ರಂಜಾನ್ ಹಬ್ಬ: ಕರ್ನಾಟಕದಲ್ಲಿ ಮೇ.2ರಂದು ಸಾರ್ವತ್ರಿಕ ರಜೆ ಘೋಷಿಸಿದ ಸರ್ಕಾರ
ಬೆಂಗಳೂರು, ಏಪ್ರಿಲ್ 30: ಮುಸ್ಲಿಂ ಬಾಂಧವರ ಪವಿತ್ರ ಖುತುಬ್-ಎ-ರಂಜಾನ್ ಹಬ್ಬವನ್ನು ಮೇ 2ರಂದು ಆಚರಿಸುವುದಕ್ಕೆ ಮೂನ್ ಕಮಿಟಿಯು ತೀರ್ಮಾನಿಸಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಮೇ.2ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ರಾಜ್ಯ ಸರ್ಕಾರವು ನೆಗೋಷಿಯೆಬಲ್ ಇನ್ ಸ್ಟ್ರುಮೆಂಟ್ ಆಕ್ಟ್ 1881ರ ಪ್ರಕಾರ, ಮೇ 2, 2022ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಆ ಮೂಲಕ ಪವಿತ್ರ ರಂಜಾನ್ ಹಬ್ಬದ ಆಚರಣೆಗೆ ರಜೆಯ ಸಿಹಿಸುದ್ದಿಯನ್ನು ನೀಡಿದೆ.
ಭಾರತದಲ್ಲಿ ಈ ವರ್ಷ ರಂಜಾನ್ ಅನ್ನು ಏಪ್ರಿಲ್ 2 ಅಥವಾ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ 1-Ramadan-1443 ಸಂಜೆಯಿಂದ ಆರಂಭವಾಗಿದೆ. ಮೊದಲ ಉಪವಾಸವನ್ನು ಏಪ್ರಿಲ್ 3, 2022 ರಂದು ಆಚರಿಸಲಾಗುತ್ತಿದೆ.

ಅರ್ಧಚಂದ್ರನನ್ನು ನೋಡಿದ ಬಳಿಕ ರಂಜಾನ್ ತಿಂಗಳ ಉಪವಾಸ ಆರಂಭಿಸಲಾಗಿತ್ತು. ಈ ಉಪವಾಸವು ಮೇ 2ರ ಸಂಜೆ ವೇಳೆಗೆ ಕೊನೆಯಾಗಲಿದೆ. ಅದು ಕೂಡಾ ಚಂದ್ರನ ದರ್ಶನದ ಮೇಲೆ ಆಧಾರಿತವಾಗಿರುತ್ತದೆ.
ರಂಜಾನ್ ತಿಂಗಳಿನಲ್ಲಿ ಉಪವಾಸ:













Click it and Unblock the Notifications