Ration Card: ಅರ್ಹತೆ ಇಲ್ಲದವರು BPL ಕಾರ್ಡ್ ವಾಪಾಸ್ ಕೊಡಿ: ಸರ್ಕಾರ ಶಾಕ್
ಬೆಂಗಳೂರು, ಫೆಬ್ರವರಿ 23: ರಾಜ್ಯ ಸರ್ಕಾರದ ಪಡಿತರ ಚೀಟಿ (Ration Card) ಆಹಾರ ಭದ್ರತೆ ಮಾತ್ರವಲ್ಲದೇ ಆರೋಗ್ಯ ಸವಲತ್ತುಗಳನ್ನು ನೀಡುತ್ತದೆ. ಸರ್ಕಾರಿ ಸೌಲಭ್ಯ ಧಕ್ಕಲು ಪ್ರಮುಖ ಪಾತ್ರ ನಿರ್ವಹಿಸುವ ರೇಷನ್ ಕಾರ್ಡ್ ಪಡೆಯಲು ಜನರು ವಾಮಮಾರ್ಗ ಅನುಸರಿಸುತ್ತಿದ್ದಾರೆ. ಸರ್ಕಾರ ಕಾರ್ಡ್ ತಿದ್ದುಪಡಿ, ಹೆಸರು ರದ್ದು, ಸೇರ್ಪಡೆ ವೇಳೆ ಅವಕಾಶ ಕೊಟ್ಟಾಗ ಇಂತಹ ಪ್ರಸಂಗಗಳ ನಡೆಯುತ್ತಿವೆ. ಈ ಸಂಬಂಧ ಸರ್ಕಾರ ಅನರ್ಹ ಪಡಿತರ ಚೀಟಿ ಹೊಂದಿದವರಿಗೆ ಶಾಕ್ ನೀಡಿದೆ.
ಹೌದು, ಯಾರೆಲ್ಲ ಅನರ್ಹರು, ಮಾನದಂಡಕ್ಕೆ ಒಳಪಡದೇ ನಕಲಿ ಮಾಹಿತಿ ನೀಡಿ ವಾಮ ಮಾರ್ಗದಲ್ಲಿ ರೇಷನ್ ಕಾರ್ಡ್ ಅದರಲ್ಲಿ BPL ಕಾರ್ಡ್ ಪಡೆದಿದ್ದಿರೋ ಅವರೆಲ್ಲರು ತಮ್ಮ ಕಾರ್ಡ್‌ಗಳನ್ನು ಮರಳಿ ಸರ್ಕಾರಕ್ಕೆ ನೀಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅಂಥವರು ಕೂಡಲೇ ಕಾರ್ಡ್ ಮರಳಿಸಬೇಕು ಎಂದು ಮನವಿ ಮಾಡಲಾಗಿದೆ. ಸರ್ಕಾರಕ್ಕೆ ನೀಡಿದ್ದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನರ್ಹರ ರೇಷನ್ ಕಾರ್ಡ್ ಸಂಬಂಧಿಸಿದಂತೆ ಪರಿಶೀಲನೆ ನಡೆಸಬೇಕಾಗುತ್ತದೆ. ಆಗ ಅನರ್ಹ ಕಾರ್ಡ್‌ಗಳು ಸಿಕ್ಕಿ ಬಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸದ್ಯ ರಾಜ್ಯ ಸರ್ಕಾರ ಬಿಪಿಎಲ್ ಪಡೆಯಲು ಇರುವ ಮಾನದಂಡಗಳನ್ನು ಸಮಗ್ರವಾಗಿ ಆಲೋಚಿಸಲು ತೀರ್ಮಾನಿಸಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೇ ಅನರ್ಹರು ಕಾರ್ಡ್ ನೀಡದಿದ್ದಲ್ಲಿ, ಪರಿಶೀಲನೆ ವೇಳೆ ಬೆಳಕಿಗೆ ಬಂದರೆ ಅಂತವರ ವಿರುದ್ಧ ದಂಡ ವಿಧಿಸಲು ಸರ್ಕಾರ ಸಿದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ಅರ್ಹರಿಗೆ ರೇಷನ್ ಕಾರ್ಡ್, ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ, ಅರ್ಹ ಫಲಾನುಭವಿಗಳಿಗೆ ಮಾತ್ರವೇ ಪಡಿತರ ಚೀಟಿ ನೀಡಲು ಸರ್ಕಾರ ಕ್ರಮ ವಹಿಸಿದೆ. ಅದರ ಭಾಗವಾಗಿಯೇ ಅನರ್ಹ ಕಾರ್ಡ್ ಪರಿಶೀಲನೆ ನಡೆಸಲು, ಅದಕ್ಕು ಮೊದಲು ನೀವಾಗೆ (ಅನರ್ಹ) ಕಾರ್ಡ್ ನೀಡುವಂತೆ ಮನವಿ ಮಾಡಲಾಗಿದೆ. ಇದೆಲ್ಲ ಜಾರಿಗೆ ತರಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದರು.
BPL ಕಾರ್ಡುದಾರರಿಗೆ ಸಿಹಿ ಸುದ್ದಿ
ಇತ್ತೀಚೆಗೆ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ ನೀಡಿತ್ತು. ಯಾರೆಲ್ಲ ಬಿಪಿಎಲ್ ಫಲಾನುಭವಿಗಳು ಇದ್ದಾರೋ ಅವರಿಗೆಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್ ಮಾಡಿಸಲು ಅಕವಾಶ ನೀಡಿ ಸಂಪುಟದಲ್ಲಿ ಪ್ರಮುಖ ನೀರ್ಣಯ ಕೈಗೊಂಡಿತ್ತು. ಅರ್ಹರಿಗೆ ಪಡಿತರ ಕಾರ್ಡ್‌ನಿಂದ ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್ ಮಾಡಿಸಲು ಅನುಕೂಲವಾಗಲಿದೆ. ಇದರಿಂದ ಬಡವರಿಗೆ ಆರ್ಥಿಕ ನೆರವು ಸಿಕ್ಕಂತಾಗುತ್ತದೆ.












Click it and Unblock the Notifications