ಬಿಎಸ್ವೈ ಮತ್ತೆ ಸಿಎಂ: ಧಾರ್ಮಿಕ ಪೀಠದಲ್ಲಿ ಕೂತು ರಂಭಾಪುರಿ ಶ್ರೀ ನುಡಿದ ಭವಿಷ್ಯ

Recommended Video

      ಬಿ ಎಸ್ ಯಡಿಯೂರಪ್ಪನವರ ಬಗ್ಗೆ ಭವಿಷ್ಯ ನುಡಿದ ರಂಭಾಪುರಿ ಶ್ರೀಗಳು | Oneindia Kannada

      ತುಮಕೂರು, ಜುಲೈ 5: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.

      ಬುಧವಾರ (ಜುಲೈ 4) ತುಮಕೂರು ಜಿಲ್ಲೆ ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ರಂಭಾಪುರಿ ಶ್ರೀಗಳು, ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ಯಡಿಯೂರಪ್ಪನವರಿಗೆ ಮಹಾಯೋಗ ಕೂಡಿ ಬರಲಿದೆ, ಅವರು ಮತ್ತೆ ರಾಜ್ಯದ ಸಿಎಂ ಆಗಲಿದ್ದಾರೆಂದು ಹೇಳಿದ್ದಾರೆ.

      ಯಡಿಯೂರಪ್ಪನವರ ಜಾತಕ, ಕುಂಡಲಿ ಕೂಲಂಕುಷವಾಗಿ ಅವಲೋಕಿಸಿ, ಈ ಮಾತನ್ನು ಹೇಳುತ್ತಿದ್ದೇನೆಂದು ರಂಭಾಪುರಿ ಶ್ರೀಗಳು ನುಡಿದಿದ್ದಾರೆ. ಬಿಎಸ್ವೈ ಮತ್ತೆ ಸಿಎಂ ಆಗಲಿದ್ದಾರೆಂದು ಶ್ರೀಗಳು ಹೇಳುತ್ತಿದ್ದಂತೇ, ಕಾರ್ಯಕ್ರಮದಲ್ಲಿ ನೆರೆದಿದ್ದವರು ಭಾರೀ ಚಪ್ಪಾಳೆಯೊಂದಿಗೆ ಹರ್ಷ ವ್ಯಕ್ತಪಡಿಸಿದರು.

      Rambhapuri Seer predicts Yeddyurappa will become CM again

      ಯಡಿಯೂರಪ್ಪನವರ ದಿಟ್ಟತನ ಎಲ್ಲರಿಗೂ ಮಾದರಿ, ಅವರ ಕುಂಡಲಿಯ ಪ್ರಕಾರ ಅವರಿಗೆ ಉಜ್ವಲವಾದ ಭವಿಷ್ಯವಿದೆ. ಅಕ್ಟೋಬರ್ ಎರಡನೇ ವಾರದ ಅಪೂರ್ವ ಘಟ್ಟದಲ್ಲಿ ಮತ್ತೆ ಅವರು ರಾಜ್ಯದ ಸಿಎಂ ಆಗಲಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶ್ರೀಗಳು ಹೇಳಿದಿದ್ದಾರೆ.

      ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಬೆಂಗಳೂರು ಗೋವಿಂದರಾಜ ನಗರ ಕ್ಷೇತ್ರದ ಶಾಸಕ ವಿ ಸೋಮಣ್ಣ, ಮತ್ತೊಮ್ಮೆ ಯಡಿಯೂರಪ್ಪನವರು ಮಠಕ್ಕೆ ಬರುವಾಗ ಸಿಎಂ ಆಗಿ ಬರಬೇಕು, ಅದಕ್ಕೆ ಪೀಠಾಧಿಪತಿಗಳ ಮತ್ತು ಜನರ ಆಶೀರ್ವಾದ ಬೇಕೆಂದು ಆಗ್ರಹಿಸಿದರು.

      ವೇದಿಕೆಯಲ್ಲಿದ್ದ ಯಡಿಯೂರಪ್ಪ, ಪಂಚಪೀಠಗಳ ಪೈಕಿ ಉಪಸ್ಥಿತರಿದ್ದ ನಾಲ್ವರು ಶ್ರೀಗಳು ಆಶೀವಾದ ಪಡೆದರು. ಮುಖ್ಯಮಂತ್ರಿ ಆಗಬೇಕು ಎನ್ನುವ ಯಡಿಯೂರಪ್ಪನವರ ಕನಸು ಶೀಘ್ರದಲ್ಲೇ ನೆರವೇರಲಿದೆ ಎಂದು ಕಾಡುಸಿದ್ದೇಶ್ವರ ಮಠದ ಶ್ರೀಗಳೂ ಈ ಸಂದರ್ಭದಲ್ಲಿ ನುಡಿದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+