ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಜಾರಕಿಹೊಳಿ: ಕಲ್ಯಾಣ ಕರ್ನಾಟಕ ಸಾಹುಕಾರನಿಗೆ ಖೆಡ್ಡಾ ತೋಡಿದ್ದು ಹೇಗೆ?

|
Google Oneindia Kannada News

ಬೆಂಗಳೂರು, ಮಾರ್ಚ್ 02 : ಸಮ್ಮಿಶ್ರ ಸರ್ಕಾರ ಬೀಳಿಸುವ ಚದುರಂಗ ಆಟದಲ್ಲಿ ನಾಯಕ ಪಾತ್ರ ವಹಿಸಿದ್ದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ "ಯುವತಿ ಜತೆಗಿನ ಪಲ್ಲಂಗ ಆಟ" ಸಿಡಿ ಹೊರ ಬಿದ್ದಿದೆ.

ತನಗಾದದ ಅನ್ಯಾಯದ ಬಗ್ಗೆ ಒಬ್ಬ ಮಹಿಳೆ ದೂರು ನೀಡದೇ ಸಾಮಾಜಿಕ ಕಾರ್ಯಕರ್ತರೊಬ್ಬರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸುವ ಮೂಲಕ ಸಿಡಿ ಹೊರ ಜಗತ್ತಿಗೆ ಪರಿಚಯಿಸಿದ್ದಾರೆ. ದೂರು ಸಲ್ಲಿಕೆ ಕ್ಷಣದಲ್ಲಿಯೇ ಜಾರಕಿಹೊಳಿ ಹಸಿ ಬಿಸಿ ದೃಶ್ಯಗಳು ಮಾಧ್ಯಮಗಳ ಕೈ ಸೇರಿವೆ. ಈ ಬೆಳವಣಿಗೆ ಹಾಗೂ ಸಿಡಿ ಮೂಲ ಹುಡುಕಿದರೆ ಎದುರಾಳಿಗಳು ರೂಪಿಸಿದ ಆಪರೇಷನ್ ಜಾರಕಿಹೊಳಿ ಖೆಡ್ಡಾಗೆ " ಕಲ್ಯಾಣ ಕರ್ನಾಟಕದ ಸಾಹುಕಾರ ಜಾರಿ ಬಿದ್ದರೆ" ಎಂಬ ಸಂಶಯ ಮೂಡುತ್ತದೆ.

ರಾಸಲೀಲೆ ಪ್ರಕರಣ: ಸಚಿವ ರಮೇಶ್ ಜಾರಕಿಹೊಳಿ ತಲೆದಂಡ ಕೇಳಲಿದೆಯಾ ಬಿಜೆಪಿ?ರಾಸಲೀಲೆ ಪ್ರಕರಣ: ಸಚಿವ ರಮೇಶ್ ಜಾರಕಿಹೊಳಿ ತಲೆದಂಡ ಕೇಳಲಿದೆಯಾ ಬಿಜೆಪಿ?

 ಇದು ಹನಿ ಟ್ರ್ಯಾಪ್‌ ಅಷ್ಟೆ

ಇದು ಹನಿ ಟ್ರ್ಯಾಪ್‌ ಅಷ್ಟೆ

ರಮೇಶ್ ಜಾರಕಿಹೊಳಿ ಜತೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡಿರುವ ಹುಡುಗಿ ಆರ್‌. ಟಿ. ನಗರದ ಪಿಜಿಯಲ್ಲಿದ್ದವಳು ಎಂಬ ಮಾಹಿತಿ ಹರಿದಾಡುತ್ತಿದೆ. ಇನ್ನು ಮಾಧ್ಯಮಗಳಿಗೆ ಸಿಕ್ಕಿರುವ ವಿಡಿಯೋಗಳು ಮೊದಲೇ ನೀಟಾಗಿ ಎಡಿಟ್ ಮಾಡಿ ಹಂಚಲಾಗಿದೆ. ದೆಹಲಿ ಕರ್ನಾಟಕ ಭವನ, ಆರ್‌.ಟಿ. ನಗರ ಪಿಜಿ ಎಂಬ ವಿವರಗಳನ್ನು ಅಶ್ಲೀಲ ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ವಿಡಿಯೋ ಬಿಡುಗಡೆ ಮುನ್ನ ಎಡಿಟ್ ಮಾಡಿರುವುದು ನೋಡಿದ್ರೆ, ವಿಡಿಯೋದಲ್ಲಿ ಬೇರೆ ಯಾವುದೇ ಸಾಕ್ಷ್ಯಾಧಾರಗಳು ಸಿಗದಂತೆ ಮಾಡಿರುವುದು ಗೋಚರಿಸುತ್ತದೆ. ಜಲ ಸಂಪನ್ಮೂಲ ಖಾತೆಯ ಬಗ್ಗೆ ಡಾಕುಮೆಂಟರಿ ಮಾಡುವ ಸೋಗಿನಲ್ಲಿ ದಾಂಗುಡಿಯಿಟ್ಟ ಆ ಅಪರಿಚಿತ ಯುವತಿಯ ಮಾತು ಕೂಡ ಖೆಡ್ಡಾಗೆ ಬೀಳಿಸುವುದಾಗಿತ್ತು ಎಂದು ಗೋಚರಿಸುತ್ತದೆ. ಅದರ ಆಚೆಗೆ ಅದು ಅತ್ಯಾಚಾರವೋ? ಲೈಂಗಿಕ ಕಿರುಕುಳ ಎಂಬ ದೂರಿನ ಅಂಶಗಳು ಕಂಡು ಬರುತ್ತಿಲ್ಲ.

ಈ ಎಲ್ಲಾ ಬೆಳವಣಿಗೆ ನೋಡಿದರೆ, ಸಿಡಿ ಹೊರ ಬಿದ್ದು ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಮುಗಿಸುವ ಉದ್ದೇಶ ಬಿಟ್ಟರೆ, ಅನ್ಯ ಉದ್ದೇಶ ಇಲ್ಲ. ಹೀಗಾಗಿ ರೂಪಿಸಿದ ಆಪರೇಷನ್ ಜಾರಕಿಹೋಳಿ "ಸ್ಟಿಂಗ್ ಆಪರೇಷನ್" ಗೆ ಸಾಹುಕಾರ ಸಿಕ್ಕಿಬಿದ್ದು ಬೆತ್ತಲೆಯಾಗಿದ್ದಾರೆ ಎಂಬ ಅನುಮಾನ ಹುಟ್ಟು ಹಾಕಿದೆ.

ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ; ಗೋಕಾಕ್‌ನಲ್ಲಿ ಪವರ್ ಕಟ್ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ; ಗೋಕಾಕ್‌ನಲ್ಲಿ ಪವರ್ ಕಟ್

 ದೂರು ನೀಡಿದವರು ಯಾರು?

ದೂರು ನೀಡಿದವರು ಯಾರು?

ರಮೇಶ್ ಜಾರಕಿ ಹೊಳಿ ರಾಜಕೀಯ ಭವಿಷ್ಯ ಮುಕ್ತಾಯಕ್ಕೆ ನಾಂದಿ ಹಾಡಿರುವ ಸಿಡಿಯ ಮೂಲ ಕೆಣಕಿದರೆ ಹಲವಾರು ವಿಷಯಗಳು ಹೊರ ಬರುತ್ತಿವೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕುರಿತು ಈವರೆಗೂ ಆ ಯುವತಿ ದೂರು ನೀಡಿಲ್ಲ. ಆಕೆಯ ವಿಡಿಯೋ ಕಾಲ್ ಸಂಭಾಷಣೆಯನ್ನು ಪೊಲೀಸ್ ತನಿಖೆ ದೃಷ್ಟಿಯಲ್ಲಿ ಇಟ್ಟುಕೊಂಡು ನೋಡಿದರೆ ಅದು ಸಹಮತದ ಸಹಜೀವನ. ಆದರೆ, ತನಗೆ ಜೀವ ಭಯ ಇದೆ ಎಂದು ಹೇಳಿಕೊಂಡಿದ್ದಾಳೆ ಎನ್ನಲಾದ ಯುವತಿ ಆಕೆ ವಾಸರುವ ವ್ಯಾಪ್ತಿಯ ಠಾಣೆಗೂ ದೂರು ನೀಡಿಲ್ಲ. ತನಗೆ ಒಬ್ಬ ಸಚಿವರಿಂದ ಅನ್ಯಾಯ ಆಗಿದೆ ಎಂದು ಒಂದು ಅನಾಮಿಕ ಪತ್ರವನ್ನು ತನಿಖಾ ಸಂಸ್ಥೆಗಳಿಗೆ ಬರೆದಿಲ್ಲ. ಒಬ್ಬ ಸಾಮಾಜಿಕ ಕಾರ್ಯಕರ್ತನ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸುತ್ತಾರೆ ಎಂದರೆ, ಅದು ದೂರು ಸಲ್ಲಿಕೆ ಹಾದಿ ಮೂಲಕ ಸಾಹುಕಾರ ಸಿಡಿ ಬಿಡುಗಡೆಗೆ ರೂಪಿಸಿಕೊಂಡಿದ್ದ ರಾಜ ಮಾರ್ಗ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

 ಆಪರೇಷನ್ ಕಮಲದ ರೂವಾರಿ

ಆಪರೇಷನ್ ಕಮಲದ ರೂವಾರಿ

ಉತ್ತರ ಕರ್ನಾಟಕದ ಸಾಹುಕಾರ, ರಮೇಶ್ ಜಾರಕಿಹೊಳಿ ತನಗೆ ಸೂಕ್ತ ಸ್ಥಾನ ಮಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮಾತೃ ಪಕ್ಷದ ವಿರುದ್ಧ ತೊಡೆ ತಟ್ಟಿ ನಿಂತಿದ್ದರು. ಅಧಿಕಾರಕ್ಕಾಗಿ ಕಾಯುತ್ತಿದ್ದ ಬಿಜೆಪಿ ಜತೆ ಕೈ ಜೋಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ದಂಡನ್ನೇ ಎಳೆದುಕೊಂಡು ಹೋಗಲು ಮುಂದಾದರು. ಆಪರೇಷನ್ ಕಮಲ ಸೂತ್ರಧಾರಿ ಎಂಬಂತೆ ಬಿಂಬಿಸಿಕೊಂಡರು. ಅಧಿಕಾರಕ್ಕಾಗಿ ಹಪಿ ಹಪಿಸುತ್ತಿದ್ದ ಬಿಜೆಪಿ ಕೂಡ ರಮೇಶ್ ಜಾರಕಿಹೊಳಿಗೆ ರತ್ನ ಗಂಬಳಿ ಹಾಕಿ ಆಹ್ವಾನಿಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಭಾವಿ ನಾಯಕರು ಎಷ್ಟೇ ಸಂಧಾನ ಮಾಡಿದರೂ ಸಾಹುಕಾರ ಬಗ್ಗಲಿಲ್ಲ. ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸೇರುವ ಮೂಲಕ ಜಾರಕಿಹೊಳಿ ಬಹುದೊಡ್ಡ ಶತೃವರ್ಗ ಸೃಷ್ಟಿಸಿಕೊಂಡಿದ್ದರು. ಇದು ಜಾರಕಿಹೋಳಿ ಬಲಿದಾನಕ್ಕೆ ಮೂಲ ಕಾರಣವಾಗಿದೆಯಾ ಎಂಬುದನ್ನು ಮುಂದಿನ ದಿನಗಳ ಬೆಳವಣಿಗೆಗಳು ಹೇಳಲಿವೆ.

ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಹೈಕಮಾಂಡ್ ಸೂಚನೆರಮೇಶ್ ಜಾರಕಿಹೊಳಿ ರಾಜೀನಾಮೆಗೆ ಹೈಕಮಾಂಡ್ ಸೂಚನೆ

 ಸಿಎಂ ಜತೆಗೂ ಮುನಿಸು

ಸಿಎಂ ಜತೆಗೂ ಮುನಿಸು

ದಾಂಪತ್ಯದ ಮೊದಲ ದಿನಗಳು ಸುಂದರವಾಗಿವಂತೆ, ಜಾರಕಿಹೋಳಿ ಬಿಜೆಪಿ ಹೋದ ಆರಂಭದ ದಿನಗಳು ತುಂಬಾ ಚೆನ್ನಾಗಿಯೇ ಇದ್ದವು. ಪ್ರಭಾವಿ ನಾಯಕರಿಗೆ ಸೆಡ್ಡು ಹೊಡೆದು ದಿಗ್ವಿಜಯ ಸಾಧಿಸಿದ ಸಾಹುಕಾರ ಕೇಂದ್ರ ವರಿಷ್ಠರಿಗೆ ಹತ್ತಿರವಾದರು. ಮಾತೃ ಪಕ್ಷದ ಎದುರಾಳಿಗಳಿಗೂ, ಸಾಹುಕಾರಗೆ ಸಚಿವ ಸ್ಥಾನ ಕೊಡಲು ಅಡ್ಡಗಾಲು ಹಾಕಿದವರಿಗೆ ಸಂದೇಶ ರವಾನಿಸಲು ಜಲ ಸಂಪನ್ಮೂಲ ಖಾತೆಯನ್ನು ಪಟ್ಟು ಹಿಡಿದು ಪಡೆದುಕೊಂಡರು. ಇತ್ತೀಚಿಗಿನ ಕೆಲ ಬೆಳವಣಿಗೆಯಿಂದ ರಮೇಶ್ ಜಾರಕಿಹೊಳಿ ಹಾಗೂ ಸಿಎಂ ನಡುವೆ ಮುನಿಸು ಕೂಡ ಜಾಸ್ತಿಯಾಗಿತ್ತು. ಜಾರಕಿ ಹೊಳಿ ಬೆಳಗಾವಿ ಲೋಕ ಸಭಾ ಕ್ಷೇತ್ರದ ಟಿಕೆಟ್ ತನ್ನ ಮಗನಿಗೆ ಪಡೆಯಲು ಯತ್ನಿಸಿದ್ದರು. ಇದು ಬಿಜೆಪಿಯಲ್ಲಿ ಮುನಿಸಿಗೆ ಕಾರಣವಾಗಿತ್ತು. ಇದನ್ನು ಅರಿತು ಜಾರಕಿಹೊಳಿ ಸಿಡಿ ಬಿಡುಗಡೆ ಮುಹೂರ್ತ ಇಟ್ಟಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

ಪಕ್ಷಾಂತರ ವೇಳೆ ಯಾವುದೇ ಒತ್ತಡಗಳಿಗೆ ಬಗ್ಗದೇ ಬಿಜೆಪಿ ಸರ್ಕಾರ ರಚನೆಗೆ ಪಾತ್ರವಾಗಿದ್ದ ಸಾಹುಕಾರನ್ನು ಬಗ್ಗಿಸುವ ಹಾದಿ ಕೆಲವು ವಿರೋಧಿಗಳಿಗೆ ಗೊತ್ತಿತ್ತು. ಹೀಗಾಗಿ ಜಲ ಸಂಪನ್ಮೂಲ ಖಾತೆ ಹೊಂದಿದ ಸಾಹುಕಾರನಿಗೆ ಜಲಸಂಪನ್ಮೂಲ ಪ್ರಾಜೆಕ್ಟ್ ಡಾಕುಮೆಂಟರಿ ಮಾಡುವ ಸೋಗಿನಲ್ಲಿ ಪಲ್ಲಂಗದ ಮೇಲೆ ಮಲಗಿಸುವ "ಆಪರೇಷನ್ ಜಾರಿ ಬೀಳು" ಪ್ರಾಜೆಕ್ಟ್ ನಲ್ಲಿ ಕಲ್ಯಾಣ ಕರ್ನಾಟಕದ ಸಾಹುಕಾರ ತಗಲಾಕ್ಕೊಂಡಿದ್ದಾರೆ ಎನ್ನಲಾಗಿದೆ.

 ಇದು ಸೀಕ್ರೆಟ್ ಆಪರೇಷನ್

ಇದು ಸೀಕ್ರೆಟ್ ಆಪರೇಷನ್

ಸಾಹುಕಾರ ಪಲ್ಲಂಗ ದಾಟದ ವಿಡಿಯೋ ಸೂಕ್ಷ್ಮವಾಗಿ ಗಮನಿಸಿದಾಗ ಕೆಲ ತಿಂಗಳ ಹಿಂದೆ ನಡೆದಿರುವ ಸೀಕ್ರೇಟ್ ಆಪರೇಷನ್ ಎಂದು ಭಾಸವಾಗುತ್ತದೆ. ಇಬ್ಬರೂ ಮಲಗಿರುವ ಸೆಲ್ಫಿ ಚಿತ್ರಗಳ ಮೂಲ ಇಷ್ಟೇ. ಸೀಕ್ರೇಟ್ ವಿಡಿಯೋ ರೆಕಾರ್ಡ್ ಮಾಡುವ ಆಪ್ ಗಳಿವೆ. ಮೊಬೈಲ್ ನಲ್ಲಿ ವಿಡಿಯೋ ಪ್ರಸಾರವಾಗುತ್ತಿರುತ್ತದೆ. ಆದರೆ ವಾಸ್ತವದಲ್ಲಿ ರೆಕಾರ್ಡ್ ಆಗುತ್ತಿರುತ್ತದೆ. ಹೀಗಾಗಿ ಪಲ್ಲಂಗದ ಆಟ ಆಡಲು ಪ್ರೇರಪಿಸುವ ಸಲುವಾಗಿ ಸೆಕ್ಸ್ ವಿಡಿಯೋ ತೋರಿಸುವ ನೆಪದಲ್ಲಿ ಸ್ವತಃ ಆ ಹುಡುಗಿ ಇಲ್ಲವೇ ರಮೇಶ್ ಜಾರಕಿ ಹೊಳಿ ಹಿಡಿದ ಮೊಬೈಲ್ ನಲ್ಲಿಯೇ ವಿಡಿಯೋ ರೆಕಾರ್ಡ್ ಆಗಿರುವ ಸಾಧ್ಯತೆ ಇದೆ. ಈ ವಿಡಿಯೋ ಗಮನಿಸಿದರೆ ಇದು ಅರ್ಥ ವಾಗುತ್ತದೆ. ಇನ್ನು ಅವರು ಮಂಚದ ಮೇಲೆ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ವಿಡಿಯೋಗಳು, ಸೀಕ್ರೇಟ್ ವಿಡಿಯೋ ರೆಕಾರ್ಡ್ ನಲ್ಲಿ ಮಾಡಿದಂತಿದೆ. ಇತ್ತೀಚೆಗೆ ವಿನೂತನ ಸೀಕ್ರೇಟ್ ವಿಡಿಯೋ ರೆಕಾರ್ಡ್ ಗಳು ಬಂದಿವೆ. ಮೊಬೈಲ್ ಚಾರ್ಜರ್, ಬಲ್ಟ್, ಪವರ್ ಬ್ಯಾಂಕ್, ಈ ಮಾದರಿಯ ಸೀಕ್ರೇಟ್ ವಿಡಿಯೋ ರೆಕಾರ್ಡ್ ರನ್ನು ಕೊಠಡಿಗೆ ಮೊದಲೇ ಫಿಕ್ಸ್ ಮಾಡಲಾಗಿದೆ. ಹೀಗಾಗಿ ರಮೇಶ್ ಜಾರಕಿ ಹೊಳಿಯ ಸೆಲ್ಪಿ ಲೈಂಗಿಕ ವಿಡಿಯೋ ಹಾಗೂ ಸ್ಟಿಂಗ್ ಆಪರೇಷನ್ ಕ್ಯಾಮರಾ ವಿಡಿಯೋಗಳ ನಡುವಿನ ವ್ಯತ್ಯಾಸ ಕಾಣುತ್ತದೆ.

 ಕಾರ್ಯಾಚರಣೆಯಲ್ಲಿ ನುರಿತವರು

ಕಾರ್ಯಾಚರಣೆಯಲ್ಲಿ ನುರಿತವರು

ಈ ವಿಡಿಯೋ ನೋಡಿದರೆ ಕೇವಲ ಒಂದೆರಡು ದಿನದಲ್ಲಿ ಆಗಿಲ್ಲ. ಕೆಲವು ತಿಂಗಳು ಕಾರ್ಯಚರಣೆ ನಡೆದಿರವುದು ಗೋಚರಿತ್ತದೆ. ಮಾತ್ರವಲ್ಲ, ಸಚಿವರನ್ನು ಖೆಡ್ಡಾಗಿ ಬೀಳಿಸಲು ಹುಡುಗಿಯನ್ನು ಒಪ್ಪಿಸಿರಬೇಕು. ಈ ವಿಡಿಯೋ ನೋಡಿದರೆ 'ಸ್ಟಿಂಗ್ ಪರಿಣಿತರು' ಇದರ ಹಿಂದೆ ಕಾರ್ಯ ನಿರ್ವಹಿಸಿರುವ ನೆರಳು ಕಾಣುತ್ತದೆ. ಹಾಸಿಗೆ ಹಂಚಿಕೊಂಡಿರುವ ಯುವತಿಗೆ ಮೊಬೈಲ್ ವಿಡಿಯೋ ರೆಕಾರ್ಡ್ ಆಪ್ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ. ಆನಂತರ ಪ್ರಾಜೆಕ್ಟ್ ಹೆಸರಿನಲ್ಲಿ ಜಾರಕಿ ಹೊಳಿ ಭೇಟಿ ಮಾಡುವ ಪ್ರಯತ್ನ ನಡೆದಿದೆ. ಯುವತಿ ಜತೆ ಕಾಮ ತೀರಿಸಿಕೊಳ್ಳುವ ಸಾಹುಕಾರನ ಹೆಬ್ಬಯಕೆ, ಖೆಡ್ಡಾಗೆ ಬೀಳಿಸುವ ಯುವತಿಯ ಮಹಾ ಪ್ಲಾನ್ ಎರಡೂ ಕೆಲ ತಿಂಗಳ ಹಿಂದೆಯೇ ಯಶಸ್ವಿಯಾದಂತಾಗಿದೆ. ಎರಡು ಪಕ್ಷಗಳ ನಾಯಕರಿಗೆ ಬಗ್ಗದ ಸಾಹುಕಾರ ಕೇವಲ ಹೆಣ್ಣಿನ ಜತೆ ಹಾಸಿಗೆ ಹಂಚಿಕೊಂಡು ರಾಜಕೀಯ ಭವಿಷ್ಯಕ್ಕೆ ಎಳ್ಳು ನೀರು ಬಿಟ್ಟು ಕೊಂಡಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಎದುರಾಳಿಗಳ 'ಕೈ'ಯಾರೆ ನೀಡಿದ ಸುಫಾರಿ ಫಲ ನೀಡಿದೆ. ಇದು ಕರ್ನಾಟಕ ರಾಜಕೀಯಕ್ಕೆ ಒಳ್ಳೆಯ ಭವಿಷ್ಯವಿಲ್ಲ ಎಂಬುದರ ಮುನ್ಸೂಚನೆ ಕೂಡ.

English summary
Irrigation minister Ramesh Jarakiholi trapped because of his weakness towards women. We under go detail analysis of how he may get honey trapped using advanced gadgets,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X