ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಇಷ್ಟದ ಪುಸ್ತಕ ಓದಲೊಂದು ವೆಬ್ ತಾಣ

|
Google Oneindia Kannada News

ಬೆಂಗಳೂರು, ಅ. 9: ಆನ್ ಲೈನ್ ನಲ್ಲಿ ಕನ್ನಡ ಓದಲು ಬಯಸುವ ಇ-ಬುಕ್ ಪ್ರಿಯರಿಗೆ ಸಂತಸದ ಸುದ್ದಿ. ನೀವು ಯಾವ ಭಾಗದಲ್ಲಿ ಕುಳಿತು ಬೇಕಾದರೂ ನಿಮಗಿಷ್ಟವಾದ ಲೇಖಕನ ಕಾದಂಬರಿ ಓದಬಹುದು.

ಹೌದು .. ಈ ನಿಟ್ಟಿನಲ್ಲಿ ವಿನೂತನ ಯತ್ನ ನಡೆಸಿರುವ ಪುಸ್ತಕ ಡಿಜಿಟಲ್ ಮೀಡಿಯಾ ಕಂಪನಿ ಸ್ಥಳೀಯ ಭಾಷೆಗಳ ಮೊಟ್ಟ ಮೊದಲ ಇ-ಬುಕ್ ಮಾರಾಟ ಮತ್ತು ಪುಸ್ತಕ ಬಾಡಿಗೆ ನೀಡುವ ಅಂತರ್ಜಾಲ ತಾಣವೊಂದನ್ನು ಆರಂಭಿಸಿದೆ[ಕುಮಟೆಯಲ್ಲಿ 'ಮಳೆ ಮಾರುವ ಹುಡುಗ' ಅನಾವರಣ]

books

ಜಾಲತಾಣದಲ್ಲಿ ಕನ್ನಡ, ತಮಿಳು ಮತ್ತು ತೆಲಗು ಭಾಷೆಗಳ ಹೆಸರಾಂತ ಲೇಖಕರ 150 ಕ್ಕೂ ಹೆಚ್ಚಿನ ಕೃತಿಗಳು ಲಭ್ಯವಿದೆ. ಓದುಗರು ಮತ್ತು ಪ್ರತಿಕ್ರಿಯೆ ಆಧರಿಸಿ ಎಲ್ಲ ಭಾಷೆಗಳಿಗೂ ವಿಸ್ತರಿಸುವ ಯೋಚನೆಯಿದೆ ಎಂದು ಕಂಪನಿ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಕಂಪನಿ ಸಂಸ್ಥಾಪಕ ಪಿ.ನಿವೇತಾ, ಜನರು ತಮ್ಮ ಅಂಗೈನಲ್ಲೇ ಇಷ್ಟವಾದ ಪುಸ್ತಕ ಓದಬಹುದು. ಮಾತೃಭಾಷಾ ಪ್ರಿಯರಿಗೆ ಇದು ನೆರವಾಗಲಿದೆ. ಕಡಿಮೆ ಬೆಲೆಯಲ್ಲಿ ಎಲ್ಲ ಬಗೆಯ ಪುಸ್ತಕಗಳ ಆಯ್ಕೆ ದೊರೆಯುತ್ತದೆ ಎಂದು ತಿಳಿಸಿದರು.[ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ]

ಯುವಕರು ಪ್ರಾದೇಶಿಕ ಭಾಷೆಗಳಿಂದ ದೂರ ಸರಿಯುತ್ತಿದ್ದಾರೆ ಎಂದು ದೂರುತ್ತಿದ್ದೇವೆ. ಅದಕ್ಕೆ ಕಾರಣ ಅವರಿಗೆ ಈ ಬಗೆಯ ಪುಸ್ತಕಗಳು ಲಭ್ಯವಾಗದೆ ಇರುವುದು. ಅದಕ್ಕೆಲ್ಲ ನಮ್ಮ ಅಂತರ್ಜಾಲ ತಾಣ ಪರಿಹಾರ ನೀಡುತ್ತದೆ ಎಂದು ತಿಳಿಸಿದ್ದಾರೆ.

ಜಾಲತಾಣದಲ್ಲಿ ಯಂಡಮೂರಿ ವಿರೇಂದ್ರನಾಥ್, ಕೆ.ಟಿ.ಗಟ್ಟಿ. ಇಂದಿರಾ ಸುಂದರ್‌ರಾಜನ್‌, ಪಟ್ಟುಕೊಟ್ಟೈ ಪ್ರಭಾಕರ್, ನೀಲಾ ಪದ್ಮನಾಭನ್‌, ದೇವಿಬಾಲ, ರಾಜೇಶ್‌ ಕುಮಾರ್ ಮತ್ತಿತರ ಲೇಖಕರ ಪುಸ್ತಗಳು ಲಭ್ಯವಿದೆ.

ತಾಣಕ್ಕೆ ಭೇಟಿ ಕೊಡಲು ಇಲ್ಲಿ ಕ್ಲಿಕ್‌ ಮಾಡಿ: www.pustaka.co.in

English summary
Lovers of e-books wanting to read vernacular language works can now do so with ease with a website being launched on Wednesday by Pustaka Digital Media. According to the company, www.pustaka.co.in is India’s first e-book selling and lending portal for vernacular language books.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X