ತಮಿಳುನಾಡಿಗೆ ಹರಿದ ನೀರು: ದಿಗ್ವಿಜಯ್ ಸಿಂಗ್ ಹೇಳೋದೇನು ಗೊತ್ತಾ?

Posted By:
Subscribe to Oneindia Kannada

ಬೆಂಗಳೂರು, ಸೆ 8: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ರಾಜ್ಯ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಗುರುವಾರ (ಸೆ 8) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ದಿಗ್ವಿಜಯ್, ಸುಪ್ರೀಂಕೋರ್ಟ್ ಆದೇಶವನ್ನು ಯಾರಿಂದಲೂ ಮೀರಲು ಸಾಧ್ಯವಿಲ್ಲ, ನಮ್ಮ ಸರಕಾರ ಕೂಡಾ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿದೆ ಅಷ್ಟೇ.. ಎಂದಿದ್ದಾರೆ. (ಸಿದ್ದರಾಮಯ್ಯ ಏನ್ ನಿಮ್ ಪ್ರಾಬ್ಲಂ)

Releasing water to Tamilnadu is correct decision, AICC General Secretary Digvijay Singh

ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿರುವುದರಿಂದ ಅದನ್ನು ಪಾಲಿಸದಿದ್ದಲ್ಲಿ ನ್ಯಾಯಾಂಗ ನಿಂದನೆ ಮಾಡಿದಂತಾಗಿದೆ. ವಿರೋಧ ಪಕ್ಷಗಳು ಇಂತಹ ವಿಚಾರದಲ್ಲಿ ತಪ್ಪು ಹುಡುಕುವುದನ್ನು ಬಿಡಬೇಕೆಂದು ದಿಗ್ವಿಜಯ್ ಸಿಂಗ್ ಮನವಿ ಮಾಡಿದ್ದಾರೆ.

ಫಾಲಿ ನಾರಿಮನ್ ಈ ದೇಶದ ಅತಿದೊಡ್ಡ ವಕೀಲ. ಅವರು ಸಮರ್ಥವಾಗಿ ರಾಜ್ಯದ ಕೇಸನ್ನು ಮಂಡಿಸಿದ್ದಾರೆ. ಅತ್ಯಂತ ಅನುಭವಿಯಾಗಿರುವ ಅವರನ್ನು ಕಾವೇರಿ ಕೇಸಿಗೆ ನೇಮಿಸಿ ಸರಕಾರ ಸರಿಯಾದ ಹೆಜ್ಜೆಯನ್ನಿಟ್ಟಿದೆ ಎಂದು ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯನವರ ಬೆನ್ನು ತಟ್ಟಿದ್ದಾರೆ.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಈಗ ಹೋರಾಟ ನಡೆಸುತ್ತಿರುವ ಬಿಜೆಪಿ 2012ರಲ್ಲಿ ಮಾಡಿದ್ದೇನು. ಆಗ ಕೂಡಾ ಬಿಜೆಪಿ, ಸರ್ವೋಚ್ಚ ನ್ಯಾಯಾಯಲದ ಆದೇಶದಂತೆ ನಡೆದುಕೊಂಡಿತು. ಹಾಗಿರುವಾಗ ಈಗ ಬಿಜೆಪಿ ಪ್ರತಿಭಟನೆ ನಡೆಸುವುದು ಹಾಸ್ಯಾಸ್ಪದ ಎಂದು ದಿಗ್ವಿಜಯ್ ಸಿಂಗ್ ಲೇವಡಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Releasing water to Tamilnadu is right decision, government followed Supreme Court's instruction, AICC General Secretary Digvijay Singh.
Please Wait while comments are loading...