• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಣೆಯಲ್ಲಿ ರಾಹುಲ್ ಗಾಂಧಿ ಜತೆ ಕಾಣಿಸಿಕೊಂಡ ರಮ್ಯಾ!

|

ಬೆಂಗಳೂರು, ಜು. 31: ಸಂಸತ್ ಸದಸ್ಯತ್ವ ಕಳೆದುಕೊಂಡ ಮೇಲೆ ವಿದೇಶದಲ್ಲಿ ಮರೆಯಾಗಿದ್ದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ರಾಜಕಾರಣದಲ್ಲಿ ಗಟ್ಟಿ ಸ್ಥಾನವೊಂದನ್ನು ಪಡೆದುಕೊಳ್ಳಲೇಬೇಕು ಎಂದು ಹಠ ಹೊತ್ತಂತೆ ಕಾಣುತ್ತಿದೆ.

ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡು ಆತ್ಮಹತ್ಯೆಗೆ ಶರಣಾದ ಮಂಡ್ಯ ಜಿಲ್ಲೆಯ ರೈತರ ಮನೆಗೆ ಭೇಟಿ ನೀಡಿದ್ದ ರಮ್ಯಾ, ಇದೀಗ ರಾಷ್ಟ್ರ ರಾಜಕಾರಣಕ್ಕೆ ಹೊರಟರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದೆಲ್ಲಕ್ಕೆ ಪುಷ್ಟಿ ನೀಡಿದ್ದು ಶುಕ್ರವಾರದ ಬೆಳವಣಿಗೆಗಳು.[ಮಂಡ್ಯದ ಮಾಜಿ ಸಂಸದೆ ರಮ್ಯಾ , ಶಾಸಕಿಯಾಗೋಲ್ಲ ಬಿಡಿ!]

ಪುಣೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಫಿಲ್ಮ್ ಮತ್ತು ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ(ಎಫ್ ಟಿಐಐ) ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದು ಸಮಸ್ಯೆ ಆಲಿಸುತ್ತಿದ್ದಾರೆ. ಅಲ್ಲಿಗೆ ಹಾಜರಿ ಹಾಕಿರುವ ರಾಹುಲ್ ಗಾಂಧಿ ಪಕ್ಕದಲ್ಲೇ ನಿಂತು ಸುದ್ದಿ ವಾಹಿನಿಗಳ ಕಣ್ಣಿಗೆ ಬಿದ್ದಿದ್ದಾರೆ.

ರಮ್ಯಾ ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎಂದು ವದಂತಿ ಹಬ್ಬಿತ್ತು. ಅಷ್ಟಕ್ಕೂ ರಮ್ಯಾ ಇಷ್ಟೆಲ್ಲಾ ಸರ್ಕಸ್ ಮಾಡುತ್ತಿರುವುದು ಯಾಕೆ? ಮುಂದಕ್ಕೆ ಓದಿ...

 ಎಂಎಎಲ್ ಸಿ ಸ್ಥಾನಕ್ಕೆ ಪಟ್ಟು

ಎಂಎಎಲ್ ಸಿ ಸ್ಥಾನಕ್ಕೆ ಪಟ್ಟು

ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ರಮ್ಯಾ ಎಂಎಲ್ ಸಿ ಸ್ಥಾನದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಅಧಿಕಾರದೊಂದಿಗೆ ಜನರ ಬಳಿಗೆ ತೆರಳಲು ಮಾರ್ಗವೊಂದನ್ನು ಹುಡುಕುತ್ತಿರುವುದು ಸುಳ್ಳಲ್ಲ.

ಮಂಡ್ಯಕ್ಕೆ ದಿಢೀರ್ ಭೇಟಿ

ಮಂಡ್ಯಕ್ಕೆ ದಿಢೀರ್ ಭೇಟಿ

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ರೈತರಿಗೆ ಸಾಂತ್ವನ ಹೇಳುವ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದಾಗ ಸ್ವದೇಶಕ್ಕೆ ಆಗಮಿಸಿದ್ದರೂ ಎಲ್ಲೂ ಕಾಣಿಸಿಕೊಳ್ಳದ ರಮ್ಯಾ ದಿಢೀರ್ ಎಂದು ಮಂಡ್ಯಕ್ಕೆ ತೆರಳಿದ್ದರು. ಮಂಡ್ಯ ಕಾಂಗ್ರೆಸ್ ಮುಖಂಡರಿಗೂ ಮಾಹಿತಿ ನೀಡದೆ ತೆರಳಿ ಪರಿಹಾರ ವಿತರಿಸಿ ಬಂದಿದ್ದರು.

ಯೂತ್ ಕಾಂಗ್ರೆಸ್ ವೇದಿಕೆ

ಯೂತ್ ಕಾಂಗ್ರೆಸ್ ವೇದಿಕೆ

ರಮ್ಯಾ ಅವರು ಈ ಹಿಂದೆಯೂ ಯೂತ್ ಕಾಂಗ್ರೆಸ್ ನಲ್ಲಿ ಮಹತ್ವದ ಹುದ್ದೆ ನಿಭಾಯಿಸಿದ್ದರು. ರಾಜ್ಯದಲ್ಲಿ ಯೂತ್ ಕಾಂಗ್ರೆಸ್ ಬಲವರ್ಧನೆ ಮಾಡಬೇಕು ಎಂಬ ವಿಚಾರವನ್ನು ಮುಂದಿಟ್ಟುಕೊಂಡೆ ರಮ್ಯಾ ರಾಹುಲ್ ಬಳಿ ಮಾತುಕತೆ ನಡೆಸಿದ್ದಾರೆ.

ಸಮರ್ಥನೆ ನೀಡಿದರೆ?

ಸಮರ್ಥನೆ ನೀಡಿದರೆ?

ರಮ್ಯಾ ವಿರುದ್ಧ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ಸಲ್ಲಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ರಾಹುಲ್ ಗಾಂಧಿಗೂ ಪತ್ರ ಬರೆದಿದ್ದರು. ಇದನ್ನು ಅರಿತ ರಮ್ಯಾ ನೇರವಾಗಿ ರಾಹುಲ್ ಗಾಂಧಿ ಬಳಿ ತೆರಳಿ ಕಾರಣಗಳನ್ನು ನೀಡಿದ್ದಾರೆ.

ಸಿನಿಮಾಕ್ಕೆ ಗುಡ್ ಬೈ?

ಸಿನಿಮಾಕ್ಕೆ ಗುಡ್ ಬೈ?

ಲಂಡನ್ನಿನಿಂದ ಮರಳಿ ಬಂದ ನಂತರ ರಮ್ಯಾ ಸಾಕಷ್ಟು ದಪ್ಪಗಾದಂತೆ ಕಾಣಿಸುತ್ತಿರುವುದನ್ನು ಒಪ್ಪಿಕೊಳ್ಳಲೇಬೇಕು. ಹೊಸ ನೀರಿನ ಆಗಮನದ ಹಿನ್ನೆಲೆಯಲ್ಲಿ ಸಿನಿಮಾ ವಲಯದಲ್ಲಿ ರಮ್ಯಾ ಚಾರ್ಮ್ ತಕ್ಕಮಟ್ಟಿಗೆ ಮಾಯವಾಗಿದೆ.

ರಾಜಕಾರಣವೇ ಆಯ್ಕೆ?

ರಾಜಕಾರಣವೇ ಆಯ್ಕೆ?

ರಮ್ಯಾರ ರೈತರ ಮನೆ ಭೇಟಿ, ಸಿದ್ದರಾಮಯ್ಯ ಭೇಟಿ, ರಾಹುಲ್ ಗಾಂಧಿ ಜತೆ ವಿದ್ಯಾರ್ಥಿಗಳ ಹೋರಾಟದಲ್ಲಿ ಪಾಲ್ಗೊಳ್ಳುವಿಕೆ ಅವರು ರಾಜಕಾರಣದಲ್ಲೇ ಮುಂದುವರಿಯಲಿದ್ದಾರೆ. ಅದಕ್ಕಾಗಿ ಒಂದು ಗಟ್ಟಿ ಸ್ಥಾನ ಹುಡುಕುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಸಂವಾದದಲ್ಲಿ ಘಟಾನುಘಟಿಗಳು ಭಾಗಿ

ಸಂವಾದದಲ್ಲಿ ಘಟಾನುಘಟಿಗಳು ಭಾಗಿ

ವಿದ್ಯಾರ್ಥಿಗಳೊಂದಿಗಿನ ಹೋರಾಟದಲ್ಲಿ ರಾಹುಲ್ ಗಾಂಧಿ ಜತೆ ರಮ್ಯಾ ಕಾಣಿಸಿಕೊಂಡರು. ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ನಟ ರಾಜ್ ಬಬ್ಬರ್ ಮತ್ತು ದಕ್ಷಿಣ ಭಾರತದ ಹಿರಿಯ ನಟಿ ಖುಷ್ಬೂ ಸಹ ಇದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada actress and former MP of Mandya Ramya aka Divya Spandana's appearance with Rahul Gandhi in Pune at FTII has given way to many speculations. Is something cooking? Ramya is trying to get back to active police in Karnataka after returning from London.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more