ಮಠ ಎದುರಿಸುತ್ತಿರುವ ಸಮಸ್ಯೆಯಿಂದ ದಕ್ಷರು ಸಿಕ್ಕಿದ್ದಾರೆ: ರಾಘವೇಶ್ವರ ಶ್ರೀ

Written By:
Subscribe to Oneindia Kannada

ಬೆಂಗಳೂರು, ಜೂ 14 : ಗಿರಿನಗರದ ರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ರಾಘವೇಶ್ವರ ಭಾರತೀ ಶ್ರೀಗಳ ಸಮ್ಮುಖದಲ್ಲಿ ರಾಮಚಂದ್ರಾಪುರ ಮಠದ ಶಾಸನತಂತ್ರ ವ್ಯವಸ್ಥೆ 'ರಾಮರಾಜ್ಯ' ಹಾಗೂ ಮಹಾಮಂಡಲದ ಪುನಾರಚನೆ ಪ್ರಕ್ರಿಯೆ ಮಂಗಳವಾರ (ಜೂ 14) ಸಂಪನ್ನವಾಗಿದೆ.

ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದ ರಾಘವೇಶ್ವರ ಶ್ರೀಗಳು, ಮಠದ ಸಮಾಜಮುಖೀ ಕಾರ್ಯಗಳನ್ನು ನಿರ್ವಹಿಸಲು ಕೆಲಸದ ಮೇಲೆ ಪ್ರೇಮ ಹಾಗು ಫ್ರೇಮ್(ಚೌಕಟ್ಟು) ಬೇಕು ಎಂಬ ಕಾರಣಕ್ಕಾಗಿ ಶಾಸನತಂತ್ರ ವ್ಯವಸ್ಥೆಯನ್ನು ರೂಪಿಸಲಾಗಿದೆ. ಮಠದ ವ್ಯವಸ್ಥೆ ನಿಂತ ನೀರಾಗಬಾರದು ಎಂಬ ಕಾರಣಕ್ಕಾಗಿ ವ್ಯವಸ್ಥೆಯನ್ನು ಪುನರ್ ರಚಿಸಲಾಗಿದೆ. (ಹವ್ಯಕರ ಸಭೆಯಲ್ಲಿ ಮಾರಾಮಾರಿ, ಪ್ರಕರಣ ದಾಖಲು)

Ramachandrapura Mutt re structured committee members for Mutt's various section

ಕಳೆದ 2-3ವರ್ಷಗಳಿಂದ ಮಠ ಎದುರಿಸುತ್ತಿರುವ ಸವಾಲುಗಳಿಂದಾಗಿ ಹಲವು ದಕ್ಷರಾದ ಕಾರ್ಯಕರ್ತರು ಸಿಗುವಂತೆ ಮಾಡಿದ್ದು, ಹಿರಿಯರ ಜೊತೆ ಅನೇಕ ಉತ್ಸಾಹಿ, ಯುವಮುಖಗಳು ವ್ಯವಸ್ಥೆಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಠದ ಲೋಕಹಿತ ಕಾರ್ಯಗಳು ಈ ವ್ಯವಸ್ಥೆಯಿಂದ ಉತ್ತಮರೀತಿಯಲ್ಲಿ ಸಂಪನ್ನವಾಗಲಿ ಎಂದು ರಾಘವೇಶ್ವರ ಶ್ರೀಗಳು ಆಶಿಸಿದ್ದಾರೆ.

ಹಿರಿಯರು, ಅನುಭವಿಗಳು ಹಾಗೂ ಯುವಕರಿಂದ ಕೂಡಿದ ಶಾಸನ ತಂತ್ರ ವ್ಯವಸ್ಥೆಯನ್ನು ರಾಮಚಂದ್ರಾಪುರ ಮಠ ಪುನರಾರಚಿಸಿದೆ. ಪಟ್ಟಿ ಇಂತಿದೆ:

ಸಮ್ಮುಖ ಸರ್ವಾಧಿಕಾರಿ - ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಲ್
ಮುಖ್ಯಕಾರ್ಯನಿರ್ವಹಣಾಧಿಕಾರಿ - ನಿವೃತ್ತ ಪೊಲೀಸ್ ಅಧೀಕ್ಷಕ ಕೆ ಜಿ ಭಟ್
ಕಾರ್ಯದರ್ಶಿ - ಜಯರಾಮ್ ಕೋರಿಕ್ಕಾರ್ ಮತ್ತು ಗಣೇಶ್ ಜೆ ಎಲ್
ಆರ್ಥಿಕ ಕಾರ್ಯದರ್ಶಿ - ಮೋಹನ ಹೆಗಡೆ
ಲೇಖ ಕಾರ್ಯದರ್ಶಿ - ಆರ್ ಡಿ ಶಾಸ್ತ್ರಿ
ಗಣ್ಯ ಸಂಪರ್ಕ ಕಾರ್ಯದರ್ಶಿ - ಕೆಕ್ಕಾರು ರಾಮಚಂದ್ರ ಭಟ್
ಕಾಮದುಘಾ ಕಾರ್ಯದರ್ಶಿ - ಡಾ ವೈ ವಿ ಕೃಷ್ಣಮೂರ್ತಿ
ಗೋಶಾಲಾ ಕಾರ್ಯದರ್ಶಿ - ಡಾ. ಶಾರದಾ ಜಯಗೋವಿಂದ
ಪ್ರಕಾಶನ ಕಾರ್ಯದರ್ಶಿ - ಡಾ. ಗಜಾನನ ಶರ್ಮ
ಶ್ರೀವಿಶ್ವಕೋಶ ಕಾರ್ಯದರ್ಶಿ - ವಿದ್ವಾನ್ ಜಗದೀಶ ಶರ್ಮ
ವಿದ್ಯಾ ಕಾರ್ಯದರ್ಶಿ - ಪ್ರಮೋದ್ ಪಂಡಿತ್
ಉಲ್ಲೇಖ ಕಾರ್ಯದರ್ಶಿ - ಗೋವಿಂದರಾಜ್ ಕೋರಿಕ್ಕಾರ್
ಗ್ರಾಮರಾಜ್ಯ ಕಾರ್ಯದರ್ಶಿ - ಕೃಷ್ಣಪ್ರಸಾದ್ ಅಮ್ಮಂಕಲ್ಲು
ಮಾಧ್ಯಮ ಕಾರ್ಯದರ್ಶಿ - ರಾಮಚಂದ್ರ ಅಜ್ಜಕಾನ
ಅಂತರ್ಜಾಲ ಕಾರ್ಯದರ್ಶಿ - ಸತ್ಯನಾರಾಯಣ ಭಟ್
ಹವ್ಯಕ ಮಹಾಮಂಡಲದ ಅಧ್ಯಕ್ಷ - ಈಶ್ವರೀ ಬೇರ್ಕಡವು
ಕಾರ್ಯದರ್ಶಿ - ಹರಿಪ್ರಸಾದ್ ಪೆರಿಯಪ್ಪು
ಮೂಲಮಠ ಅಶೋಕೆ ಅಧ್ಯಕ್ಷ - ಆರ್ ಎಸ್ ಹೆಗಡೆ ಹರಗಿ
ಶಿಷ್ಯಭಾವ ಕಾರ್ಯದರ್ಶಿ - ಅನುರಾಧಾ ಪಾರ್ವತಿ
ಮಹಾನಂದಿ ಗೋಲೋಕದ ಅಧ್ಯಕ್ಷ - ಕೃಷ್ಣಪ್ರಸಾದ್ ಎಡಪ್ಪಾಡಿ

ಈ ಮೇಲಿನವರ ಕಾರ್ಯಾವಧಿ ಗುರುಪೂರ್ಣಿಮೆ ದಿನದಿಂದ ಮೂರು ವರ್ಷಗಳದ್ದಾಗಿರುತ್ತದೆ. ಇದೇ ಸಂದರ್ಭದಲ್ಲಿ ಈ ವರ್ಷದ ಚಾತುರ್ಮಾಸ್ಯವನ್ನು ಬೆಂಗಳೂರಿನ ಶಾಖಾಮಠದಲ್ಲಿ "ಗೋ ಚಾತುರ್ಮಾಸ್ಯ"ವಾಗಿ ನಡೆಸಲು ನಿರ್ಧರಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ramachandrapura Mutt re structured committee members for Mutt's various section.
Please Wait while comments are loading...