‌ Darshan Thoogudeepa: ದರ್ಶನ್ ಏನೇ ಮಾಡಿದ್ರು ಡಿವೋರ್ಸ್ ಕೊಡದೇ ವಿಜಯಲಕ್ಷ್ಮಿ ಸುಮ್ಮನಿರುವುದು ಅದೊಂದೆ ಕಾರಣಕ್ಕೆ

ಬೆಂಗಳೂರು, ಸೆಪ್ಟೆಂಬರ್‌ 25: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ಜೈಲು ಸೇರಿ ಬರೋಬ್ಬರಿ 110 ದಿನಗಳು ಕಳೆದಿವೆ. ಪ್ರೇಯಸಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎನ್ನುವಾತನ ಕೊಲೆಗೆ ಕಾರಣವಾದ ಆರೋಪದ ಮೇಲೆ ನಟ ದರ್ಶನ್‌ನನ್ನು ಬಂಧಿಸಲಾಗಿದ್ದು, ನಟ ದರ್ಶನ್‌ A2 ಆರೋಪಿಯಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟಿ ಪವಿತ್ರಾ ಗೌಡ ಸೇರಿದಂತೆ ಪ್ರಕರಣ ಸಂಬಂಧ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಪತಿಗಾಗಿ ದೇವರ ಮೊರೆ ಹೋಗಿದ್ದು, ಕಾನೂನು ಹೋರಾಟವನ್ನ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Regardless of Darshan s Actions Vijayalakshmi Remained Silent And Refused To Grant Him A Divorce

ಸ್ಯಾಂಡಲ್‌ವುಡ್‌ ನಲ್ಲಿ ಚಿಕ್ಕಪುಟ್ಟ ಕಾರಣಗಳಿಗೆ ಹಾಗೂ ಮನಸ್ಥಾಪಗಳಿಗೆ ವಿಚ್ಛೇದನ ನೀಡುವುದು ಸರ್ವೆ ಸಮಾನ್ಯವಾಗಿವೆ. ಇತ್ತಿಚೆಗಷ್ಟೇ ದೊಡ್ಡಮನೆಯ ಯುವ ರಾಜ್‌ ಕುಮಾರ್‌ ಹಾಗೂ ಚಂದನ್‌ ಶೆಟ್ಟಿ , ನಿವೇದಿತಾ ವಿಚ್ಚೇದನ್ನ ಪಡೆದಿದ್ದಾರೆ. ಆದರೆ ಹಲವು ಬಾರೀ ದರ್ಶನ್‌ ನಿಂದ ಹಲ್ಲೆಗೊಳಗಾದ್ರೂ ದರ್ಶನ್‌ ಅವರಿಂದ ವಿಜಯಲಕ್ಷ್ಮೀ ಅವರು ಎಂದಿಗೂ ದೂರು ಉಳಿಯುವ ಮನಸ್ಸು ಮಾಡಿಲ್ಲ. ಈ ಹಿಂದೆ ಅಂದರೆ 2011ರಲ್ಲಿ ಹೆಂಡತಿ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸಿದ್ದರು. ಅಲ್ಲದೇ ಪತ್ನಿ ವಿಜಯಲಕ್ಷ್ಮೀ ನೀಡಿದ ದೂರಿನ ಮೇರೆಗೆ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದಾರೆ.

ಈ ಹಿಂದೆಯೂ ಕೆಲ ದಿನಗಳು ಜೈಲಿನಲ್ಲಿದ್ದ ದರ್ಶನ್‌ ಅವರನ್ನು ಚಿತ್ರರಂಗದ ಹಿರಿಯರು ಹಾಗೂ ಕಾನೂನು ಸಲಹೆಗಾರರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆಸಿ ಬಿಡುಗಡೆಗೊಳಿಸಲಾಗಿತ್ತು.ರಾಜಿ ಸಂಧಾನದ ಬಳಿಕ ವಿಜಯಲಕ್ಷ್ಮೀ ದೂರನ್ನು ವಾಪಸ್‌ ಪಡೆದಿದ್ದರು. ಇನ್ನೂ 2016 ರಲ್ಲಿಯೂ ವಿಜಯಲಕ್ಷ್ಮಿ ಮೇಲೆ ದರ್ಶನ್‌ ಹಲ್ಲೆ ನಡೆಸಿರುವ ವಿಚಾರ ಸುದ್ದಿಯಾಗಿತ್ತು. ಇದೀಗ ಪ್ರೇಯಸಿ ಪವಿತ್ರಾ ಗೌಡಗಾಗಿ ನಟ ದರ್ಶನ್‌ ಬರೋಬ್ಬರಿ ಮೂರು ತಿಂಗಳು ಜೈಲು ವಾಸವನ್ನ ಅನುಭವಿಸಿದ್ದರು ಸಹ ವಿಜಯಲಕ್ಷ್ಮಿ ಮಾತ್ರ ದರ್ಶನ್‌ ಅವರಿಂದ ದೂರ ಉಳಿಯುವ ಪ್ರಯತ್ನವನ್ನ ಮಾಡಿಲ್ಲ.

ದರ್ಶನ್‌ ಹಾಗೂ ವಿಜಯಲಕ್ಷ್ಮಿ ನಡುವೆ 2011 ರಿಂದ ಇಲ್ಲಿಯವರೆಗೂ ಹಲವು ಬಾರಿ ಮನಸ್ತಾಪಗಳಾಗಿವೆ. ಎಲ್ಲಾ ಮುನಿಸು, ಮನಸ್ಥಾಪಗಳನ್ನ ಮರೆತು ಎಲ್ಲೆಡೆ ದರ್ಶನ್‌ ಹಾಗೂ ಪುತ್ರನ ಜೊತೆಗೆ ವಿಜಯಲಕ್ಷ್ಮಿ ಅವರು ಕಾಣಿಸಿಕೊಳ್ಳುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಪವಿತ್ರಗೌಡ ಹಾಗೂ ವಿಜಯಲಕ್ಷ್ಮಿ ಪೋಸ್ಟ್‌ ವಾರ್‌ ನಡೆಯುತ್ತಿತ್ತು. ದರ್ಶನ್ ಬಗ್ಗೆ ಪವಿತ್ರ ಗೌಡ ಒಲವು ವಿಜಯಲಕ್ಷ್ಮೀ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದೀಗ ಮತ್ತೆ ಪವಿತ್ರ ಗೌಡ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದರ್ಶನ್‌ ಜೈಲು ಪಾಲಾಗುವ ಸ್ಥಿತಿ ಬಂದಿದ್ದು, ಈ ಸಮಯದಲ್ಲಿ ವಿಜಯಲಕ್ಷ್ಮಿ, ದರ್ಶನ್‌ ವಿರುದ್ಧ ಗಟ್ಟಿಯಾದ ನಿರ್ಧಾರ ತೆಗೆದುಕೊಂಡು ಪತಿಗಾಗಿ ಹಾಗೂ ಪುತ್ರನಿಗಾಗಿ ಜೊತೆಯಾಗಿ ವಿಜಯಲಕ್ಷ್ಮಿ ಅವರು ನಿಂತಿದ್ದಾರೆ. ಪುತ್ರನಿಗೆ ಉತ್ತಮ ಜೀವನವನ್ನ ಕಟ್ಟಿಕೊಡಬೇಕು ಎನ್ನುವ ನಿರ್ಧಾರವನ್ನ ವಿಜಯಲಕ್ಷ್ಮಿ ಅವರು ಮಾಡಿದ್ದು, ಪುತ್ರ ವಿನೀಶ್‌ ಗಾಗಿ ವಿಜಯಲಕ್ಷ್ಮಿ ಅವರು ಪತಿ ದರ್ಶನ್‌ ಜೊತೆಗೆ ಜೊತೆಯಾಗಿ ನಿಂತಿದ್ದಾರೆ. ಇತ್ತ ದರ್ಶನ್‌ ಅವರಿಗಾಗಿ ವಿಜಯಲಕ್ಷ್ಮಿ ಅವರು ಕಾನೂನು ಹೋರಾಟವನ್ನ ನಡೆಸುತ್ತಿದ್ದಾರೆ.

ನಟ ದರ್ಶನ್ ಬೆನ್ನತ್ತಿದ ಐಟಿ ಅಧಿಕಾರಿಗಳು!

ಜೈಲು ಸೇರಿರುವ ನಟ ದರ್ಶನ್‌ ಅವರಿಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿದ್ದು, ಇದೀಗ ರೇಣುಕಾಸ್ವಾಮಿ ಶವ ವಿಲೇವಾರಿಗೆ ಹಣ ಬಂದಿದ್ದು ಎಲ್ಲಿಂದ. 84 ಲಕ್ಷ ರೂಪಾಯಿ ಹಣ ಕೊಟ್ಟವರು ಯಾರು? ಕ್ಯಾಶ್ ಎಲ್ಲಿಂದ ಬಂತು ಎಂದು ಐಟಿ ಅಧಿಕಾರಿಗಳು ವಿಚಾರಣೆಗೆ ಇಳಿದಿದ್ದಾರೆ. ಈ ಬಗ್ಗೆ ಸೆಪ್ಟೆಂಬರ್‌ 26 ರಂದು ಬಳ್ಳಾರಿಗೆ ಜೈಲಿಗೆ ತೆರಳಿ ದರ್ಶನ್ ವಿಚಾರಣೆ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+