ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ ಅಲರ್ಟ್: ರಾಜ್ಯದಲ್ಲಿವೆ 15 ವರ್ಷ ಮೀರಿದ 21 ಸಾವಿರ ಬಸ್‌ಗಳು

|
Google Oneindia Kannada News

ಬೆಂಗಳೂರು, ನವೆಂಬರ್ 28: ಮಂಡ್ಯ ಕನಗನಮರಡಿಯಲ್ಲಿ ಡಕೋಟ ಬಸ್‌ನಿಂದಾಗಿ 30 ಮಂದಿ ಪ್ರಾಣಕಳೆದುಕೊಂಡಿದ್ದರು. ಬಳಿಕ ಸಾರಿಗೆ ಇಲಾಖೆಯು ಖಾಸಗಿ ಬಸ್‌ಗಳ ತಪಾಸಣೆ ಕಾರ್ಯವನ್ನು ಕೈಗೊಂಡಿತ್ತು.

ಸಾರಿಗೆ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ 15 ವರ್ಷ ಮೀರಿದ 21,096 ಬಸ್‌ಗಳಿವೆ, ಅದರಲ್ಲಿ 13,125 ಸ್ಟೇಜ್ ಕ್ಯಾರಿಯೇಜ್ ಬಸ್‌ಗಳು, 442 ಕಾಂಟ್ರ್ಯಾಕ್ಟ್ ಕ್ಯಾರಿಯೇಜ್, 1,430 ಪ್ರೈವೇಟ್ ಬಸ್, ಶಿಕ್ಷಣ ಸಂಸ್ಥೆಗಳ 4071 ಬಸ್‌ಗಳು ಹಾಗೂ 2028 ಇತರೆ ಬಸ್‌ಗಳಿವೆ.

ಮಂಡ್ಯ ಬಸ್ ದುರಂತ: ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಮಂಡ್ಯ ಬಸ್ ದುರಂತ: ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ

ರಾಜ್ಯದಲ್ಲಿರುವ 1.9 ಕೋಟಿ ವಾಹನಗಳ ಪೈಕಿ 45.05 ಲಕ್ಷ ವಾಹನಗಳು 15 ವರ್ಷ ಮೀರಿದ ವಾಹನಗಳಾಗಿವೆ. ಖಾಸಗಿ ಬಸ್‌ಗಳ ಮೇಲೆ ದಾಳಿ ಜಪ್ತಿ ಮಾಡುವಂತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಈಗಾಗಲೇ ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ.

ಸಾರಿಗೆ ಇಲಾಖೆಯಿಂದ ವಾಹನಗಳ ಪರಿಶೀಲನೆ

ಸಾರಿಗೆ ಇಲಾಖೆಯಿಂದ ವಾಹನಗಳ ಪರಿಶೀಲನೆ

ವಾಹನಗಳಲ್ಲಿರುವ ಮಾಲಿನ್ಯ ನಿಯಂತ್ರಣದಲ್ಲಿರುವ ಪತ್ರ, ಪರವಾನಗಿ, ನೋಂದಣಿ ದಾಖಲೆ, ವಿಮೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ.

ಮಂಡ್ಯ ಭೀಕರ ದುರಂತ: ದುರಂತದಲ್ಲಿ ಮೃತಪಟ್ಟ 25 ಜನರ ಹೆಸರುಗಳು ಮಂಡ್ಯ ಭೀಕರ ದುರಂತ: ದುರಂತದಲ್ಲಿ ಮೃತಪಟ್ಟ 25 ಜನರ ಹೆಸರುಗಳು

15 ವರ್ಷ ಮೀರಿದ ವಾಹನಗಳ ಬ್ಯಾನ್

15 ವರ್ಷ ಮೀರಿದ ವಾಹನಗಳ ಬ್ಯಾನ್

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 15 ವರ್ಷ ಮೀರಿದ ವಾಹನಗಳನ್ನು ಬ್ಯಾನ್ ಮಾಡುವಂತೆ ಸರ್ಕಾರದ ಮುಂದೆ ಪ್ರಸ್ತಾಪವಿಟ್ಟಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಇದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.

ಮಂಡ್ಯ ಬಸ್‌ ಅಪಘಾತ: ಬದುಕಿ ಬಂದವರು ಘಟನೆ ಬಗ್ಗೆ ಹೇಳಿದ್ದು ಹೀಗೆ ಮಂಡ್ಯ ಬಸ್‌ ಅಪಘಾತ: ಬದುಕಿ ಬಂದವರು ಘಟನೆ ಬಗ್ಗೆ ಹೇಳಿದ್ದು ಹೀಗೆ

ಮಾಲಿನ್ಯ ಹೆಚ್ಚಿಸುತ್ತಿರುವ ಬಿಎಂಟಿಸಿ ಬಸ್‌ಗಳು ಗುಜರಿಗೆ

ಮಾಲಿನ್ಯ ಹೆಚ್ಚಿಸುತ್ತಿರುವ ಬಿಎಂಟಿಸಿ ಬಸ್‌ಗಳು ಗುಜರಿಗೆ

ಮಾಲಿನ್ಯವನ್ನು ಹೆಚ್ಚಿಸುತ್ತಿರುವ 15 ವರ್ಷ ಮೀರಿದ ಬಿಎಂಟಿಸಿ ಬಸ್‌ಗಳನ್ನು ಗುಜರಿಗೆ ಹಾಕಲು ಬಿಎಂಟಿಸಿ ನಿರ್ಧರಿಸಿದೆ. ರಸ್ತೆಯಲ್ಲಿ ಸಂಚರಿಸಬೇಕಿದ್ದರೆ ಫಿಟ್‌ನೆಸ್ ಸರ್ಟಿಫಿಕೇಟ್ ಕಡ್ಡಾಯವಾಗಿರಲಿದೆ.

ಲಂಚ ನೀಡಿ ಎಫ್‌ಸಿ ಸರ್ಟಿಫಿಕೇಟ್ ಖರೀದಿಸಿದ್ದರು

ಲಂಚ ನೀಡಿ ಎಫ್‌ಸಿ ಸರ್ಟಿಫಿಕೇಟ್ ಖರೀದಿಸಿದ್ದರು

ಮಂಡ್ಯದಲ್ಲಿ ರಾಜಕುಮಾರ ಡಕೋಟ ಬಸ್ ನಿಯಂತ್ರಣ ತಪ್ಪಿ ನಾಲೆಗೆ ಹಾರಿ 30 ಮಂದಿ ಪ್ರಾಣವನ್ನು ಬಲಿತೆಗೆದುಕೊಂಡಿತ್ತು. ಬಳಿಕ ಆ ಬಸ್ 15 ವರ್ಷಕ್ಕಿಂತಲೂ ಹಳೆಯದು ಎನ್ನುವ ಮಾಹಿತಿ ತಿಳಿದುಬಂದಿತ್ತು ಬಳಿಕ ಇದೀಗ 2 ಸಾವಿರ ಲಂಚ ನೀಡಿ ಅದಲ್ಲೆ ಎಮಿಷನ್ ಫಿಟ್‌ನೆಸ್ ಸರ್ಟಿಫಿಕೇಟ್(ಎಫ್‌ಸಿ) ಖರೀದಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Waking up from its slumber after a bus plunged into a canal claiming 30 lives in Mandya district, the transport department has decided to intensify inspections on private vehicles which are over 15 years old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X