ಕಸ ವಿಲೇವಾರಿ ಘಟಕದ ವಿರುದ್ಧ ಗೊರೂರಲ್ಲಿ ಪ್ರತಿಭಟನೆ

Posted By:
Subscribe to Oneindia Kannada

ರಾಮನಗರ, ಡಿಸೆಂಬರ್ 07 : ವೈಜ್ಞಾನಿಕ ಕಸ ಸಂಸ್ಕರಣಾ ಘಟಕ ಸ್ಥಾಪನೆ ವಿರೋಧಿಸಿ ಮಾಗಡಿ ತಾಲೂಕಿನ ಗೊರೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಗೆದು ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಸೋಮವಾರ ಬಿಬಿಎಂಪಿ ಕಸ ಸುರಿಯುವ ಘಟಕ ಸ್ಥಾಪನೆ ಹಿನ್ನೆಲೆಯಲ್ಲಿ ಭೂಮಿ ಪೂಜೆ ಮಾಡಲು ಮುಂಜಾನೆ 5 ಗಂಟೆಗೆ ಸತಾರಂ ಕಂಪನಿ ಅಧಿಕಾರಿಗಳು ಬಂದಾಗ ಪೂಜೆ ಮಾಡದಂತೆ ಗ್ರಾಮಸ್ಥರು ತಡೆಯೊಡ್ಡಿದ್ದರು. ಇಂದು ಪುನಃ ಅಧಿಕಾರಿಗಳು ಆಗಮಿಸುತ್ತಾರೆ ಎಂಬ ಸುದ್ದಿ ತಿಳಿದು ರಸ್ತೆಗಳನ್ನು ಅಗೆದು ಹಾಕಲಾಗಿದೆ. [ಬೆಂಗಳೂರು ಕಸಕ್ಕೆ ಗೊರೂರಿನ ಗ್ರಾಮಸ್ಥರ ವಿರೋಧ]

garbage

ಗೊರೂರಿನ 45 ಎಕರೆ ಪ್ರದೇಶದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸತಾರಾಂ ಕಂಪನಿಗೆ ಗುತ್ತಿಗೆ ನೀಡಿದೆ. ಆದರೆ, ಗ್ರಾಮದಲ್ಲಿ ವಿಲೇವಾರಿ ಘಟಕ ನಿರ್ಮಾಣ ಮಾಡಬಾರದು ಎಂದು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.[ನಮ್ಮ ಹೆಣದ ಮೇಲೆ ಕಸ ಸುರೀರಿ]

ನೆಲಮಂಗಲ ಕ್ಷೇತ್ರದ ಶಾಸಕ ಶ್ರೀನಿವಾಸಮೂರ್ತಿ (ಜೆಡಿಎಸ್) ಅವರು ಸಹ ಸ್ಥಳಕ್ಕೆ ಆಗಮಿಸಿದ್ದು ಗ್ರಾಮಸ್ಥರ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ. ಬಿಬಿಎಂಪಿ ಗ್ರಾಮದಲ್ಲಿ ಕಸ ಸಂಸ್ಕರಣಾ ಘಟಕ ಸ್ಥಾಪನೆ ಮಾಡಬಾರದು ಎಂದು ಒತ್ತಾಯಿಸುತ್ತಿದ್ದಾರೆ. [ನೋಡಿದಲ್ಲಿ ಟ್ರಾಫಿಕ್ ಜಾಮ್, ಗಬ್ಬು ನೆತ್ತಿಗೇರಿಸುವ ಕಸ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Goruru villagers protesting against set up a dump yard. BBMP and Karnataka government plans to set up garbage dumping unit at Goruru village of Magadi Taluk, Ramanagara district.
Please Wait while comments are loading...