Good News: ಶೀಘ್ರವೇ 18,800 ಶಿಕ್ಷಕರ ನೇಮಕಾತಿ: ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
ಬೆಂಗಳೂರು, ಅಕ್ಟೋಬರ್ 08: ರಾಜ್ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಗುಡ್ ನ್ಯೂಸ್ ನೀಡಿದೆ. ಶೀಘ್ರವೇ 18800 ಸಾವಿರ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಬಹುದಿನಗಳಿಂದ ಶಿಕ್ಷಕರ ಹುದ್ದೆ ನೇಮಕಾತಿಗಾಗಿ ಕಾಯುತಿದ್ದ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೀಘ್ರವೇ 18,800 ಹೊಸ ಶಿಕ್ಷಕರ ನೇಮಕಾತಿ ಮಾಡಲಾಗುವುದು. ರಾಜ್ಯದ ಸರ್ಕಾರಿ ಶಾಲೆಗಳಿಗೆ 13 ಸಾವಿರ ಶಿಕ್ಷಕರು ಹಾಗೂ ಅನುದಾನಿತ ಶಾಲೆಗಳಿಗೆ ಸುಮಾರು 5,800 ಶಿಕ್ಷಕರು ಸೇರಿದಂತೆ ಒಟ್ಟು 18,800ಕ್ಕೂ ಅಧಿಕ ಶಿಕ್ಷಕರ ನೇಮಕ ಪ್ರಕ್ರಿಯೆ ಸಿದ್ದತೆ ನಡೆಯುತ್ತಿದ್ದು, ಶೀಘ್ರವೇ ನೋಟಿಫಿಕೇಶನ್ ಹೊರಡಿಸಲಾಗುವುದು.ಜಸ್ಟಿಸ್ ನಾಗಮೋಹನ್ ದಾಸ್ ವರದಿ ಹಿನ್ನೆಲೆಯಲ್ಲಿ ನೇಮಕ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು, ಹೀಗಾಗಿ ಶೀಘ್ರವೇ ರಾಜ್ಯದಲ್ಲಿ 18,800 ಶಿಕ್ಷಕರ ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದು ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ಇನ್ನೂ ಕರ್ನಾಟಕ ಕಿವುಡ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನನ್ನನ್ನು ಭೇಟಿ ಮಾಡಿ, ಕಿವುಡ ಸಮುದಾಯದವರ ಹಲವು ಬೇಡಿಕೆಗಳನ್ನು ಈಡೇರಿಸಲು ಮತ್ತು ಅವರ ಕಲ್ಯಾಣಕ್ಕಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಕೋರಿ ಮನವಿ ಸಲ್ಲಿಸಿದ್ದಾರೆ ಎಂದು ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ.
ಮನವಿಯಲ್ಲಿನ ಪ್ರಮುಖ ಬೇಡಿಕೆಗಳು:
* ಉಚಿತ ಬಸ್ ಪಾಸ್: ಕಿವುಡ ಸಮುದಾಯದವರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸುವುದು.
* ಮಾಸಿಕ ಪಿಂಚಣಿ: ಮಾಸಿಕ ಪಿಂಚಣಿ ಹೆಚ್ಚಿಸುವುದು.
* ಉದ್ಯೋಗಾವಕಾಶಗಳು: ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
* ಸಂಕೇತ ಭಾಷಾ ತರಬೇತಿ ಕೇಂದ್ರಗಳು: ರಾಜ್ಯದ ಎಲ್ಲಾ 5 ವಿಭಾಗಗಳಲ್ಲಿ (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಮಧ್ಯ ಕರ್ನಾಟಕ) ಸರ್ಕಾರಿ ಅನುದಾನಿತ ಸಂಕೇತ ಭಾಷಾ ಪ್ರಮಾಣಪತ್ರ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು.
* ಶಿಕ್ಷಕರ ನೇಮಕಾತಿ: ಭಾಷೆ ಮತ್ತು ಮೌಖಿಕ ಸಂವಹನದಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸುವುದು.
* ಸಂಕೇತ ಭಾಷಾ ವ್ಯಾಖ್ಯಾನಕಾರರ ವ್ಯವಸ್ಥೆ: ಶಾಲೆಗಳು ಸೇರಿದಂತೆ ಅಗತ್ಯ ಸೇವೆಗಳನ್ನು ಪಡೆಯುವಾಗ ಕಿವುಡ ವ್ಯಕ್ತಿಗಳೊಂದಿಗೆ ಪ್ರಮಾಣೀಕೃತ ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು ಒದಗಿಸುವುದು.
*VRIS ಕೇಂದ್ರಗಳಿಗೆ ಹಣಕಾಸು ನೆರವು: ಶಾಲೆಗಳು, ಕಂಪನಿಗಳು, ಪೊಲೀಸ್ ಠಾಣೆಗಳು, ಆಸ್ಪತ್ರೆಗಳು ಮತ್ತು ನ್ಯಾಯಾಲಯಗಳೊಂದಿಗೆ ಸಂವಹನ ನಡೆಸಲು ಸಹಾಯ ಮಾಡಲು, ವ್ಯಾಖ್ಯಾನಕಾರರೊಂದಿಗೆ ವಿಆರ್‌ಐಎಸ್ (VRIS) ಕೇಂದ್ರಗಳಿಗೆ ಹಣಕಾಸು ನೆರವು ನೀಡುವುದು.
* ವ್ಯಾಖ್ಯಾನಕಾರರ ಶುಲ್ಕಕ್ಕೆ ಸಹಾಯಧನ: ಪ್ರಮಾಣೀಕೃತ ವ್ಯಾಖ್ಯಾನಕಾರರ ವೆಚ್ಚವನ್ನು ಭರಿಸಲು ಅನುದಾನ ಅಥವಾ ಹಣಕಾಸಿನ ನೆರವನ್ನು ಅನುಮೋದಿಸುವುದು.












Click it and Unblock the Notifications