Ration Card: ಇ-ಕೆವೈಸಿ ಕುರಿತು ರಾಜ್ಯದಲ್ಲಿನ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ
Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ರೇಷನ್ ಕಾರ್ಡುದಾರರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಕೇಂದ್ರ ಸರ್ಕಾರ ಮಾರ್ಚ್ 31ರ ವರೆಗೆ ಅವಕಾಶ ಕಲ್ಪಿಸಿದೆ. ಇದರೊಳಗೆ ರೇಷನ್ ಕಾರ್ಡ್ಗೆ ಆಧಾರ್ ದಾಖಲೆ ಸಲ್ಲಿಕೆ ಮಾಡದಿದ್ದರೆ, ಸೌಲಭ್ಯಗಳು ರದ್ದಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಹಾಗಾದ್ರೆ ಈ ನಿರ್ಧಾರ ಕೈಗೊಂಡಿದ್ದು ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಅನರ್ಹರ ಬಳಿಯಿದ್ದ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿ ಅಂತಹವರಿಗೆ ಎಪಿಎಲ್ ಕಾರ್ಡ್‌ಗೆ ಸೇರಿಸುವ ಕೆಲಸವನ್ನು ಸರ್ಕಾರ ಮಾಡಿತ್ತು. ಇದರ ಬೆನ್ನಲ್ಲೇ ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿತ್ತು ಎನ್ನುವ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ಕೂಡ ನಡೆಸಿದ್ದರು.

ಬಳಿಕ ಎಚ್ಚೆತ್ತ ಸರ್ಕಾರ ಅರ್ಹರಿಗೆ ಬಿಪಿಎಲ್ ಕಾರ್ಡ್‌ಗಳನ್ನು ಹಿಂದಿರುಗಿಸಿ ಅವರಿಗೆ ಸಿಗಬೇಕಾದ ಪಡಿತರವನ್ನು ನೀಡಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿತ್ತು. ಇದೀಗ ಮಾರ್ಚ್ 31ರ ವರೆಗೂ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಇದರೊಳಗೆ ಪಡಿತರ ಚೀಟಿಗೆ ಇ-ಕೆವೈಸಿ ಸಲ್ಲಿಕೆ ಮಾಡದಿದ್ದರೆ, ಸಿಗುವ ಸೌಲಭ್ಯಗಳು ರದ್ದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ರೇಷನ್ ಕಾರ್ಡ್ ಇ-ಕೆವೈಸಿ ಸಲ್ಲಿಸುವುದೇಗೆ?
* ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಪ್ರತ್ಯೇಕವಾದ ಅಧಿಕೃತ ಪಿಡಿಎಸ್ ಪೋರ್ಟಲ್ ಇರುತ್ತದೆ. ನಿಮ್ಮ ರಾಜ್ಯದ ಪಿಡಿಎಸ್ ಪೋರ್ಟಲ್ ತೆರೆಯಿರಿ.
* ಮುಖ್ಯಪುಟದಲ್ಲಿ ರೇಷನ್ ಕಾರ್ಡ್ ಮೆನು ಅಥವಾ ಸರ್ವಿಸಸ್ ಮೆನು ಅಡಿಯಲ್ಲಿ ಇ ಕೆವೈಸಿ ಇರುತ್ತದೆ. ಅದನ್ನು ಕ್ಲಿಕ್ ಮಾಡಿ.
* ರೇಷನ್ ಕಾರ್ಡ್ ನಂಬರ್ ನಮೂದಿಸಿ. ಬಳಿಕ ರೇಷನ್ ಕಾರ್ಡ್ ಯಾರ ಹೆಸರಲ್ಲಿ ಇದೆಯೋ ಅವರ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಬಹುದು. ಅಥವಾ ರೇಷನ್ ಕಾರ್ಡ್ನಲ್ಲಿರುವ ಇತರ ಸದಸ್ಯರ ಆಧಾರ್ ನಂಬರ್ ಅನ್ನು ಬೇಕಾದರೂ ನಮೂದಿಸಬಹುದು.
* ಈಗ ಮೊಬೈಲ್ ನಂಬರ್ ವೆರಿಫಿಕೇಶನ್ ಮಾಡಬೇಕಾಗುತ್ತದೆ. ಆಧಾರ್ಗೆ ಲಿಂಕ್ ಆದ ಮೊಬೈಲ್ ನಂಬರ್ಗೆ ಬರುವ ಒಟಿಪಿಯನ್ನು ನಮೂದಿಸಿ ಲಾಗಿನ್ ಆಗಬಹುದು. ಇವೆಲ್ಲಾ ಆದರೆ, ಇ-ಕೆವೈಸಿ ಪೂರ್ಣ ಆದಂತಾಗುತ್ತದೆ.
ಆಫ್ಲೈನ್ನಲ್ಲೇ ಇ-ಕೆವೈಸಿ ಸಲ್ಲಿಕೆಗೆ ಅವಕಾಶ
* ಆನ್ಲೈನ್ನಲ್ಲಿ ಇ-ಕೆವೈಸಿ ಸಲ್ಲಿಸಲು ಕಷ್ಟ ಆಗುತ್ತಿದ್ದರೆ ಆಫ್ಲೈನ್ನಲ್ಲೇ ಮಾಡಬಹುದು.
* ನಿಮ್ಮ ಸ್ಥಳೀಯ ರೇಷನ್ ಕಾರ್ಡ್ ಕಚೇರಿ ಅಥವಾ ಕಾಮನ್ ಸರ್ವಿಸ್ ಸೆಂಟರ್ನಲ್ಲಿ ಇ-ಕೆವೈಸಿ ಸಲ್ಲಿಸಬಹುದು.
* ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ದಾಖಲೆಗಳನ್ನು ಕೊಂಡೊಯ್ಯಬೇಕು. ಫಿಂಗರ್ ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್ ಮೂಲಕ ಬಯೋಮೆಟ್ರಿಕ್ಸ್ ವೆರಿಫೈ ಮಾಡಬಹುದು.
* ಬಳಿಕ ಇ-ಕೆವೈಸಿ ಪೂರ್ಣಗೊಂಡು ನಿಮಗೆ ದೃಢೀಕರಣ ಪತ್ರ ಸಿಗುತ್ತದೆ.
* ರೇಷನ್ ಕಾರ್ಡ್ಗೆ ಇ-ಕೆವೈಸಿ ಸಲ್ಲಿಸಲು ಮಾರ್ಚ್ 31ರ ವರೆಗೆ ಗಡುವು ಕೊಡಲಾಗಿದೆ. ಕಾಲಾವಕಾಶ ಮತ್ತಷ್ಟು ವಿಸ್ತರಣೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತದೆ.












Click it and Unblock the Notifications