ಬಿಜೆಪಿ ಭಿನ್ನಮತ ತಮಣಿ, ಯಡಿಯೂರಪ್ಪ ನಾಯಕತ್ವಕ್ಕೆ ಜೈ ಎಂದ ಭಿನ್ನರು!

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ನವೆಂಬರ್ 28: ರಾಜ್ಯ ಬಿಜೆಪಿಯೊಳಗಿನ ಭಿನ್ನಮತೀಯರಿಗೆ ಭಾನುವಾರ ಎಲ್ಲ ಸಂಶಯಗಳು ನಿವಾರಣೆ ಆದಂತಾಯಿತು. ಕೆ.ಎಸ್.ಈಶ್ವರಪ್ಪನವರೂ ಸೇರಿದಂತೆ ಪಕ್ಷದ ನಾಯಕರೆಲ್ಲರೂ ಯಡಿಯೂರಪ್ಪನವರನ್ನೇ ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿ ಎಂದರು. ಸೋಲು-ಗೆಲುವು ಪಕ್ಕಕ್ಕಿಟ್ಟು ಆಲೋಚಿಸಿದರೆ 2018ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎದುರಿಸಲು ಬಿಜೆಪಿ ಒಗ್ಗಟ್ಟಾದಂತಿದೆ.

ಹಿಂದುಳಿದ ವರ್ಗದ ಮತದಾರರ ಬೆಂಬಲ ಬಿಜೆಪಿಗೆ ಎಷ್ಟಿದೆ ಎಂದು ತೋರಿಸುವುದಷ್ಟೇ ಅಲ್ಲದೇ ಅದಕ್ಕಿಂತ ಹೆಚ್ಚಿನ ಸಂದೇಶವನ್ನು ರವಾನಿಸಿದಂತಾಗಿದೆ. ತಮ್ಮ ದಾಳ ಉರುಳಿಸುವ ಮೂಲಕ ವಿರೋಧಿಗಳನ್ನೆಲ್ಲ ಏಕ ಕಾಲಕ್ಕೆ ಯಡಿಯೂರಪ್ಪನವರು ಹೆಡೆಮುರಿಗೆ ಕಟ್ಟಿದಂತಾಗಿದೆ. ಅದರಲ್ಲೂ ದಲಿತ ಮತ ಒಗ್ಗೂಡಿಸ್ತೀನಿ ಎಂದು ರಾಯಣ್ಣ ಬ್ರಿಗೇಡ್ ಕಟ್ಟಿದ್ದ ಈಶ್ವರಪ್ಪನವರಿಗೆ ಚೆಕ್ ಇಟ್ಟಂತಾಯಿತು.[ಕಾಂಗ್ರೆಸ್ ಸರ್ಕಾರ ಎಬ್ಬಿಸಲು ನಗಾರಿ ಬಾರಿಸಿದ ಅಮಿತ್ ಶಾ]

Rebellion quelled, BS Yeddyurappa to lead BJP into 2018 polls

ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಧುಮುಧುಮು ಎನ್ನುತ್ತಿದ್ದವರು ಈಗ ಸುಮ್ಮನಾಗುವುದು ಅನಿವಾರ್ಯವಾಗಿದೆ. ಮೊದಲಿಗೆ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಸಮಾವೇಶ, ಆ ನಂತರ ನಡೆದ ಹಿಂದುಳಿದ ವರ್ಗಗಳ ಸಮಾವೇಶ ಒಂದಂಶವನ್ನು ಖಚಿತಪಡಿಸಿದೆ. ರಾಜ್ಯ ಬಿಜೆಪಿಗೆ ಒಬ್ಬರೇ ನಾಯಕ ಮತ್ತು ಅದು ಯಡಿಯೂರಪ್ಪ ಎಂಬುದನ್ನು ಖಾತ್ರಿ ಮಾಡಿದಂತಾಗಿದೆ.[ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ ಶ್ರೀನಿವಾಸ ಪ್ರಸಾದ್]

ಕಾಂಗ್ರೆಸ್ ನಲ್ಲಿ ಹುಟ್ಟಿಕೊಂಡಿರುವ ಭಿನ್ನಮತದಿಂದ ಸೆಟಗೊಂಡಿರುವ ನಾಯಕರಾದ ಶ್ರೀನಿವಾಸ್ ಪ್ರಸಾದ್ ಹಾಗೂ ಜಯಪ್ರಕಾಶ್ ಹೆಗ್ಡೆ ಅಂಥವರನ್ನು ಸೆಳೆಯುವ ಯತ್ನ ನಡೆದಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎದುರಿಸಲು ಬೇಕಾದ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಒಗ್ಗೂಡುತ್ತಿರುವ ಬಿಜೆಪಿ ನಾಯಕರು, ಪಕ್ಷದೊಳಗೆ ಹೆಚ್ಚುತ್ತಿರುವ ಭಿನ್ನಮತ ಕಾಂಗ್ರೆಸ್ ಪಾಲಿಗೆ ಚಿಂತೆಗೆ ಕಾರಣವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All doubts of rebellion within the state BJP were rested on Sunday with K S Eshwarappa addressing B S Yeddyurappa as the future Chief Minister of Karnataka. Sunday's rally made it clear that the BJP in Karnataka is back to being the force for the Congress to reckon with in the 2018 assembly polls.
Please Wait while comments are loading...