳಿತ ಮೂಲಕ ಪೌರಾಡ ಳಿತವನ್ನು ಪರಿವರ್ತನೆ ಮಾಡುವುದು

3- ಹೊಸ ಸುಧಾರಣೆಗಳು: ಸ್ಥಳೀಯ ಸಂಪನ್ಮೂಲ ಮತ್ತು ಪ್ರತಿಭೆಗಳನ್ನು ಬಳಸಿಕೊಂಡು ಆರ್ಥಿಕ ಸ್ಥಿತಿಗತಿ ಸುಧಾರಿಸುವುದು. ಪರಿಸರ ಸ್ನೇಹಿ ಮೂಲಭೂತ ಸೌಕರ್ಯ ಮತ್ತು ಸೇವೆಗಳನ್ನು ಸೃಷ್ಟಿಸುವುದು.

ಹೊಸ ವ್ಯವಸ್ಥೆ: ವಿಕೇಂದ್ರೀಕೃತ ಸರಕಾರಿ ಮಾದರಿ

1- ವಿಕೇಂದ್ರೀಕೃತ ಆಡಳಿತ: ಆಡಳಿತ ತೀರ್ಮಾನ ಕೈಗೊಳ್ಳುವ ಮತ್ತು ಸೇವೆ ನಿರ್ಧರಿಸುವ ಹಂತದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡುವುದು. ಆಡಳಿತದಲ್ಲಿ ನಾಗರೀಕರು ಪಾಲ್ಗೊಳ್ಳುವ ವ್ಯವಸ್ಥೆ ತರುವುದು

2- ಡಿಜಿಟಲ್ ಆಡಳಿತ ವೇದಿಕೆ: ಡಿಜಿಟಲ್ ಜಾಲಗಳನ್ನು ರೂಪಿಸುವ ಮೂಲಕ ಆಡಳಿತದಲ್ಲಿ ಸೇವೆ ಬಳಸಿಕೊಳ್ಳಲು, ಸಾರ್ವಜನಿಕರ ಅಭಿಪ್ರಾಯಕ್ಕೆ ಆದ್ಯತೆ ನೀಡಲು, ಸ್ಥಳೀಯ ಆಡಳಿತದಲ್ಲಿ ಭಾಗವಹಿಸಲು ಕ್ರಮ ಕೈಗೊಳ್ಳುವುದು

ಹೊಸ ಹೆಜ್ಜೆ ಗುರುತು: ನಗರ ಮೂಲಭೂತ ಸೌಕರ್ಯ ಮತ್ತು ಹಸಿರು ಪ್ರದೇಶ

1- ಹಸಿರು ನಗರ ಸೌಕರ್ಯ: ಹಸಿರು ವಲಯ, ಉದ್ಯಾನ ವನ ಸೃಷ್ಟಿಸುವ ಮೂಲಕ ಬದುಕಿನ ಗುಣಮಟ್ಟ ಹೆಚ್ಚಿಸುವುದು
2- ಆಧುನಿಕ ವಸತಿ: ಎಲ್ಲ ವರ್ಗಗಳಿಗೂ ಕೈಗೆಟಕುವ ರೀತಿಯಲ್ಲಿ ಸೂಕ್ತ ಯೋಜನೆ ಮತ್ತು ಹಸಿರು ಪ್ರದೇಶದೊಂದಿಗೆ ವಸತಿ ನಿರ್ಮಾಣಕ್ಕೆ ಆದ್ಯತೆ

ಸಾರ್ವಜನಿಕ ಖಾಸಗಿ ಸಹಭಾಗಿತ್ವ ವ್ಯವಸ್ಥೆ ಮತ್ತು ವಿಕೇಂದ್ರೀಕೃತ ನಿರ್ವಹಣೆ ಮೂಲಕ ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಬಿಗಿ ಮಾಡಬಹುದು ಮತ್ತು ನಗರ ಪಟ್ಟಣ ಪ್ರದೇಶದಲ್ಲಿ ಜನಸಾಮಾನ್ಯರಿಗೆ ಅತ್ಯುತ್ತಮ ಸೇವೆ ನೀಡಬಹುದು. ಈ ಸುಧಾರಣೆಗಳನ್ನು ಜಾರಿಗೆ ತರುವುದರಿಂದ ವಸತಿ, ಮೂಲ ಸೌಕರ್ಯ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಹಬ್ ನಿರ್ಮಾಣ ವಲಯದಲ್ಲಿ ಭವಿಷ್ಯದಲ್ಲಿ ಗುರಿತರ ಸಾಧನೆ ಮಾಡಬಹುದು ಮತ್ತು ಸವಾಲುಗಳನ್ನು ಸ್ವೀಕರಿಸಬಹುದು.

ಈ ಆಮೂಲಾಗ್ರ ಬದಲಾವಣೆಯಲ್ಲಿ ಇಲಾಖೆಯ ನೀತಿ ಸುಧಾರಣೆಯು ಸೇರಿದ್ದು , ಹಸಿರು ಬಾಂಡ್ ಮತ್ತು ದತ್ತಾಂಶ ಆಧರಿತ ನಗರ ಯೋಜನೆಗಳ ಮೂಲಕ ಹಣಕಾಸು ನಿರ್ವಹಣೆಯ ನವೀನ ಪದ್ಧತಿಯ ಜಾರಿಯೂ ಸೇರಿದೆ.

ಈ ಸುಧಾರಣೆಗಳು ಕರ್ನಾಟಕವನ್ನು ನವೀನ ಮತ್ತು ಸಮರ್ಥನೀಯ ಆಡಳಿತ ಉತ್ತಮ ರಾಜ್ಯವನ್ನಾಗಿ ಕರ್ನಾಟಕವನ್ನು ರೂಪಿಸುವಲ್ಲಿ,ನಗರ ಪಟ್ಟಣ ಪ್ರದೇಶಗಳ ಆಡಳಿತ ಗುಣಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ನಿಟ್ಟಿನಲ್ಲಿ ಅನುಕೂಲವಾಗುತ್ತದೆ.

ಸಂಪನ್ಮೂಲ ಭರಿತ ಕರ್ನಾಟಕ ಕಟ್ಟುವಲ್ಲಿ ಈ ಯೋಜನೆಗಳು ನನಸಾಗುವ ದಿಕ್ಕಿನಿಂದ ನಿಮ್ಮ ಸಲಹೆ, ಸಹಕಾರವನ್ನು ಎದುರು ನೋಡುತ್ತೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+