• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಸಕರ ರಾಜೀನಾಮೆ; ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆಗಳೇನು?

|

ಬೆಂಗಳೂರು, ಜುಲೈ 25: ಕರ್ನಾಟಕದಲ್ಲಿ ಆಡಳಿತಾರೂಢ ಕೈ ತೆನೆ ಸರ್ಕಾರ ಸಚಿವರು, ಶಾಸಕರು ಸರಣಿ ರಾಜೀನಾಮೆಯಿಂದಾಗಿ ಉಂಟಾಗಿರುವ ಅಸ್ಥಿರತೆಯುಂಟಾಗಿ ಮೈತ್ರಿ ಸರ್ಕಾರವೇ ಪತನವಾಗಿದೆ. ಆದರೆ, ರಾಜೀನಾಮೆ ನೀಡಿದ ಶಾಸಕರ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ಸರ್ಕಾರ ಉರುಳಿದರೂ ಈ ಎಲ್ಲಾ ಶಾಸಕರ ಮುಂದಿನ ಭವಿಷ್ಯ ಸದ್ಯ ಸ್ಪೀಕರ್ ಕೈಲಿದೆ.

"ಕರ್ನಾಟಕದ ರೆಬೆಲ್ ಶಾಸಕರು ಸಲ್ಲಿಸಿದ್ದ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ರಮೇಶ್ ಕಮಾರ್ ಅವರು ವಿಳಂಬ ಮಾಡುತ್ತಿದ್ದಾರೆ" ಎಂದು ಆರೋಪಿಸಿ ಸುಪ್ರೀಂಕೋರ್ಟಿನಲ್ಲಿ ಅತೃಪ್ತ ಶಾಸಕರು ದೂರು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಿಂದ ಮಧ್ಯಂತರ ತೀರ್ಪು ಬಂದ ಬಳಿಕ ಕರ್ನಾಟಕ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ನಡೆಸಲು ಮುಂದಾಗಿದ್ದರು. ವಿಶ್ವಾಸಮತ ಯಾಚನೆ ಪ್ರಕ್ರಿಯೆ ತ್ವರಿತವಾಗಿ ಮುಗಿಸುವಂತೆ ಅರ್ಜಿ ಕೂಡಾ ಸಲ್ಲಿಸಲಾಗಿತ್ತು. ಈಗ ವಿಶ್ವಾಸಮತ ಪ್ರಕ್ರಿಯೆ ಮುಗಿದು ಸರ್ಕಾರವೇ ಬಿದ್ದು ಹೋಗಿದೆ. ಸುಪ್ರೀಂನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಇಬ್ಬರು ಪಕ್ಷೇತರರು ಅಧಿಕೃತವಾಗಿ ಹಿಂಪಡೆದುಕೊಂಡಿದ್ದಾರೆ. ಆದರೆ, ವಿಪ್ ಗೆ ಸಂಬಂಧಿಸಿದಂತೆ ಸ್ಪೀಕರ್ ಅವರ ನಿರ್ಧಾರವೇ ಅಂತಿಮ ಎಂದು ಸಿಜೆಐ ರಂಜನ್ ಗೊಗಾಯ್ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿರುವುದು ಮಹತ್ವ ಪಡೆಯಲಿದೆ.

ವಿಪ್ ಬಗ್ಗೆ ಸಿದ್ದರಾಮಯ್ಯ ಗುಡುಗು, ಎಲ್ಲರೂ ಗಪ್ ಚುಪ್! ವಿಪ್ ಬಗ್ಗೆ ಸಿದ್ದರಾಮಯ್ಯ ಗುಡುಗು, ಎಲ್ಲರೂ ಗಪ್ ಚುಪ್!

ಅತೃಪ್ತ ಶಾಸಕರು ಈಗ ಮುಂಬೈನಿಂದ ಬೆಂಗಳೂರಿಗೆ ಹಿಂತಿರುಗಿ, ಸದನಕ್ಕೆ ಹಾಜರಾಗಲು ಬಯಸಿದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಶಾಸಕರಿಗೆ ಮತ್ತೊಮ್ಮೆ ವಿಪ್ ಜಾರಿಗೊಳಿಸಬಹುದು. ವಿಪ್ ಜಾರಿಗೊಳಿಸುವ ಮೂಲಕ ಕಡ್ಡಾಯವಾಗಿ ಸ್ಪೀಕರ್ ಮುಂದೆ ಖುದ್ದು ಹಾಜರಾಗುವಂತೆ ಮಾಡಬಹುದು. ರಾಜೀನಾಮೆ ನೀಡಿದ್ದರೂ ತಾಂತ್ರಿಕವಾಗಿ ಇನ್ನೂ ಪಕ್ಷದಲ್ಲಿರುತ್ತಾರೆ. ಹೀಗಾಗಿ, ಸ್ಪೀಕರ್ ಆದೇಶಕ್ಕೆ ಒಳಪಟ್ಟಿರುತ್ತಾರೆ. ಇದಲ್ಲದೆ, ಸದನದ ಕಲಾಪಕ್ಕೆ ಹಾಜರಾಗುವಂತೆ, ಬಿಜೆಪಿ ಸರ್ಕಾರ ರಚನೆಯಾಗಿ, ವಿಶ್ವಾಸ ಮತ ಯಾಚನೆ ಮಾಡಿದರೆ, ಸರ್ಕಾರದ ವಿರುದ್ಧ ಮತ ಹಾಕುವಂತೆ ವಿಪ್ ಜಾರಿ ಮಾಡಬಹುದು, ಶಾಸಕರ ಬಲಾಬಲದ ಎಣಿಕೆ, ಮತದಾನ ಪ್ರಕ್ರಿಯೆ ಎಲ್ಲವೂ ಸ್ಪೀಕರ್ ಕೈಲಿರುತ್ತದೆ.

 ಎಲ್ಲಾ ಶಾಸಕರ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬಹುದು

ಎಲ್ಲಾ ಶಾಸಕರ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬಹುದು

ರಮೇಶ್ ಮುಂದಿರುವ ಮೊದಲ ಆಯ್ಕೆ
* ಎಲ್ಲಾ ಶಾಸಕರ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬಹುದು. -ಈಗ ರಾಜೀನಾಮೆ ನೀಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ 13 ಶಾಸಕರ ರಾಜೀನಾಮೆ ಪತ್ರವನ್ನು ಯಾವುದೇ ಪ್ರಶ್ನೆ ಎತ್ತದೆ, ಅಂಗೀಕರಿಸಿ ಸಹಿ ಹಾಕಬಹುದು. ಇದರಿಂದ ಬಿಜೆಪಿಗೆ ತಕ್ಷಣಕ್ಕೆ ಲಾಭವಾಗಲಿದೆ. ಪಕ್ಷ ತೊರೆದು ಆ ಶಾಸಕರು, ಬಿಜೆಪಿ ಸೇರಬಹುದು, ಬಿಜೆಪಿ ಸರ್ಕಾರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸರ್ಕಾರದ ಪರ ಮತ ಹಾಕಬಹುದು.

 ಸ್ಪೀಕರ್ ಮುಂದಿರುವ ಎರಡನೇ ಆಯ್ಕೆ

ಸ್ಪೀಕರ್ ಮುಂದಿರುವ ಎರಡನೇ ಆಯ್ಕೆ

ವಿಪ್ ಉಲ್ಲಂಘನೆ ಮಾಡಿದರೆ, ಜನಪ್ರತಿನಿಧಿ ಕಾಯ್ದೆ 164 ಅನ್ವಯ ಕ್ರಮ ಜರುಗಿಸಬಹುದು. - ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸದನದ ಕಲಾಪಕ್ಕೆ ಹಾಜರಾಗದ ಶಾಸಕರು ವಿಪ್ ಉಲ್ಲಂಘನೆ ಮಾಡಿದ್ದಕ್ಕೆ ಕ್ರಮ ಆಯಾ ಪಕ್ಷಗಳು ಜರುಗಿಸಬಹುದು. ಅಥವಾ ಸದನಕ್ಕೆ ಹಾಜರಾಗಿ, ಅಡ್ಡಮತದಾನ ಮಾಡಿದರು ಎಂಬ ಕಾರಣಕ್ಕೆ ಕ್ರಮ ಜರುಗಿಸಬಹುದು. - ಜನಪ್ರತಿನಿಧಿ ಕಾಯ್ದೆ 164 1ಬಿ 10ನೇ ಶೆಡ್ಯೂಲ್ ಅನ್ವಯ ಶಾಸಕರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ದೂರು ದಾಖಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಪ್ರತ್ಯೇಕವಾಗಿ ಅತೃಪ್ತರನ್ನು ಅನರ್ಹಗೊಳಿಸಿ ಕ್ರಮ ಜರುಗಿಸಲು ಸ್ಪೀಕರ್ ಗೆ ದೂರು ಸಲ್ಲಿಸಲಾಗಿದೆ. ಅಮಾನತು, ಅನರ್ಹತೆ, ಸದನದಿಂದ ಹೊರ ಹಾಕುವುದು ಎಲ್ಲವೂ ಸ್ಪೀಕರ್ ಕೈಲಿರುತ್ತದೆ.

 ಮುಂದಿನ ಆಯ್ಕೆ: ತಮಿಳುನಾಡು ಮಾದರಿಯಲ್ಲಿ ಉಚ್ಚಾಟನೆ?

ಮುಂದಿನ ಆಯ್ಕೆ: ತಮಿಳುನಾಡು ಮಾದರಿಯಲ್ಲಿ ಉಚ್ಚಾಟನೆ?

ತಮಿಳುನಾಡು ಮಾದರಿಯಲ್ಲಿ ಎಲ್ಲಾ ಶಾಸಕರನ್ನು ತಕ್ಷಣವೇ ಅಮಾನತುಗೊಳಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು. - ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ದೂರು ದಾಖಲಾಗಿ, ವಿಪ್ ಉಲ್ಲಂಘನೆ ಎಲ್ಲವನ್ನು ಪರಿಗಣಿಸಿ ಶಾಸಕರನ್ನು ಉಚ್ಚಾಟಿಸಬಹುದು. ಶಾಸಕರ ವಿರುದ್ಧ ಕ್ರಮ ಜರುಗಿಸಲು ತಮಿಳುನಾಡು ಮಾದರಿಯಲ್ಲಿ ದೂರು ಬಂದರೆ, ಒಟ್ಟಿಗೆ ಪ್ರಯಾಣಿಸಿದ ಚಿತ್ರ, ವಿಡಿಯೋ ಸಾಕ್ಷಿ ಪರಿಗಣಿಸಬಹುದು. ಈ ಬಗ್ಗೆ ಈಗಾಗಲೇ ಸದನದಲ್ಲಿ ಕಾಂಗ್ರೆಸ್ ಶಾಸಕರು ಸಾಕ್ಷಿ ಒದಗಿಸಿದ್ದಾರೆ. - ಉಚ್ಚಾಟನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದರೂ ಈ ಶಾಸಕರಿಗೆ ಸಚಿವರಾಗುವ ಯೋಗ ತಕ್ಷಣಕ್ಕೆ ಸಿಗುವುದಿಲ್ಲ. ಬೇರೆ ಪಕ್ಷದ ಚಿಹ್ನೆ, ಬೆಂಬಲದಡಿಯಲ್ಲಿ ಉಪ ಚುನಾವಣೆ ಎದುರಿಸಿ ಮತ್ತೆ ಆಯ್ಕೆಯಾದರೂ, ಕೇಸಿನಲ್ಲಿ ಖುಲಾಸೆಗೊಂಡರೆ ಸಚಿವರಾಗಬಹುದು.

 ಶಾಸಕಾಂಗ ಪಕ್ಷದ ನಾಯಕರಿಗೆ ವಿಪ್ ಜಾರಿ ಅಧಿಕಾರ

ಶಾಸಕಾಂಗ ಪಕ್ಷದ ನಾಯಕರಿಗೆ ವಿಪ್ ಜಾರಿ ಅಧಿಕಾರ

* "ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ವಿಪ್ ಜಾರಿ ಮಾಡುವ ಅಧಿಕಾರ ಶಾಸಕಾಂಗ ಪಕ್ಷದ ನಾಯಕರಿಗೆ ಇದೆ. ಆದರೆ, ವಿಪ್ ಜಾರಿಗೊಳಿಸುವುದು, ವಿಶ್ವಾಸಮತ ಯಾಚನೆ, ಸದನದ ಕಲಾಪದಲ್ಲಿ ಹಾಜರಾಗುವಂತೆ ಸೂಚಿಸುವುದು ಆಯಾ ಪಕ್ಷಕ್ಕೆ ಬಿಟ್ಟ ವಿಚಾರ" ಎಂದು ಸ್ಪೀಕರ್ ರಮೇಶ್ ಕುಮಾರ್ ರೂಲಿಂಗ್ ನೀಡಿದ್ದಾರೆ.
* "ಮುಂಬೈನಲ್ಲಿರುವ ಶಾಸಕರಿಗೆ ನಾನು ಯಾವುದೇ ಸಂದೇಶ ಕಳಿಸುವುದಿಲ್ಲ. ರಾಜೀನಾಮೆ ಸಂಬಂಧವಾಗಿ ವಿಚಾರಣೆಗಾಗಿ ಹಾಜರಾಗುವಂತೆ ಸೂಚಿಸಿದ್ದೇನೆ" ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
* ಶಾಸಕಾಂಗ ಪಕ್ಷದ ನಾಯಕರಿಗೆ ವಿಪ್ ಜಾರಿ ಅಧಿಕಾರ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಸ್ಪಷ್ಟನೆ ನೀಡಿದ್ದು, ಅತೃಪ್ತ ಶಾಸಕರಿಗೆ ವಿಪ್ ಜಾರಿಗೊಳಿಸುವ ಅಧಿಕಾರ ನಮಗಿದೆ ಎಂದಿದ್ದಾರೆ. ಹೀಗಾಗಿ, ಶಾಸಕರಿಗೆ ವಿಪ್ ನೀಡುವುದು, ಶಾಸಕರ ರಾಜೀನಾಮೆ ಕುರಿತಂತೆ ಸ್ಪೀಕರ್ ಗೆ ದೂರು ನೀಡುವುದು, ಕೆಲ ಶಾಸಕರನ್ನು ಅನರ್ಹಗೊಳಿಸಿ ಎಂದು ದೂರು ನೀಡಿರುವುದು ಕೂಡಾ ಆಗಿದೆ.

English summary
Karnataka Rebels resignation, What are the options before Speaker KR Ramesh Kumar? will he accepts all the resignation? will he disqualify them? What are the provisions provided by Constitution? here is the answer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X