ಕಂಬಳೇಶ್ವರ ಸ್ವಾಮೀಜಿ ಮೇಲೆ ಅತ್ಯಾಚಾರ ಪ್ರಕರಣ

ಕಲಬುರಗಿ, ನ. 16 : ಚಿತ್ತಾಪುರದ ಸೋಮಶೇಖರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮೇಲೆ ಅತ್ಯಾಚಾರ ಪ್ರಕರಣ ಭಾನುವಾರ ದಾಖಲಾಗಿದೆ. ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಸ್ವಾಮೀಜಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿತ್ತಾಪುರದ ನಿವಾಸಿ ರವೀಂದ್ರ ಎಂಬುವರು ದೂರು ದಾಖಲಿಸಿದ್ದು, ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲಕಿಯನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಘಟನೆ ಪರಿಣಾಮ ಕಲಬುರಗಿ ಮತ್ತು ಚಿತ್ತಾಪುರದಲ್ಲಿ ಸ್ವಾಮೀಜಿ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆಗಳು ನಡೆದಿವೆ.[ಸಾಮಾಜಿಕ ತಾಣದಲ್ಲಿ ಅತ್ಯಾಚಾರ ತಡೆ ಚಳವಳಿ]

rape

ಘಟನೆ ನಡೆದು ಸುಮಾರು 15 ದಿನಗಳೇ ಕಳೆದಿದ್ದು ಶನಿವಾರ ರಾತ್ರಿ ದೂರು ದಾಖಲಾಗಿದೆ. ಬಾಲಕಿ ಕುಟುಂಬಸ್ಥರು ಸ್ವಾಮೀಜಿಯ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಒಳಗಾಗಿದ್ದಾರೆ ಎಂದು ದೂರುದಾರ ರವೀಂದ್ರ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮೀಜಿ ಸಹೋದರ ಶಿವಾನಂದಯ್ಯ, ಸ್ವಾಮೀಜಿ ಯಾವ ತಪ್ಪು ಮಾಡಿಲ್ಲ. ಅವರು ನಿರಪರಾಧಿ, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯಲಿ ಎಂದು ಹೇಳಿದ್ದಾರೆ.

ಸ್ವಾಮೀಜಿ ಪೀಠಾರೋಹಣ ಮಾಡಿದಾಗಿನಿಂದಲೂ ಅವರ ಮೇಲೆ ಒಂದಿಲ್ಲೊಂದು ಆರೋಪ ಮಾಡಲಾಗುತ್ತಿದೆ. ಸ್ವಾಮೀಜಿಯ ಸಾಮಾಜಿಕ ಕೆಲಸ ಸಹಿಸದ ಕೆಲವರು ಇಂಥ ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ವಾಮೀಜಿ ಅತ್ಯಾಚಾರ ಮಾಡಿಲ್ಲ
ಪ್ರಕರಣ ಕ್ಷಣದಿಂದ ಕ್ಷಣಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಸ್ವಾಮೀಜಿ ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿಲ್ಲ ಎಂದು ಸ್ವತಃ ಬಾಲಕಿ ತಾಯಿ ಹೇಳಿಕೆ ನೀಡಿದ್ದಾರೆ. ಬಾಲಕಿ ಅಜ್ಜಿ ಮತ್ತು ತಾಯಿ ಕಲಬುರಗಿಯಲ್ಲಿ ಸುದ್ದಿಗಾರರಿಗೆ ಈ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+